ಬೆಂಗಳೂರು: ಸದ್ಯದಲ್ಲಿಯೇ ಒಳ್ಳೆಯ ಸುದ್ದಿ ಬರಲಿದೆ, ಸ್ವಲ್ಪ ಕಾದು ನೋಡಿ ಎನ್ನುವ ಮೂಲಕ ಮೈತ್ರಿ ಸರ್ಕಾರ ಪತನಗೊಂಡು ಶೀಘ್ರದಲ್ಲಿಯೇ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸುಳಿವು ನೀಡಿದ್ದಾರೆ.
ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಮೊದ ಮೊದಲು ನಿರಾಕರಿಸಿದರಾದರೂ ನಂತರ ಎಲ್ಲ ಸರಿ ಇದೆ. ಒಳ್ಳೆ ಸುದ್ದಿ ಬರುತ್ತದೆ ಸ್ವಲ್ಪ ಕಾದುನೋಡಿ ಸದ್ಯದಲ್ಲೇ ದೊಡ್ಡವರು ಸುದ್ದಿಗೋಷ್ಠಿಯನ್ನು ಮಾಡಲಿದ್ದಾರೆ ಎಂದು ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸುವ ಸುಳಿವು ನೀಡಿದರು.
ಶಾಸಕರ ರಾಜೀನಾಮೆ ವಿಷಯ, ಯಡಿಯೂರಪ್ಪ ರಾಜಭವನಕ್ಕೆ ತೆರಳಲಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನಿರಾಣಿ, ಸದ್ಯದ ರಾಜಕೀಯ ವಿದ್ಯಮಾನಗಳು ಮಳೆಗಾಲದ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ ಎಂದರು.