ವಿಜಯಪುರ: ಕೊರೊನಾ ವೈರಸ್ ಕಾಯಿಲೆಯಿಂದ ವಿಶ್ವವನ್ನು ರಕ್ಷಿಸುವಂತೆ ಕೋರಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಇಷ್ಟಲಿಂಗ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ 7 ಗಂಟೆಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ನಾಡಿನ ಪೂಜ್ಯ ಮಠಾಧೀಶರ ಕರೆಗೆ ಓಗೊಟ್ಟು ಮಾಜಿ ಸಚಿವ ಎಂ.ಬಿ.ಪಾಟೀಲ್ ಇಡೀ ವಿಶ್ವವನ್ನು ಕೊರೊನಾದಿಂದ ರಕ್ಷಿಸುವಂತೆ ಪ್ರಾರ್ಥಿಸಿದರು.
ಕೈಯಲ್ಲಿ ಲಿಂಗ ಹಿಡಿದು ಬಿಲ್ವಪತ್ರೆ, ಹೂಗಳನ್ನು ಹಾಕಿ ಲಿಂಗ ಪೂಜೆ ಸಲ್ಲಿಸಿದರು.