ETV Bharat / state

ಗಟ್ಟಿಮೇಳ ಪವನ್ ವಿಡಿಯೋ ವೈರಲ್, ಟ್ವೀಟ್ ಮೂಲಕ ಸಿದ್ದರಾಮಯ್ಯ ಪ್ರತಿಕ್ರಿಯೆ - ಗಟ್ಟಿಮೇಳ ಪವನ್ ವಿಡಿಯೋ ವೈರಲ್

ಪವನ್ ಅವರ ಈ ವಿಡಿಯೋ ನಿನ್ನೆಯಿಂದ ಅತಿ ಹೆಚ್ಚು ವೈರಲ್ ಆಗುತ್ತಿದೆ. ಅಲ್ಲದೇ, ರಾಜಕಾರಣಿಗಳಿಗೂ ತಲುಪಿದೆ. ಪ್ರತಿಪಕ್ಷದವರ ಆರೋಪಕ್ಕೆ ಈ ವಿಡಿಯೋ ಮತ್ತಷ್ಟು ಪೂರಕವಾಗಿದೆ..

Pavan tweet
Pavan tweet
author img

By

Published : Apr 24, 2021, 8:47 PM IST

ಬೆಂಗಳೂರು : ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ.

ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ಎಲ್ಲೆಡೆ ವೈರಲ್​ ಆಗಿದ್ದು, ವಿಡಿಯೋ ನೋಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.

'ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪವನ್ ಅವರ ಈ ವಿಡಿಯೋ ನಿನ್ನೆಯಿಂದ ಅತಿ ಹೆಚ್ಚು ವೈರಲ್ ಆಗುತ್ತಿದೆ. ಅಲ್ಲದೇ, ರಾಜಕಾರಣಿಗಳಿಗೂ ತಲುಪಿದೆ. ಪ್ರತಿಪಕ್ಷದವರ ಆರೋಪಕ್ಕೆ ಈ ವಿಡಿಯೋ ಮತ್ತಷ್ಟು ಪೂರಕವಾಗಿದೆ.

ವಿರೋಧ ಪಕ್ಷಗಳು ಸರ್ಕಾರವನ್ನ ಎಚ್ಚರಿಸಲು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರ ಮಾತ್ರ ಜನರ ಹಾಗೂ ಕೊರೊನಾ ರೋಗಿಗಳ ಆತಂಕ ನೀಗಿಸಲು ಪ್ರಯತ್ನ ನಡೆಸುತ್ತಲೇ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.