ETV Bharat / state

ರಾಜಕೀಯ ವ್ಯಕ್ತಿಗಳಿಗೆ ರಾಜ ಮರ್ಯಾದೆ ಕೊಟ್ಟಿರೋದು ಖಂಡನೀಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

author img

By

Published : Jul 19, 2023, 6:43 PM IST

ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : 17,18 ರಂದು ಕಾಂಗ್ರೆಸ್ ರಾಜಕೀಯ ಸಭೆಯಲ್ಲಿ ಅಧಿಕಾರ ದುರುಪಯೋಗ ಆಗಿದೆ. ಮಾನ ಮರ್ಯಾದೆ ಬಿಟ್ಟು ಪ್ರಿನ್ಸಿಪಲ್ ಸೆಕ್ರೆಟರಿಯಂಥ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರನ್ನ ರಾಜ್ಯ ಅಭಿವೃದ್ದಿ ಮಾಡಲು ಜನ ಆರಿಸಿ ಕಳುಹಿಸಿದ್ದಾರೆ. ಹಿಂದೆಂದೂ ಕೇಳರಿಯದಂತಹ ಸೇವಕರಂತೆ ಐಎಎಸ್ ಅಧಿಕಾರಿಗಳನ್ನ ಎಲ್ಲೂ ನೇಮಕ ಮಾಡಿಲ್ಲ. ಪ್ರೊಟೋಕಾಲ್ ಅಧಿಕಾರಿಗಳನ್ನ ಬಿಟ್ಟು ಇವರನ್ನ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ಕೊಲೆಗಳಾಗ್ತಿವೆ. ಆ ಬಗ್ಗೆ ಗಮನ ಇಲ್ಲ. ಇದನ್ನೆಲ್ಲ ಬಿಟ್ಟು ರಾಜಕೀಯ ವ್ಯಕ್ತಿಗಳಿಗೆ ರಾಜಮರ್ಯಾದೆ ಕೊಟ್ಟಿರೋದು ಖಂಡನೀಯ ಎಂದು ವಿಧಾನಸೌಧ ಲಾಂಜ್​ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸೇಡಿನ ರಾಜಕೀಯ ಮಾಡ್ತಿದೆ. ಇದು ದಮನಕಾರಿ ನೀತಿ. ಸ್ಪೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ.ನಾವು ನ್ಯಾಯವನ್ನ ಕೇಳಿದ್ವಿ, ಆದರೆ ಕೊಡ್ಲಿಲ್ಲ. ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೇವೆ. ನಮ್ಮ ಸದಸ್ಯರಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ಅನುಸರಿಸುತ್ತಿದೆ.

ನಮ್ಮ ಶಾಸಕರ ಅಮಾನತು ಖಂಡನೀಯ. ಕಾಂಗ್ರೆಸ್​ನವರು ಸ್ಪೀಕರ್ ಮೈಕ್ ಕಿತ್ತು ಹಾಕಿದ್ರು. ಸಿದ್ದರಾಮಯ್ಯ ವಿಧಾನಸಭೆ ಬಾಗಿಲು ಒದ್ದಿದ್ರು. ಆಗ ಇವ್ರನ್ನ ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ವಿಪಕ್ಷಗಳನ್ನ ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ಇವರಿಗೆ ಜನ ತಕ್ಕಪಾಠ ಕಲಿಸ್ತಾರೆ. ಸ್ಪೀಕರ್ ಇದನ್ನ ಎದುರಿಸಬೇಕಿತ್ತು. ಆದರೆ, ಡೆಪ್ಯೂಟಿ ಸ್ಪೀಕರ್ ಅವರನ್ನ ಕೂರಿಸಿ ಸ್ಪೀಕರ್ ಎದ್ದು ಹೋಗಿದ್ದಾರೆ. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣ. ಅವರನ್ನ ಮಂತ್ರಿಯನ್ನಾಗಿ ಮಾಡಬೇಕಿತ್ತು. ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದ್ರೆ, ನಾವೂ ಕೂಡ ಪ್ರೊಟೆಸ್ಟ್ ಮಾಡ್ತೀವಿ. ಈ‌ ಹೋರಾಟ ಜನರ ಬಳಿಗೆ ತೆಗೆದುಕೊಂಡು ಹೋಗ್ತೀವಿ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ: ವಿಧಾನಸೌಧದ ಕೆಂಗಲ್​ ಗೇಟ್​ನ ದ್ವಾರದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಮತ್ತಿತರ ಶಾಸಕರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದೋಖಾ, ದೋಖಾ ಕಾಂಗ್ರೆಸ್ ದೋಖಾ, ಮೋಸ, ಮೋಸ ಕಾಂಗ್ರೆಸ್ ಮೋಸ ಎಂದು ಘೋಷಣೆ ಕೂಗಿದರು.

ಬಿಜೆಪಿ ಪ್ರತಿಭಟನೆಗೆ ಜೆಡಿಎಸ್‌ ಸಾತ್​: ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ ರೇವಣ್ಣ ಸೇರಿದಂತೆ ಜೆಡಿಎಸ್‌ ಶಾಸಕರು, ಬಿಜೆಪಿ ಶಾಸಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ನಾವು ಸ್ಪೀಕರ್‌ಗೆ ಮನವಿ ಮಾಡುತ್ತೇವೆ: ಕರ್ನಾಟಕ ವಿಧಾನಸಭೆ ಗದ್ದಲದ ಬಗ್ಗೆ ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ವಿಧಾನಸಭೆಯಲ್ಲಿ ನಡೆದ ಗದ್ದಲ ದುರದೃಷ್ಟಕರ. ನಾವು ಕೆಲವು ಮಾರ್ಗಸೂಚಿಗಳನ್ನು, ಕೆಲವು ನಿಯಮಗಳನ್ನು ಸದನದಲ್ಲಿ ಹಾಕಿದ್ದೇವೆ. ಸದನದಲ್ಲಿ ಕೆಲವು ನಿಯಮಗಳಿವೆ. ಬಿಜೆಪಿ ಸದಸ್ಯರ ಪ್ರತಿಭಟನೆಯನ್ನು ಯಾರೂ ತಡೆಯುವುದಿಲ್ಲ.

ಆದರೆ ಅವರು ಅನುಸರಿಸಬೇಕಾದ ಕೆಲವು ಮೂಲಭೂತ ಶಿಸ್ತುಗಳಿವೆ. ಸ್ಪೀಕರ್​ ಕುರ್ಚಿಯ ಮೇಲೆ ದಾಳಿ ಮಾಡುವುದು ಕರ್ನಾಟಕ ವಿಧಾನಮಂಡಲದಲ್ಲಿ ನಾವು ಕಂಡಿರದ ಸಂಗತಿಯಾಗಿದೆ. ಆದರೆ, ಇದು ಸಂಭವಿಸಿದೆ. ಇದು ಅತ್ಯಂತ ದುರದೃಷ್ಟಕರ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಾವು ಸ್ಪೀಕರ್‌ಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.