ETV Bharat / state

ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ: ಹೆಚ್​​​ಡಿಕೆ - ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಿನ್ನೆ 22 ಮನೆ ಒಡೆದಿದ್ದಾರೆ. ಈ ಭಾಗದ ಶಾಸಕ ಮಂಜುನಾಥ್ ಹಾಗೂ ಬೆಂಬಲಿಗರು ನನ್ನ ಜೊತೆ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಸರ್ಕಾರದ ಕಣ್ಣು ತೆರೆಸಲು ಕಣ್ತೆರೆಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

author img

By

Published : Jul 31, 2021, 4:17 PM IST

Updated : Jul 31, 2021, 4:23 PM IST

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಿಂದ ನೊಂದ ರೈತರು ಮತ್ತು ನಿವೇಶನದಾರರೊಂದಿಗೆ ಸೋಮಶೆಟ್ಟಿಹಳ್ಳಿ ಮೈದಾನದಲ್ಲಿ ಇಂದು 'ಸಾಂತ್ವನ ಸಭೆ' ನಡೆಯಿತು.

ಈ ಸಭೆಯ ನಂತರ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಹೆಚ್​​​.ಡಿ. ಕುಮಾರಸ್ವಾಮಿ, ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ. ನಾನು ನೇರವಾಗಿ ಸಭೆ ಮಾಡುವಂತಿರಲಿಲ್ಲ. ಅಂತಹ ಇಕ್ಕಟ್ಟಿನಲ್ಲಿ 14 ತಿಂಗಳ ಕಾಲ ಸಿಎಂ ಆಗಿದ್ದೆ ಎಂದು ಬೇಸರದ ಮಾತುಗಳನ್ನಾಡಿದ್ದಾರೆ.

ನಾನು ಶ್ರೀಮಂತರ ಪರವಾಗಿರಲಿಲ್ಲ. ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಶಿವರಾಮ ಕಾರಂತ ವಿಚಾರವಾಗಿ ಶಾಸಕ ಮಂಜುನಾಥ್ ಸೇರಿದಂತೆ ಹಲವರು ಬಂದು ಭೇಟಿ ಮಾಡಿದರು. ಈ ನ್ಯಾಯ ಯುತವಾದ ಬೇಡಿಕೆಗಳ ಸಂಬಂಧ ಇಂದು ನಾನಿಲ್ಲಿ ಬಂದಿದ್ದೇನೆ.

ಅರ್ಕಾವತಿಯಲ್ಲಿ ಕರ್ಮಕಾಂಡವಾಗಿತ್ತು: ಹೆಚ್​ಡಿಕೆ

2006 ರಲ್ಲಿ ನಾನು ಸಿಎಂ ಆಗಿದ್ದಾಗ ಮೂರು ಬಡಾವಣೆಗಳನ್ನು ಘೋಷಣೆ ಮಾಡಿದೆ. ಅರ್ಕಾವತಿ ಬಡಾವಣೆಯಲ್ಲಿ ಕರ್ಮಕಾಂಡ ಆಗಿತ್ತು. 2013 ರಲ್ಲಿ ಅರ್ಕಾವತಿ ಬಡಾವಣೆ ಮುಗಿದ ಹೋದ ಅಧ್ಯಾಯ ಆಗಿತ್ತು. ಇವತ್ತು ಶಿವರಾಮ ಕಾರಂತ್ ಬಡಾವಣೆ ವಿಚಾರದಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಬಡಾವಣೆ ರಚನೆಯಲ್ಲಿ ಶೇ. 40 ಭಾಗವನ್ನು ರೈತರಿಗೆ ನೀಡಬೇಕು ಎಂಬ ನಿರ್ಧಾರ ಮಾಡಿದ್ದೆ. ಆದರೆ, ಇವತ್ತು ಯಾವ್ಯಾವ ನಿಯಮ‌ ಪಾಲನೆ ಆಗ್ತಾ ಇದೆ ಎಂಬುದು ಗೊತ್ತಿಲ್ಲ ಎಂದರು.

ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ನಿನ್ನೆ 22 ಮನೆ ಒಡೆದಿದ್ದಾರೆ. ಈ ಭಾಗದ ಶಾಸಕ ಮಂಜುನಾಥ್ ಹಾಗೂ ಬೆಂಬಲಿಗರು ನನ್ನ ಜೊತೆ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಸರ್ಕಾರದ ಕಣ್ಣು ತೆರೆಸಲು ಕಣ್ತೆರೆಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇವತ್ತಿನ ಸರ್ಕಾರ ಹಣದ ದಾಹದಲ್ಲಿದೆ. ಹಾಗಾಗಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ. ಮೇಲ್ನೋಟಕ್ಕೆ ಅಧಿಕಾರಿಗಳು ಸುಪ್ರೀಂಕೋರ್ಟ್ ತೀರ್ಪನ್ನು ಹೇಳುತ್ತಿದ್ದಾರೆ. ದಾಖಲೆ ಆಧಾರದ ಮೇಲೆ ನ್ಯಾಯಮೂರ್ತಿಗಳು ತೀರ್ಪು ನೀಡಿರುತ್ತಾರೆ ಎಂದರು.

ಸರ್ಕಾರಕ್ಕೆ ಹೈಕೋರ್ಟ್​​ ಛೀಮಾರಿ

ಜನಸಾಮಾನ್ಯರಿಗೆ ರಕ್ಷಣೆ ಇಲ್ಲ. ರಸ್ತೆ ಮಾಡಿದ್ದು ನನ್ನ ಸರ್ಕಾರದಲ್ಲಿ. ಆದರೆ, ಹೆಸರು ಬೇರೆಯವರು ತೆಗೆದುಕೊಂಡರು. ದಾಸರಹಳ್ಳಿಗೆ ಹಣ ಯಾವಾಗ ಬಿಡುಗಡೆ ಮಾಡುತ್ತೀರಾ ಅಂತ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದರು.

ಎನ್​​ಓಸಿ ಪಡೆಯಬೇಕಾದರೆ ಅವತ್ತಿನ ಅಧಿಕಾರಿಗಳಿಗೆ ಎಷ್ಟೆಷ್ಟು ದುಡ್ಡು ಕೊಟ್ಟಿದ್ದಾರೆ ಗೊತ್ತಿದೆ. ಕುಟುಂಬದ ನಿರ್ವಹಣೆಗೆ ಬೇರೆ ಬೇರೆ ಕಡೆಯಿಂದ ಬಂದಿದ್ದೀರಾ. ಅಷ್ಟೋ ಇಷ್ಟು ಹಣ ಉಳಿಸಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂದು ಕನಸು ಇಟ್ಟುಕೊಂಡಿರುವವರು ಇಂದು ಪರದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎನ್ ಓಸಿ ಮಾಡಿ ಕೊಡಬೇಕಾದರೆ ಗೊತ್ತಾಗಲಿಲ್ಲವೇ?. ನೀವು ( ಅಧಿಕಾರಿಗಳು) ಮಾಡಿದ ತಪ್ಪಿ ನಿಂದ ಜನ ಬೀದಿಗೆ ತಳ್ಳಿದ್ದೀರಾ. ಇದಕ್ಕೆ ಅಧಿಕಾರಿಗಳೇ ಕಾರಣ. ಈ ಲೇಔಟ್ ಮಾಡಲು 13 ಸಾವಿರ ಕೋಟಿ ರೂ. ಬೇಕು. ಭೂ ಸ್ವಾದೀನ ಪ್ರಕ್ರಿಯೆಗೆ ರೈತನಿಗೆ 948 ಕೋಟಿ ಹಣ ನೀಡಬೇಕು. ಕೋರ್ಟ್ ಮುಂದೆ ಸರಿಯಾದ ಮಾಹಿತಿ ನೀಡಬೇಕಿತ್ತು. ಕೋರ್ಟ್​ಗೆ ಸರಿಯಾದ ಮಾಹಿತಿ ನೀಡದೆ ಸರ್ಕಾರ ತಪ್ಪು ಮಾಡಿದೆ ಎಂದು ಕಿಡಿಕಾರಿದರು.

ನಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ.. ಸಾಂತ್ವನ ಹೇಳಲು ಬಂದಿದ್ದೇನೆ

ನಾನಿಲ್ಲಿ ರಾಜಕೀಯ ಮಾತನಾಡಬಾರದು. ನಿಮಗೆ ಸಾಂತ್ವನ ಹೇಳಲು ಬಂದಿದ್ದೇನೆ. ನಂದಿನಿ ಬಡಾವಣೆ ಒಡೆಯಬೇಕು ಎಂದಾಗಿತ್ತು. ಆದರೆ ಅದನ್ನು ದೇವೇಗೌಡರು ಉಳಿಸಿದರು. ದೇವೇಗೌಡರ ಕಾಲದಲ್ಲೇ ಸಕ್ರಮವಾಗಿತ್ತು ಎಂಬುದನ್ನು ನೆನಪಿಸಿದರು. ಈ ವೇದಿಕೆ ಮೂಲಕ ಬಿಡಿಎ ಹಾಗೂ ಅಧ್ಯಕ್ಷರಿಗೆ ಹೇಳುತ್ತೇನೆ. ಮೈತ್ರಿ ಸರ್ಕಾರ ಇದ್ದಾಗ ನಿಮ್ಮನ್ನು ಪ್ರಚೋದನೆ ಮಾಡಿದರು. ಆದರೆ, ಈಗ ಅಧ್ಯಕ್ಷರಾಗಿ ಬುಲ್ಡೇಜರ್ ಹತ್ತಿಸುತ್ತೇನೆ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಹೆಚ್ ಡಿಕೆ, ಇದನ್ನು ಉಳಿಸಲು ಹಲವಾರು ದಾರಿಗಳಿವೆ ಎಂದೂ ಎಚ್ಚರಿಸಿದ್ದಾರೆ.

ಬಡವರ ಮನೆ ಒಡೆಯಲು ಕ್ರಮ ತೆಗೆದುಕೊಳ್ಳಿ ಎನ್ನುವುದಲ್ಲ. ಬಡವರನ್ನು ಉಳಿಸಿ ಎಂದು ಹೇಳಬೇಕು. ಗೋದ್ರೇಜ್ ಅಪಾರ್ಟ್ ಮೆಂಟ್ ವಿಚಾರವಾಗಿ ಹಸಿರು ನ್ಯಾಯಾಧಿಕರಣ ತೀರ್ಪು ನೀಡಿದೆ. ಅನಧಿಕೃತ ಕಟ್ಟಡ ಅಂತ ಅದನ್ನು ಒಡೆಯರಿ ನೋಡೋಣ. ನಿಮ್ಮ ಹಣದ ದಾಹ ತೀರಿಸಿಕೊಳ್ಳಲು ನೀವು ಕೋರ್ಟ್ ಮುಂದೆ ಸುಳ್ಳು ಹೇಳಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಮನೆ ಒಡೆಯಲು ಬಂದರೆ ಸುಮ್ಮನೇ ಕೂರಬೇಡಿ

ಯಾವುದೋ ಒಂದು ಮನೆ ಒಡೆಯಲು ಬಂದಾಗ ಸುಮ್ಮನೆ ಕೂರಬೇಡಿ. ಸುಮ್ಮನೆ ಕೂರದೇ ಎಲ್ಲರೂ ಒಗ್ಗಟ್ಟಾಗಿರಿ. ಕೋರ್ಟ್ ಆದೇಶ ಮೀರೋದು ಬೇಡ. ದಾಖಲೆಗಳನ್ನು ಇಟ್ಟುಕೊಂಡು ಶಾಂತಿಯುತ ಹೋರಾಟ ಮಾಡಿ. ಬಿಡಿಎ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ. ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡಿ. ಅಮಾಯಕರ ಮನೆ ಹೊಡೆಯುವುದುನ್ನು ನಿಲ್ಲಿಸಿ. ಇದು ಅಮಾನವೀಯ ಘಟನೆ. ಪೊಲೀಸರಿಗೂ ಹೇಳುತ್ತೇನೆ. ಅಮಾಯಕರಿಗೆ ರಕ್ಷಣೆಗೆ ನೀವು ಇರುವುದು ಸರ್ಕಾರಕ್ಕಲ್ಲ. ಏಕಾಏಕಿ ಬುಲ್ಡೋಜರ್ ತೆಗೆದುಕೊಂಡು ಹೋದರೆ ಅವರೆಲ್ಲಾ ಎಲ್ಲಿ ಹೋಗಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ಮನವಿ ಪತ್ರವನ್ನು ನೀಡುತ್ತೇನೆ. ಸದ್ಯಕ್ಕೆ ಇರುವ ಮನೆಗಳನ್ನು ಹೊಡೆಯಬೇಡಿ ಎಂದು ನಿಮ್ಮ ಪರವಾಗಿ ಸಿಎಂಗೆ ಹೇಳುತ್ತೇನೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸೋಣ. ಯಾರು ಹೆದರಬಾರದು ಎಂದು ನಿವಾಸಿಗಳಿಗೆ ಧೈರ್ಯ ತುಂಬಿದರು.

ಶಾಸಕ ಮಂಜುನಾಥ್ ಮಾತನಾಡಿ, ಕಮರ್ಷಿಯಲ್ ಬಿಲ್ಡಿಂಗ್ ಬಿಟ್ಟು ಸಣ್ಣ ಪುಟ್ಟ ಜನರ ಮನೆ ನೆಲಸಮ ಮಾಡಿದ್ರು. ಬಫರ್ ಜೋನ್ ನಲ್ಲಿ ಕಟ್ಟಿರುವವರನ್ನು ಬಿಟ್ಟು ಇಲ್ಲಿ ನೆಲಸಮ ಮಾಡುತ್ತಿದ್ದಾರೆ. ನಾವು ಅರ್ಜಿ ನೀಡಲು 2022 ವರೆಗೆ ಇದೆ. ಆದರೆ ಒಂದು ಕಡೆ ಅರ್ಜಿ ತೆಗೆದುಕೊಳ್ಳುತ್ತಾರೆ ಮತ್ತೊಂದು ಕಡೆ ಮನೆ ಒಡೆಯುತ್ತಿದ್ದಾರೆ. ರಾಜಕಾಲುವೆ ಮೇಲೆ ಮನೆ ಕಟ್ಟಿದ್ದವರನ್ನು ಬಿಟ್ಟು ಇಲ್ಲಿ ಬಂದಿದ್ದಾರೆ ಎಂದರು.

Last Updated : Jul 31, 2021, 4:23 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.