ಆನೇಕಲ್ (ಬೆಂಗಳೂರು): ಲಾಕ್ಡೌನ್ ಮುಗಿಯುವುದರೊಳಗೆ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತದ ರುಚಿಯೊಂದಿಗೆ ದಂಡ ವಿಧಿಸಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಲಾಕ್ಡೌನ್ ಇದ್ದರೂ ಓಡಾಟ ಮಾಡುತ್ತಿದ್ದ ಬೈಕ್ ಮತ್ತು ಪಾದಚಾರಿಗಳಿಗೆ ಲಾಕ್ಡೌನ್ ಮಹತ್ವ ತಿಳಿಸಲಾಯಿತು.
![ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ಸಖತ್ ಗೂಸ](https://etvbharatimages.akamaized.net/etvbharat/prod-images/kn-bng-01-19-rules-fine-ka10020_19072020204709_1907f_1595171829_717.jpg)
ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಎಚ್ಚರಿಕೆಯೊಂದಿಗೆ ಸೂಕ್ತ ಕಾರಣವಿಲ್ಲದೆ ಓಡಾಟ ನಡೆಸುವವರಿಗೆ ದಂಡ ಹಾಕಿದರು. ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರರಿಗೆ 200 ರೂ. ದಂಡ ವಿಧಿಸಲಾಯಿತು.