ಕೆ.ಆರ್.ಪುರ( ಬೆಂಗಳೂರು): ಸರ್ಕಾರದ ಬಡವರಿಗೆ, ನಿರ್ಗತಿಕರಿಗೆ ವಿತರಿಸುತ್ತಿರುವ ಆಹಾರ ಸಾಮಗ್ರಿಗಳಲ್ಲಿ ಕಳಪೆ ಅಥವಾ ವಂಚನೆ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ ಖಡಕ್ ಎಚ್ಚರಿಕೆ ನೀಡಿದರು.
ಲಾಕ್ಡೌನ್ ಹಿನ್ನೆಲೆ ನಗರದಲ್ಲಿ ಸುಮಾರು 40 ಸಾವಿರ ಜನರಿಗೆ ರೇಷನ್ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲು ಮುಂಜಾಗ್ರತ ಕ್ರಮ ಕೈಗೊಂಡ ಹಿನ್ನೆಲೆ ಸಾವು - ನೋವಿನ ಪ್ರಮಾಣ ಕಡಿಮೆ ಇದೆ ಎಂದರು.
ಇನ್ನೂ ನಗರದಲ್ಲಿ ಸಚಿವ ಬೈರತಿ ಬಸವರಾಜ 40 ಸಾವಿರ ಕುಟುಂಬಗಳಿಗೆ ಪಡಿತರ ವಿತರಿಸಿದರು. ಕೆ.ಆರ್.ಪುರ ಕ್ಷೇತ್ರದ ಜನತೆಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ಸೋಮಣ್ಣ, ಸಚಿವ ಬೈರತಿ ಬಸವರಾಜ ವಿತರಿಸಿದರು.
ಕ್ಷೇತ್ರದ ಜನತೆಗೆ ಹಬ್ಬಗಳ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿತ್ತಿದ್ದ ಬೈರತಿ ಬಸವರಾಜ ಈ ಭಾರಿ ಭಾರತ ಲಾಕ್ ಡೌನ್ನಿಂದ ಜನರಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ ನೀಡಿದ್ದಾರೆ.
ಕಾರ್ಮಿಕ ಇಲಾಖೆ ವತಿಯಿಂದ ಒಂದು ಲಕ್ಷ ಕಿಟ್ ಬ್ಯಾಗ್ಗಳನ್ನು ತಯಾರಿಸಿದ್ದೇವೆ. ಪ್ರತಿ ದಿನ ಅರ್ಧ ಲೀಟರ್ ಹಾಲು ಕೂಡ ಕೊಡಲಾಗುತ್ತಿದೆ ಎಂದು ಸಚಿವ ಬೈರತಿ ಬಸವರಾಜು ವಿವರಿಸಿದರು.