ಬೆಂಗಳೂರು: ನಗರದ ಶೇಷಾದ್ರಿಪುರದ ಪೌರಕಾರ್ಮಿಕನ ಕುಟುಂಬವೊಂದು ಜನರಿಂದ ಪಡೆದ ದವಸ ಧಾನ್ಯದಿಂದ ಆಹಾರ ತಯಾರಿಸಿ ಬಡವರಿಗೆ ಹಂಚುತ್ತಿದ್ದಾರೆ.
ಕಸ ವಿಲೇವಾರಿ ಮಾಡುವ ಬಡ ಜನರೇ ಈಗ ಮೆಜೆಸ್ಟಿಕ್ ಸುತ್ತ-ಮುತ್ತ ಹಸಿದ ನೂರಾರು ಜನರಿಗೆ ಊಟದ ಪ್ಯಾಕ್ಗಳನ್ನು ವಿತರಿಸುತ್ತಿದ್ದಾರೆ. ಬಿಬಿಎಂಪಿ ಜೊತೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ಜಾನ್ ಹಾಗೂ ಆತನ ಕುಟುಂಬಸ್ಥರು ಈ ಅನ್ನ ನೀಡುವ ಕಾಯಕ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರು ವಸಂತ ನಗರ ಹಾಗೂ ಡಾಲರ್ಸ್ ಕಾಲೋನಿಗೆ ಪ್ರತಿದಿನ ಹೋಗಿ ಕಸ ಸಂಗ್ರಹಿಸುತ್ತಾರೆ. ಮನೆ ಮಾಲೀಕರು ನೀಡುವ ಹಣವೇ ಇವರ ತಿಂಗಳ ಸಂಬಳವಾಗಿದೆ.
ಜಾನ್ ಜೊತೆ ಪತ್ನಿ ಮಲ್ಲಿಕಾ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಇವರು ಲಾಕ್ಡೌನ್ನಿಂದಾಗಿ ಹಸಿವಿನಿಂದ ಬಳಲುತ್ತಿರುವುದನ್ನು ಕಂಡು ದಂಪತಿ ಹಸಿದವರಿಗೆ ಊಟ ನೀಡಬೇಕೆಂದು ನಿರ್ಧರಿಸಿದರು. ಈ ದಂಪತಿ ಆರಂಭದಲ್ಲಿ 50 ಜನರಿಗೆ ಮನೆಯಲ್ಲೇ ಅಡುಗೆ ಮಾಡಿ ಪಾರ್ಸೆಲ್ ಕಟ್ಟಿಕೊಂಡು ಸ್ಥಳಕ್ಕೆ ತೆರಳಿ ವಿತರಿಸುತ್ತಿದ್ದು, ಸಧ್ಯ ಈ ಕೆಲಸಕ್ಕೆ ಜಾನ್ ಸ್ನೇಹಿತರು ಕೂಡಾ ಸಾಥ್ ನೀಡಿದ್ದಾರೆ. ಇದರಂತೆ ದಿನಬಿಟ್ಡು ದಿನ 30 ಕೆ.ಜಿ.ರೈಸ್ ಬಾತ್ ಮಾಡಿ ವಿತರಿಸುತ್ತಿದ್ದಾರೆ. ನಮಗೆ ಕೊಟ್ಟಿರುವುದರಲ್ಲಿ ನಮ್ಮ ಕೈಲಾದಷ್ಟು ನಾವು ಸಹಾಯ ಮಾಡುತ್ತಿದ್ದೇವೆ. ಮೇ 3ರವರೆಗೂ ಆಹಾರ ವಿತರಿಸುವುದಾಗಿ ಈಟಿವಿ ಭಾರತ್ಗೆ ಜಾನ್ ತಿಳಿಸಿದ್ದಾರೆ.