ETV Bharat / state

ಕೆಐಎಎಲ್ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲು - KIAL Airport Customs Officers

ಕೆಐಎಎಲ್​ನ ಕಾರ್ಗೊ ಗೋಡೌನ್‌ನಲ್ಲಿ ಇರಿಸಲಾಗಿದ್ದ ಬರೋಬ್ಬರಿ 2.5 ಕೆ.ಜಿ. ಚಿನ್ನ ನಾಪತ್ತೆಯಾಗಿದ್ದು, ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐನ ಬೆಂಗಳೂರು ಎಸಿಬಿ ಘಟಕದಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

CBI
ಸಿಬಿಐ
author img

By

Published : Oct 18, 2020, 9:16 AM IST

Updated : Oct 18, 2020, 12:11 PM IST

ಬೆಂಗಳೂರು: ಕೆಐಎಎಲ್ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಬೆಂಗಳೂರು ಸಿಬಿಐನ ಬೆಂಗಳೂರು ಎಸಿಬಿ ಘಟಕದಲ್ಲಿ ಎಫ್​ಐಆರ್ ದಾಖಲಾಗಿದೆ. ಅಕ್ರಮ ಚಿನ್ನ ಸಾಗಣೆ ಯತ್ನ, ಹಲವು ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 2.5 ಕೆ.ಜಿ. ಚಿನ್ನವನ್ನ ಕೆಐಎಎಲ್​ನ ಕಾರ್ಗೊ ಗೋಡೌನ್‌ನಲ್ಲಿ ಇರಿಸಲಾಗಿತ್ತು. ಆದರೆ, ಸದ್ಯ ಇದು ನಾಪತ್ತೆಯಾಗಿದೆ.

ಹೀಗಾಗಿ ಇದು ಹೇಗೆ ನಾಪತ್ತೆಯಾಗಿದೆ. ಹೀಗಾಗಿ ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್​ಗಳಾದ ವಿನೋದ್ ಚಿನ್ನಪ್ಪ, ಕೆ.ಕೇಶವ್‌, ಸೂಪರಿಂಟೆಂಡೆಂಟ್ ಎನ್. ಜೆ.ರವಿಶಂಕರ್, ಡೀನ್ ರೆಕ್ಸ್, ಕೆ.ಬಿ.ಲಿಂಗರಾಜು, ಮತ್ತೊರ್ವ ಎಸ್​.ಟಿ ಹಿರೇಮಠ್ ಮೇಲೆ ಅನುಮಾನ ಇದೆ‌ ಎಂದು ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್ ಸಿಬಿಐನ ಎಸಿಬಿ ಘಟಕಕ್ಕೆ ದೂರು ನೀಡಿದ್ದಾರೆ.

ಸದ್ಯ ದೂರಿನ‌ ಮೇರೆಗೆ ಎಫ್​ಐಆರ್ ದಾಖಲಾಗಿದ್ದು, ಎಫ್​ಐಆರ್​ನಲ್ಲಿ ಎಂ.ಜೆ.ಚೇತನ್ ಸೂಚಿಸಿದವರ ಹೆಸರನ್ನು ನಮೂದು ಮಾಡಲಾಗಿ ಸದ್ಯ ಅಧಿಕಾರಿಗಳೂ ತನಿಖೆ ಮುಂದುವರೆಸಿದ್ದಾರೆ.

Last Updated : Oct 18, 2020, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.