ETV Bharat / state

ಚಿನ್ನಾಭರಣ ಗಿರವಿ ಇಡಲು ಬಂದು ಅಂಗಡಿ ಮಾಲೀಕನ ಮೇಲೆ ಬೆಂಕಿಯಿಟ್ಟಿದ್ದ ಆರೋಪಿಯ ಬಂಧನ

ಬೆಂಗಳೂರಿನಲ್ಲಿ ಚಿನ್ನ ಆಭರಣವನ್ನು ಗಿರವಿಗೆ ಇಡಲು ಬಂದು ಅಂಗಡಿ ಮಾಲೀಕನಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Tulsi Jewelers Shop
ತುಳಸಿ ಜ್ಯುವೆಲ್ಲರ್ಸ್ ಅಂಗಡಿ
author img

By

Published : Feb 18, 2023, 11:20 AM IST

ಬೆಂಗಳೂರು /ಹೊಸಕೋಟೆ: ಚಿನ್ನಾಭರಣ ಗಿರವಿ ಇರಿಸಲು ಬಂದು ಅಂಗಡಿಗೆ ಬೆಂಕಿಯಿಟ್ಟಿದ್ದ ಆರೋಪಿಯನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸವರಾಜ್ ಬಂಧಿತ ಆರೋಪಿಯಾಗಿದ್ದು, ಈತ ಫೆಬ್ರುವರಿ 12ರಂದು ಗಿರಿನಗರದ ಮುನೇಶ್ವರ ಬ್ಲಾಕ್ ಸಂತೋಷ್ ಬ್ಯಾಂಕರ್ಸ್ ಮತ್ತು ತುಳಸಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಈ ಕೃತ್ಯ ಎಸಗಿದ್ದ. ಆರೋಪಿಯ ಕೃತ್ಯದಿಂದ ಅಂಗಡಿ ಮಾಲೀಕ ಭವರ್ ಲಾಲ್ (54) ಬೆನ್ನಿಗೆ ಗಾಯಗಳಾಗಿದ್ದವು.

ಘಟನೆ ಹಿನ್ನೆಲೆ: ಬೆಳಗ್ಗೆ ಅಂಗಡಿಗೆ ಬಂದಿದ್ದ ಆರೋಪಿ ಬಸವರಾಜ್ ತನ್ನ ಬಳಿಯಿದ್ದ ಚಿನ್ನಾಭರಣ ಅಡವಿಟ್ಟುಕೊಂಡು ಹಣ ನೀಡುವಂತೆ ಕೇಳಿದ್ದ. ಆರೋಪಿಯ ಬಳಿಯಿದ್ದ ಚಿನ್ನಾಭರಣ ಪರಿಶೀಲಿಸಿದ್ದ ಅಂಗಡಿ ಮಾಲೀಕ ಭವರ್ ಲಾಲ್, ಪ್ರತಿಯಾಗಿ ಐವತ್ತು ಸಾವಿರ ರೂ ನೀಡುವುದಾಗಿ ತಿಳಿಸಿದ್ದರು. ಅಷ್ಟಕ್ಕೇ ಸಿಟ್ಟಿಗೆದ್ದ ಆರೋಪಿ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯಲ್ಲಿ ಅಂಗಡಿಗೆ ಹಾನಿಯಾಗಿದ್ದು ಮಾಲೀಕ ಭವರ್ ಲಾಲ್ ಬೆನ್ನಿಗೆ ಗಾಯಗಳಾಗಿದ್ದವು. ಸದ್ಯ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಠಾಣಾ ಪೊಲೀಸರು ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ

ನಿಂತಿದ್ದ ಕಾರಿಗೆ ಕಸದಿಂದ ತಗುಲಿದ ಬೆಂಕಿ: ನಿಂತಿದ್ದ ಕಾರಿಗೆ ಕಸದಿಂದ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಕಾರು ಸುಟ್ಟು ಭಸ್ಮವಾಗಿರುವ ಘಟನೆ ಹೊಸಕೋಟೆ ನಗರದ ಸಾಧನಾ ಚಿತ್ರಮಂದಿರ ಬಳಿ ನಡೆದಿದೆ. ಟಾಟಾ ಇಂಡಿಕಾ‌ ಕಾರಿಗೆ ಬೆಂಕಿ ತಗುಲಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಅಂದಹಾಗೆ ತಡರಾತ್ರಿ ರಿಪೇರಿಗೆಂದು ಗ್ಯಾರೇಜ್ ಮುಂದೆ ಟಾಟಾ ಇಂಡಿಕಾ ಕಾರು ನಿಲ್ಲಿಸಲಾಗಿತ್ತು. ನಗರದ ಜಾಪರ್ ಷರೀಪ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ರಸ್ತೆ ಬದಿಯಲ್ಲಿನ ಕಸಕ್ಕೆ ಯಾರೋ ಅಪರಿಚಿತರು ಬೆಂಕಿಯನ್ನು ಇಟ್ಟಿದ್ದಾರೆ. ಕಸ ಸುಟ್ಟುಕೊಂಡು ಗ್ಯಾರೇಜ್ ಬಳಿಯಲ್ಲಿ ಕಸದಿಂದ ಬಂದ ಬೆಂಕಿ ಕಾರಿಗೆ ತಗುಲಿ ಅವಘಡ ಸಂಭವಿಸಿದೆ. ಇನ್ನೂ ಟಾಟಾ ಇಂಡಿಕಾ‌ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಣ ಹುಲ್ಲಿಗೆ ಬೆಂಕಿ ತಗುಲಿ ಬಾಲಕಿ ಸಾವು: ಛತ್ತೀಸ್​ಗಢದಲ್ಲಿ ಕೊರಿಯಾ ಪ್ರದೇಶದ ಸೊನ್ಹತ್​ನಲ್ಲಿ ಮಂಗಳವಾರ 14 ರಂದು ಬಾಲಕಿಯೊಬ್ಬಳು ಬೆಂಕಿ ಪೊಟ್ಟಣದೊಂದಿಗೆ ಆಟವಾಡಿ ಅದರಿಂದಲೇ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿತ್ತು. ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮ ನಿಮಿತ್ತ ಬಾಲಕಿ ಹಾಗೂ ಆಕೆಯ ಪೋಷಕರು ತೆರಳಿದ್ದರು.

ಈ ವೇಳೆ, ಬಾಲಕಿ ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಆಟವಾಡಲು ಹೋಗಿದ್ದು, ಅದೇ ಸ್ಥಳದಲ್ಲಿ ಜಾನುವಾರುಗಳಿಗಾಗಿ ಹುಲ್ಲಿನ ಬಣವೆ ಸಂಗ್ರಹಿಸಲಾಗಿತ್ತು. ಬಾಲಕಿ ಬೆಂಕಿ ಪೊಟ್ಟಣದೊಂದಿಗೆ ತೆರಳಿದ್ದು ಅಲ್ಲಿ ಪೊಟ್ಟಣದಿಂದ ಕಿಡಿ ಕಾರಿದ್ದಾಳೆ. ಪರಿಣಾಮ ಬೆಂಕಿ ಹುಲ್ಲಿನ ಬವಣೆಗೆ ಹತ್ತಿಕೊಂಡಿತ್ತಲ್ಲದೆ ಜೊತೆಗೆ ಬಾಲಕಿಯನ್ನು ಬೆಂಕಿ ಪೂರ್ಣವಾಗಿ ಆವರಿಸಿ ಅವಳ ಸಾವಿಗೆ ಕಾರಣವಾಗಿದೆ.

ಇದನ್ನೂ ಓದಿ: ಕನಕಪುರದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.