ಬೆಂಗಳೂರು: ಕೋವಿಡ್ ಕೇರ್ ಸೆಂಟರ್ಗೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ತಯಾರಿ ಅಂತಿಮವಾಗಿದ್ದು, ಅಗ್ನಿಶಾಮಕ ಇಲಾಖೆ ಕೂಡಾ ದೃಢೀಕರಣ ನೀಡಿದೆ.
ಬಿಐಇಸಿ ಸಿಸಿಸಿ ಕೇಂದ್ರದಲ್ಲಿ 10 ಸಾವಿರ ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯೋಜಿಸಲಾಗಿದೆ. ಸುಮಾರು 250 ವೈದ್ಯರು, 500 ನರ್ಸ್ಗಳು, 750 ಸಹಾಯಕರನ್ನು ಒಳಗೊಂಡು ಒಟ್ಟು 11,500 ಮಂದಿ ಹಾಗೂ ಇತರೆ ಸಿಬ್ಬಂದಿಗಳು 24 ಗಂಟೆ ಆರೈಕೆ ಕೇಂದ್ರದಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅಗ್ನಿಸುರಕ್ಷತಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲಾಖೆಯ ಅಭಿಪ್ರಾಯ ಕೇಳಲಾಗಿತ್ತು.
ಜುಲೈ 10ರಂದು ಇಲಾಖೆ ಕೈಗೊಂಡ ಪರಿಶೀಲನೆ ಬಳಿಕ ಕೆಲವು ಮಾರ್ಗಸೂಚಿ ಅಳವಡಿಸುವಂತೆ ತಿಳಿಸಲಾಗಿತ್ತು. ಅದರಂತೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಆರೈಕೆ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ದಳದ ಠಾಣೆ ಆರಂಭಿಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.