ETV Bharat / state

ಬೆಂಗಳೂರಲ್ಲಿ ಬಿಜೆಪಿ ಬಿಬಿಎಂಪಿ ಸದಸ್ಯೆ ಪತಿಯ ಅಂಧಾ ದರ್ಬಾರ್ ಆರೋಪ: ಎಫ್ಐಆರ್ ದಾಖಲು

ಸ್ವಾಮೀಜಿಯ ಸೈಟ್ ಕಬಳಿಕೆ ಆರೋಪ ಸಂಬಂಧ ಬಿಬಿಎಂಪಿ ಕಾರ್ಪೊರೇಟರ್ ಶಾರದಾ ಪತಿ ಮುನಿರಾಜು ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

author img

By

Published : Feb 13, 2021, 7:34 AM IST

husband
ಎಫ್ಐಆರ್ ದಾಖಲಿಸಿಕೊಂಡ‌ ಪೊಲೀಸರು

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಖರೀದಿಸಿದ್ದ ಸ್ವಾಮೀಜಿಯ ಸೈಟ್ ಕಬಳಿಕೆ ಆರೋಪ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಉಲ್ಲಾಳ ವಾರ್ಡ್ ಕಾರ್ಪೊರೇಟರ್​ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ‌.

ಕಾರ್ಪೊರೇಟರ್ ಶಾರದಾ ಪತಿ ಮುನಿರಾಜು ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ನಾಗರಬಾವಿ 2ನೇ ಹಂತದ 9ನೇ ಬ್ಲಾಕ್ ಸರ್ವೆ ನಂ. 94ರ ಸೈಟ್​ ನಂ. 1241* ಬರೋಬ್ಬರಿ 60.30 ಆಳತೆಯ ಸೈಟ್ ಅನ್ನು ಪ್ರಸನ್ನ ಗುರೂಜಿಯವರು ಕಾರ್ತಿಕ್​ ಎಂಬುವರಿಂದ ಖರೀದಿ ಮಾಡಿದ್ದರು. ಇದಕ್ಕೂ ಮುನ್ನ ಬಿಡಿಎ ಭೋಜರಾಮ ಶೆಟ್ಟಿ ಎಂಬುವರಿಗೆ ಹಂಚಿಕೆ ಮಾಡಲಾಗಿತ್ತು. ಅದನ್ನ ಕಾರ್ತಿಕ್ ಎಂಬುವರು ಖರೀದಿ ಮಾಡಿ ಗುರೂಜಿಗೆ ಮಾರಿದ್ದರು. ಬಳಿಕ ನೋಂದಣಿ ಮಾಡಿಸಿಕೊಂಡಿದ್ದ ಗುರೂಜಿ 16 ವರ್ಷದಿಂದ ನೆಮ್ಮದಿಯಾಗಿದ್ದರು. ಆದರೆ 2020ರಲ್ಲಿ ಅವರಿಗೆ ರಿಯಲ್ ಎಸ್ಟೇಟ್ ಕಾಟ ಪ್ರಾರಂಭವಾಗಿದೆಯಂತೆ.

2020ರ ಡಿಸೆಂಬರ್ 13ರಂದು ತನ್ನ ಪತ್ನಿಯ ಜೊತೆ ಸೈಟ್ ನೋಡಲು ತೆರಳಿದ್ದರು. ಸೈಟ್ ಜಾಗಕ್ಕೆ ಕರ್ನಾಟಕ ಇನ್‌ಕಮ್​ ಟ್ಯಾಕ್ಸ್ ಡಿಪಾರ್ಟ್​​​ಮೆಂಟ್ ಲಿಮಿಟೆಡ್​ ಬೋರ್ಡ್ ಹಾಕಿದ್ದನ್ನು ಪ್ರಶ್ನಿಸಿ, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಗುರೂಜಿ ದೂರು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಉಲ್ಲಾಳ ಕಾರ್ಪೊರೇಟರ್ ಪತಿ ಮುನಿರಾಜು ತನ್ನ ಜೊತೆ ರೌಡಿ ಪ್ರಕಾಶ್ ಮತ್ತು ಗ್ಯಾಂಗ್ ಕರೆದುಕೊಂಡು ಬಂದು ಗಲಾಟೆ ಮಾಡಿಸಿದ್ದಾನೆ ಎಂದು ಗುರೂಜಿ ಆರೋಪಿಸಿದ್ದಾರೆ. ಅಲ್ಲದೆ ಗಲಾಟೆಯ ಘಟನೆ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಸಿಟ್ಟಿಗೆದ್ದು ಹಲ್ಲೆ ಕೂಡ ಮಾಡಿದ್ದಾರೆ.

ಪೊಲೀಸರು ಮಧ್ಯಪ್ರವೇಶಿಸಿದಾಗ 'ನಿಮ್ಮದೇ ಜಾಗ ಬೇಲಿ ಹಾಕಿಕೊಳ್ಳಿ' ಎಂದಿದ್ದಾನೆ. ತನ್ನ ಬಳಿ ಯಾವುದೇ ದಾಖಲೆ ಇಲ್ಲ ಅಂತಾ ನಾಟಕವಾಡಿ ಹೋಗಿದ್ದಾನೆ. ಮತ್ತೆ ಎರಡು ದಿನ ಕಳೆದ ನಂತರ ತನ್ನ ರೌಡಿ ವರಸೆ ತೋರಿಸಿದ ಮುನಿರಾಜು, ಏಕಾಏಕಿ ತನ್ನ ಹುಡುಗರ ಕರೆಯಿಸಿ ಗುರೂಜಿ ಹಾಕಿದ್ದ ಬೇಲಿಯನ್ನು ಕಿತ್ತು ಹಾಕಿದ್ದಾರೆ. ಆಗ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಗುರೂಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಇಂದಿನಿಂದ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್​: ವಿರಾಟ್​ ಪಡೆ ಮುಂದಿದೆ ದುರ್ಗಮ ಹಾದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.