ETV Bharat / state

ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ವ್ಯಕ್ತಿ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು - Case filed against Sohel and Niaz

ಇತ್ತೀಚೆಗೆ ಮುಸ್ಲಿಂ ಧರ್ಮೀಯ ಮಹಿಳೆಗೆ ಹಿಂದೂ ಧರ್ಮೀಯ ಸಹೋದ್ಯೋಗಿಯೊಬ್ಬರು ಬೈಕ್‌ನಲ್ಲಿ ಡ್ರಾಪ್‌ ನೀಡಿದ್ದನ್ನು ವಿರೋಧಿಸಿ ನಡೆದ 'ನೈತಿಕ ಪೊಲೀಸ್‌ಗಿರಿ' ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ಪ್ರಕರಣ ಸಂಬಂಧ ಇದೀಗ ರೋಪಿಗಳ ಮೇಲೆ ಪೊಲೀಸರು ವಿವಿಧ ಐಪಿಸಿ ಸೆಕ್ಷನ್‌ಗಳಡಿ ಕೇಸು ದಾಖಲಿಸಿಕೊಂಡಿದ್ದಾರೆ.

bengalore
ಬೈಕ್​ನಲ್ಲಿ ಡ್ರಾಪ್​ ಮಾಡುತ್ತಿರುವುದು
author img

By

Published : Sep 21, 2021, 5:58 PM IST

Updated : Sep 21, 2021, 6:08 PM IST

ಬೆಂಗಳೂರು: ರಾಜಧಾನಿಯಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಸಂಬಂಧ ನಗರದ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಾದ ಸೋಹೆಲ್ ಹಾಗೂ ನಯಾಜ್ ಮೇಲೆ ಐಪಿಸಿ ಸೆಕ್ಷನ್​ 153(ಎ), 506, 341, 34, 504, 323 ಹಾಗೂ 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

fir-registered-against-7-accused-for-moral-policing
ಆರೋಪಿಗಳ ಮೇಲೆ ಎಫ್​ಐಆರ್ ದಾಖಲು

ಮಹಿಳೆ ಕೊಟ್ಟ ದೂರಿನಲ್ಲೇನಿದೆ?

'ಕಾರ್ಯಕ್ರಮವಿದ್ದ ಕಾರಣಕ್ಕೆ ಕಚೇರಿಯಿಂದ ಹೋರಾಡಲು ತಡವಾಗಿತ್ತು. ಹೀಗಾಗಿ, ಡ್ರಾಪ್ ಪಡೆಯುವುದಾಗಿ ಮನೆಯವರ ಅನುಮತಿ ಪಡೆದಿದ್ದೆ. ಅದರಂತೆ ಸಹೋದ್ಯೋಗಿ ಮಹೇಶ್ ಜೊತೆಯಲ್ಲಿ ಬರುತ್ತಿದ್ದೆ. ರಾತ್ರಿ ಸುಮಾರು 9:30ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಡೈರಿ ಸರ್ಕಲ್ ಬಳಿ ಬೈಕ್ ತಡೆದಿದ್ದಾರೆ. ಈ ವೇಳೆ ನನ್ನ ಪತಿಯ ಮೊಬೈಲ್ ನಂಬರ್ ಪಡೆದು ಮುಖಕ್ಕೆ ಮೊಬೈಲ್ ಟಾರ್ಚ್ ಹಾಕಿದರು. ನಂತರ ಮಹೇಶ್ ಮೇಲೆ ಹಲ್ಲೆ ಮಾಡಿದರು. ಹಿಂದೂ ಹುಡುಗನ ಜೊತೆ ಯಾಕೆ ಹೋಗ್ತಿದ್ದಿಯಾ? ಎಂದು ಬೆದರಿಸಿದರು. ಹೋಗುವುದಾದರೆ ಬುರ್ಖಾ ತೆಗೆದು ಹೋಗು ಎಂದರು. ಇದಾದ ಬಳಿಕ ಆಟೋ ತೆಗೆದುಕೊಂಡು ಮನೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ನನಗೆ ಭಯವಾಗಿ ಬಾಡಿಗೆ ಆಟೋ ತಗೊಂಡು ಮನೆಗೆ ಹೋದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನ ಸರ್ಕಾರ ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ವ್ಯವಹರಿಸುತ್ತದೆ.. ಸಿಎಂ ಬೊಮ್ಮಾಯಿ ಖಡಕ್​ ಎಚ್ಚರಿಕೆ

ಆರೋಪಿಗಳ ಮೇಲೆ ಪೊಲೀಸರು ಹಾಕಿರುವ IPC ಸೆಕ್ಷನ್‌ಗಳೇನು?:

- ಐಪಿಸಿ 153(A): ಉದ್ದೇಶಪೂರ್ವಕವಾಗಿ ಎರಡು ಧರ್ಮಗಳ ಮಧ್ಯೆ ದ್ವೇಷ ಉಂಟುಮಾಡುವುದು. ಮೂರು ವರ್ಷದವರೆಗೂ ಶಿಕ್ಷೆ ಹಾಗೂ ದಂಡ, ಜಾಮೀನು ರಹಿತ ಪ್ರಕರಣ.​
- ಐಪಿಸಿ ಸೆಕ್ಷನ್‌ 506- ಜೀವ ಬೆದರಿಕೆ (2 ವರ್ಷ ಶಿಕ್ಷೆ ಹಾಗೂ ದಂಡ )
- ಐಪಿಸಿ 341- ಅಕ್ರಮವಾಗಿ ತಡೆಯುವುದು (ಒಂದು ತಿಂಗಳು ಶಿಕ್ಷೆ, ದಂಡ )

- ಐಪಿಸಿ 34- ಒಂದೇ ಉದ್ದೇಶದಿಂದ ಎರಡು ಮೂರು ಜನರಿಗೆ ನೋವುಂಟು ಮಾಡುವುದು

- ಐಪಿಸಿ 504- ಮಾನಹಾನಿ ಮಾಡುವುದು

- ಐಪಿಸಿ 323- ಮನಸ್ಸಿಗೆ ಘಾಸಿ ಮಾಡುವುದು (1 ವರ್ಷ ಶಿಕ್ಷೆ)

- ಐಪಿಸಿ 354- ಮಹಿಳೆ ಮೇಲೆ ದೌರ್ಜನ್ಯ (2 ರಿಂದ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ)

ಇದನ್ನೂ ಓದಿ: ಪ್ರಚಾರದ ಗೀಳಿಗೆ ಬಿದ್ದು ಗಲಾಟೆ ಮಾಡಿ ವಿಡಿಯೋ ಮಾಡಿದ್ದೆವು : ತಪ್ಪೊಪ್ಪಿಕೊಂಡ ಆರೋಪಿಗಳು

Last Updated : Sep 21, 2021, 6:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.