ಬೆಂಗಳೂರು: ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಆರೋಪದಡಿ ವಿವಿಪುರಂ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್ಐಆರ್ ಆಗಿದೆ.
ಪ್ರಕರಣವೊಂದರ ಸಂಬಂಧ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ಆರೋಪಿತ ಮೂವರು ಪೊಲೀಸರು ನೋಟಿಸ್ ಕೊಡಲು ತೆರಳಿದ್ದರು. ಈ ವೇಳೆ ಪಂಕಜ್ ಸಿಂಗ್ನಿಂದ ಚೆಕ್ ಹಾಗೂ ನಗದು ರೂಪದಲ್ಲಿ 25 ಲಕ್ಷ ಹಣ ವಸೂಲಿಮಾಡಿರುವದಾಗಿ ಆರೋಪಿಸಿದ್ದು, ಈ ಸಂಬಂಧ ದೆಹಲಿ ಸೀಮಾಪುರಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಾರೆಂಟ್ ಜಾರಿಗೆ ಲಂಚಕ್ಕೆ ಬೇಡಿಕೆ: ಬಸ್ಟ್ಯಾಂಡ್ನಲ್ಲೇ ರೆಡ್ಹ್ಯಾಂಡಾಗಿ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ