ETV Bharat / state

ಕೈಹಿಡಿದ ನಟಿಗೆ ಕೈಕೊಟ್ಟು, ಒಡವೆ ಪಡೆದು ವಂಚಿಸಿದ ಆರೋಪ : ರೌಡಿಶೀಟರ್ ಕುಣಿಗಲ್ ಗಿರಿ ಸೋದರನ ವಿರುದ್ಧ FIR - ರಾಜಗೋಪಾಲನಗರ ಪೊಲೀಸ್ ಠಾಣೆ

ಹಲವು ತಿಂಗಳಾದರೂ ಚಿನ್ನ ವಾಪಸ್​ ನೀಡದ ಹಿನ್ನೆಲೆ ಕೇಳಲು ಹೋದರೆ, ಹರೀಶ್ ಹಾಗೂ ಅವನ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸಂತ್ರಸ್ತೆ ಪೊಲೀಸ್ ಠಾಣೆ‌ ಮೆಟ್ಟಿಲೇರುತ್ತಿದ್ದಂತೆ ರಾಜಗೋಪಾಲ ನಗರ ಪೊಲೀಸರು ಹರೀಶ್ ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ..

fir against rowdysheeter brother
ರೌಡಿಶೀಟರ್ ಸಹೋದರನ​ ವಿರುದ್ಧ ಎಫ್​ಐಆರ್​
author img

By

Published : Aug 15, 2021, 10:41 PM IST

ಬೆಂಗಳೂರು : ವಿವಾಹವಾಗಿದ್ದರೂ ಮತ್ತೋರ್ವ ಯುವತಿಗೆ ತಾಳಿ ಕಟ್ಟಿದ ಆಕೆಯನ್ನೂ ವಂಚಿಸಿದ್ದ ಆರೋಪಿಯನ್ನ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ರೌಡಿಶೀಟರ್ ಕುಣಿಗಲ್ ಗಿರಿ ಸಹೋದರ ಹರೀಶ್ ಆರೋಪಿತ.

ಹೆಗ್ಗನಹಳ್ಳಿಯ ನಿವಾಸಿ ಲಲಿತಾ (ಹೆಸರು ಬದಲಿಸಲಾಗಿದೆ) ದೂರು ನೀಡಿದ ಮೇರೆಗೆ ವಂಚಕ ಹರೀಶ್ ಹಾಗೂ ಸಹೋದರ ಕುಣಿಗಲ್ ಗಿರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ವಂಚನೆಗೊಳಗಾದ ಯುವತಿ ಕನ್ನಡದ 'ವಿಲನ್' ಚಿತ್ರ ಸೇರಿದಂತೆ ಕೆಲ ಚಿತ್ರಗಳಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದರು. ಕೆಲ ವರ್ಷಗಳ ಹಿಂದೆ ಯುವತಿಗೆ ಹರೀಶ್ ಪರಿಚಯವಾಗಿದ್ದ. ಕೆಲ ದಿನಗಳ ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿದೆ. ಮತ್ತೊಂದೆಡೆ ಹರೀಶ್​ಗೆ ಬೇರೆ ಮಹಿಳೆಯೊಂದಿಗೆ ಮದುವೆಯಾಗಿತ್ತು.

ಹೆಗ್ಗನಹಳ್ಳಿ ಪ್ರತ್ಯೇಕ ಮನೆಯೊಂದರಲ್ಲಿ ಯುವತಿ ವಾಸವಾಗಿದ್ದು, ಮದುವೆಯಾಗುವುದಾಗಿ ಒಂದೂವರೆ ವರ್ಷಗಳಿಂದ ಮನೆಗೆ ಹರೀಶ್ ಬಂದು ಹೋಗುತ್ತಿದ್ದನಂತೆ. ನಂತರ ಆಕೆಗೆ ಮನೆಯಲ್ಲಿಯೇ ತಾಳಿ ಕಟ್ಟಿ ಅವಳ ನಂಬಿಕೆ ಗಳಿಸಿದ್ದ. ಅಲ್ಲದೇ ವಿವಿಧ ಕಾರಣ ನೀಡಿ 180 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದ.

ಹಲವು ತಿಂಗಳಾದರೂ ಚಿನ್ನ ವಾಪಸ್​ ನೀಡದ ಹಿನ್ನೆಲೆ ಕೇಳಲು ಹೋದರೆ, ಹರೀಶ್ ಹಾಗೂ ಅವನ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸಂತ್ರಸ್ತೆ ಪೊಲೀಸ್ ಠಾಣೆ‌ ಮೆಟ್ಟಿಲೇರುತ್ತಿದ್ದಂತೆ ರಾಜಗೋಪಾಲ ನಗರ ಪೊಲೀಸರು ಹರೀಶ್ ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ಒಡವೆ ಬದಲಾಗಿ ಒಂದು ಲಕ್ಷ ರೂ‌. ವಾಪಸ್ ನೀಡುವುದಾಗಿ ಒಪ್ಪಿಕೊಂಡಿದ್ದ ಹರೀಶ್, ನಾಲ್ಕು ಬಾರಿ ಚೆಕ್ ನೀಡಿದ್ದು, ಚೆಕ್ ಬೌನ್ಸ್ ಆಗಿತ್ತು. ಅಲ್ಲದೆ ಈ ಬಗ್ಗೆ ಪ್ರಶ್ನಿಸಲು ಹೋದ ಯುವತಿ ಮೇಲೆ ಹರೀಶ್ ಕುಟುಂಬಸ್ಥರು ಹಲ್ಲೆ ಮಾಡಿದ್ದರು. ಇನ್ನು, ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಕುಣಿಗಲ್ ಗಿರಿ ಪೊಲೀಸರಿಗೆ ನೀಡಿದ ದೂರು ವಾಪಸ್ ತೆಗೆದುಕೊಳ್ಳುವಂತೆ ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.