ETV Bharat / state

ಪತ್ನಿಗೆ ಕಿರುಕುಳ: ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ಎಫ್​ಐಆರ್ - ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ವರದಕ್ಷಿಣಿ‌ ಕಿರುಕುಳ ಆರೋಪ

ಪತ್ನಿಗೆ ಕಿರುಕುಳ ಆರೋಪದ ಮೇಲೆ ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fir-against-raghavendra-channannavar-in-bengaluru
ವರದಕ್ಷಿಣಿ‌ ಕಿರುಕುಳ ಆರೋಪ: ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ಎಫ್​ಐಆರ್
author img

By

Published : May 19, 2022, 10:46 AM IST

ಬೆಂಗಳೂರು: ರಾಘವೇಂದ್ರ ಡಿ. ಚನ್ನಣ್ಣನವರ್ ವಿರುದ್ಧ ಪತ್ನಿಗೆ ಕಿರುಕುಳ ಆರೋಪ ಪ್ರಕರಣ ಕೇಳಿಬಂದಿದ್ದು, ನಗರದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ರಾಘವೇಂದ್ರ 2015ರಲ್ಲಿ ರೋಜಾ ಎಂಬಾಕೆಯನ್ನು ಮದುವೆಯಾಗಿದ್ದರು.

'ನನ್ನನ್ನು ಮದುವೆಯಾಗುವುದಕ್ಕೂ ಮುನ್ನ ಮತ್ತೊಬ್ಬ ಮಹಿಳೆಯನ್ನು ರಾಘವೇಂದ್ರ ಮದುವೆಯಾಗಿದ್ದಾರೆ. ಈ ವಿಚಾರ ಬಚ್ಚಿಟ್ಟು ನನ್ನನ್ನು ಮದುವೆಯಾದರು' ರೋಜಾ ಆರೋಪಿಸಿದ್ದಾರೆ. ಇದೇ ವೇಳೆ, ಹೊಂದಿಕೊಂಡು ಬಾಳುವಂತೆ ತಮಗೆ ಒತ್ತಾಯಿಸುತ್ತಿರುವುದಾಗಿಯೂ ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

'ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಆ ಮಹಿಳೆ ಜೊತೆ ರಾಘವೇಂದ್ರ ಸಂಸಾರ ಶುರು ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ, ನನಗೆ ನ್ಯಾಯ ಬೇಕು' ಎಂದು ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ: ಹೆಂಡ್ತಿ ಮೇಲೆ ಮೃಗೀಯ ರೀತಿ ಹಲ್ಲೆ ನಡೆಸಿ, ಮುಖದ ಮೇಲೆ ಕಲ್ಲಿಂದ ಜಜ್ಜಿದ ಪಾಪಿ ಗಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.