ETV Bharat / state

ಬೆಂಗಳೂರು: ಮದುವೆ ಆಮಿಷವೊಡ್ಡಿ ಮಹಿಳಾ ಪೊಲೀಸ್ ಮೇಲೆ ಇನ್ಸ್​ಪೆಕ್ಟರ್​ ಅತ್ಯಾಚಾರ, ಗರ್ಭಪಾತ - rape allegation on police inspector

ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿ, ಗರ್ಭಪಾತದ ಮಾತ್ರೆ ನುಂಗಿಸಿ ಹಲ್ಲೆ ನಡೆಸಿದ್ದಾಗಿ ಇನ್ಸ್​ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್​​ಟೇಬಲ್​ವೊಬ್ಬರು​ ದೂರು ನೀಡಿದ್ದಾರೆ.

fir-against-inspector-in-lady-constable-rape-case
ಬೆಂಗಳೂರು: ಮದುವೆ ಆಮಿಷವೊಡ್ಡಿ ಮಹಿಳಾ ಪೊಲೀಸ್ ಮೇಲೆ ಇನ್‌ಸ್ಪೆಕ್ಟರ್​ ಅತ್ಯಾಚಾರ
author img

By

Published : Mar 10, 2022, 8:36 PM IST

ಬೆಂಗಳೂರು: ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿ, ಗರ್ಭಪಾತದ ಮಾತ್ರೆ ನುಂಗಿಸಿ, ಹಲ್ಲೆ ನಡೆಸಿದ್ದಾಗಿ ಇನ್ಸ್​ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್​​ಟೇಬಲ್​ ದೂರು ನೀಡಿದ್ದಾರೆ. ಕಾನ್ಸ್​​ಟೇಬಲ್ ದೂರಿನ ಮೇರೆಗೆ ಗೋವಿಂದರಾಜನಗರ ಠಾಣೆಯಲ್ಲಿ ರಾಜ್ಯ ಗುಪ್ತ ದಳ ಇನ್ಸ್​ಪೆಕ್ಟರ್ ಆರ್.ಮಧುಸೂದನ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮಹಿಳಾ ಕಾನ್‌ಸ್ಟೇಬಲ್ ತನ್ನ ದೂರಿನಲ್ಲಿ 2017ರಿಂದ ಇನ್ಸ್​ಪೆಕ್ಟರ್ ಪರಿಚಯವಿದ್ದು, ಮದುವೆ ಆಗುವುದಾಗಿ ತನಗೆ ನಂಬಿಸಿದ್ದರು. ಮಾತನಾಡಬೇಕೆಂದು ಮೈಸೂರು ರಸ್ತೆಯ ಬಿಡದಿ ಸಮೀಪದ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಪರಿಣಾಮ ಆರೋಗ್ಯದಲ್ಲಿ ಏರುಪೇರು ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಗರ್ಭಪಾತ: ಬಳಿಕ ಇನ್ಸ್​ಪೆಕ್ಟರ್, ಈ ಬಗ್ಗೆ ಯಾರಿಗೂ ಹೇಳಬೇಡ. ನಾನೇ ನಿನ್ನನ್ನು ಮದುವೆ ಆಗುತ್ತೇನೆ ನಂಬಿಸಿದ್ದರು. ನಂತರ 2019ರ ಫೆಬ್ರವರಿಯಲ್ಲಿ 3 ತಿಂಗಳ ಗರ್ಭಿಣಿ ಆಗಿದ್ದಾಗ ಆರೋಪಿ ತನ್ನ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಗರ್ಭಪಾತ ಮಾತ್ರೆಯನ್ನು ಒತ್ತಾಯವಾಗಿ ನುಂಗಿಸಿದ್ದರು. ಅಲ್ಲದೆ, ನಂತರ ಆರೋಗ್ಯದಲ್ಲಿ ಏರುಪೇರು ಆದಾಗ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದರು ಎಂದು ದೂರಿದ್ದಾರೆ.

ಹೊಟ್ಟೆ ಮೇಲೆ ಹಲ್ಲೆ: ಈ ಎಲ್ಲ ಬೆಳವಣಿಗೆಗಳ ನಂತರ ಮೂಡಲಪಾಳ್ಯ ಸರ್ಕಲ್ ಬಳಿಯ ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಮದುವೆ ಆಗುವಂತೆ ಕೇಳಿದಾಗ ಫೆಬ್ರವರಿ 13ರ ರಾತ್ರಿ 11.30ಕ್ಕೆ ಬಂದು ನನ್ನ ಹಲ್ಲೆ ನಡೆಸಿದ್ದರು. ಹೊಟ್ಟೆ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮತ್ತೆ ಗರ್ಭಪಾತವಾಗಿದೆ ಎಂದು ಮಹಿಳಾ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್ ಕರೆ ಮಾಡಿ ಕೊಲೆ ಬೆದರಿಕೆ: ಈ ವರ್ಷದ ಫೆಬ್ರವರಿ 19ರಂದು ವಾಟ್ಸ್‌ಆ್ಯಪ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿ ಇನ್ಸ್​ಪೆಕ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸಂತ್ರಸ್ತ ಕಾನ್ಸ್​​ಟೇಬಲ್​ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೊಬೈಲ್​ ರಿಪೇರಿ ಅಂಗಡಿ ಕೆಲಸಗಾರನ ವಿರುದ್ಧ ಸೋತ ಸಿಎಂ ಚರಣ್‌ಜಿತ್​ ಸಿಂಗ್​ ಚನ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.