ಬೆಂಗಳೂರು: ಲಾಕ್ ಡೌನ್ ಇರುವುದರಿಂದ ಬಹುತೇಕರು ಆನ್ ಲೈನ್ ಆಹಾರ ಆರ್ಡರ್ ಮಾಡುತ್ತಿದ್ದಾರೆ .
ಆದರೆ ಎಲ್ಲರಿಗೂ ಚಿರಪರಿಚಿತ ಸ್ವಿಗ್ಗಿ ಸಂಸ್ಥೆಯೇ ಶುಚಿತ್ವ ಕಾಪಾಡದೆ ಜನರ ಜೀವದ ಜೊತೆ ಆಟವಾಡುತ್ತಿದೆ.
ಇಂದು ಕತ್ರಿಗುಪ್ಪೆಯ ಸ್ವಿಗ್ಗಿ ಕೇಂದ್ರಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದಾಗ ಸ್ವಿಗ್ಗಿಯ ಬಣ್ಣ ಬಯಲಾಗಿದೆ.
ಕಸ ರಾಶಿ ಬಿದ್ದು, ಹುಳ ಉತ್ಪತ್ತಿಯಾದರೂ ವಿಲೇವಾರಿ ಮಾಡಿಲ್ಲ. ಕಿಚನ್ ಕೂಡಾ ಶುಚಿತ್ವದಿಂದ ಇಟ್ಟುಕೊಂಡಿಲ್ಲ ಎಂದು ಐವತ್ತು ಸಾವಿರ ರುಪಾಯಿ ದಂಡ ಹಾಕಲಾಗಿದೆ.