ಬೆಂಗಳೂರು: ಜೆಜೆ ನಗರದ ಯೂನಿಟಿ ಆಸ್ಪತ್ರೆ ಬಳಿ ಶನಿವಾರ ತಡರಾತ್ರಿ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈಗಾಗಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಕ್ರಾಪ್ ಕೆಲಸ ಮಾಡಿಕೊಂಡಿದ್ದ ಅತಿಕ್ ಉರ್ ರೆಹಮಾನ್ ಹಲ್ಲೆಗೊಳಗಾದ ವ್ಯಕ್ತಿ. ಶನಿವಾರ ತಡರಾತ್ರಿ ರೆಹಮಾನ್ ರೂಮ್‌ನಲ್ಲಿ ಊಟ ಮಾಡುವಾಗ ರೆಹಮಾನ್ ಹಾಗೂ ಆತನ ಸ್ನೇಹಿತ ಅಮ್ಜದ್ ಪಾಷಾ ನಡುವೆ ಗಲಾಟೆ ನಡೆದಿತ್ತು. ಉಳಿದ ಸ್ನೇಹಿತರು ಇವರಿಬ್ಬರ ಜಗಳ ಬಿಡಿಸಿ, ಅಮ್ಜದ್ ಪಾಷಾನನ್ನು ಮನೆಗೆ ಕಳುಹಿಸಿದ್ದರು.
ಬೆಳಗಿನ ಜಾವ 3 ಗಂಟೆಗೆ ರೆಹಮಾನ್ ರೂಮ್ ಬಳಿ ಮತ್ತೆ ಬಂದಿದ್ದ ಅಮ್ಜದ್ ಪಾಷಾ, ರೆಹಮಾನ್ ಕುತ್ತಿಗೆಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ರೆಹಮಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿ ಅಮ್ಜದ್ ಪಾಷಾನನ್ನು ಜೆಜೆ ನಗರ ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.