ಬೆಂಗಳೂರು: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಒದಗಿಸಲು ಕಾನೂನು ಜಾರಿ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೆರಿಸುವಂತೆ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ನಗರದ ಫ್ರೀಡಂ ಪಾರ್ಕ್ನಲ್ಲಿ ಕೂಡ ರೈತರು, ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದರು.
ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯಲು, ಲಖೀಂಪುರ್ ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಪಿತೂರಿ ಆರೋಪಿ ಅಜಯ್ ಮಿಶ್ರಾ ರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ಜುಲೈ 31 ರಂದು ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಭಾಗವಾಗಿ ಪ್ರತಿಭಟನೆ ಮಾಡಿದರು.
ಆರ್ಎಸ್ಎಸ್ ಆಳ-ಅಗಲ ಪುಸ್ತಕ ಬರೆದಿರುವ ಹಿನ್ನೆಲೆ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು ಗುರಿಯಾಗಿರಿಸಿ ಬಲಪಂಥೀಯ ತೀವ್ರಗಾಮಿ ಶಕ್ತಿಗಳು, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕೀಳು ಮಟ್ಟದ ಟೀಕೆ ಮಾಡುತ್ತಿರುವುದನ್ನು ಧರಣಿ ನಿರತರು ಖಂಡಿಸಿದರು.
ಪ್ರತಿಭಟನೆ ಧರಣಿಯ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಟಿ. ಯಶವಂತ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಪಿ. ಗೋಪಾಲ್, ಜೆಸಿಟಿಯು ಸಂಚಾಲಕ ಕೆ. ವಿ. ಭಟ್, ಎಐಸಿಸಿಟಿಯು ರಾಜ್ಯ ಮುಖಂಡ ಅಪ್ಪಣ್ಣ, ಎಐಕೆಕೆಎಂಎಸ್ ನ ಶಿವಪ್ರಕಾಶ್, ವಕೀಲರ ಸಂಘಟನೆಯ ಮೈತ್ರಿ, ವಿದ್ಯುತ್ ಬಳಕೆದಾರರ ಸಂಘದ ಜ್ಞಾನಮೂರ್ತಿ ವಹಿಸಿದ್ದರು.
ಓದಿ: ರಾಜ್ಯ ಸರ್ಕಾರವನ್ನು ಗವರ್ನರ್ ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ: ಬಿ ಕೆ ಹರಿಪ್ರಸಾದ್