ETV Bharat / state

ವಿದೇಶದಿಂದ ಬರುವ ಕೃಷಿ ಉತ್ಪನ್ನಗಳಿಗೆ ಆಮದು ಶುಲ್ಕ ವಿಧಿಸಿ: ಲಕ್ವಿಂದರ್​ ಸಿಂಗ್​ ಆಗ್ರಹ

ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ತ ಸಂಯುಕ್ತ ಕಿಸಾನ್​​ ಮೋರ್ಚಾದಿಂದ ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನ ನಡೆಯಿತು. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ರೈತರ ಮುಖಂಡರು ಭಾಗವಹಿಸಿದ್ದರು.

Farmers Conference was held in Bangalore
ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನ ನಡೆಯಿತು.
author img

By ETV Bharat Karnataka Team

Published : Dec 23, 2023, 5:28 PM IST

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ದೇಶದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಭಾರತದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಭಾರತಕ್ಕೆ ವಿವಿಧ ದೇಶಗಳಿಂದ ಬರುವ ಕೃಷಿ ಉತ್ಪನ್ನಗಳಿಗೆ ಆಮದು ಶುಲ್ಕ ವಿಧಿಸಬೇಕು ಎಂದು ಹಿಮಾಚಲದ ರೈತ ಮುಖಂಡ ಹಾಗೂ ಭಾರತೀಯ ಕಿಸಾನ್​ ಏಕ್ತಾ ಅಧ್ಯಕ್ಷ ಲಕ್ವಿಂದರ್​ ಸಿಂಗ್​ ಆಲೋಕ್​​​ ಆಗ್ರಹಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಶ್ವ ರೈತ ದಿನದ ಪ್ರಯುಕ್ತ ರಾಷ್ಟ್ರಮಟ್ಟದ ಸಂಯುಕ್ತ ಕಿಸಾನ ಮೋರ್ಚಾ ಹಮ್ಮಿಕೊಂಡಿದ್ದ ರೈತರ ಮಹಾ ಅಧಿವೇಶನದಲ್ಲಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಯಾವುದೇ ಉತ್ಪನ್ನ ಹೊರ ದೇಶಗಳಿಗೆ ರಫ್ತು ಆಗಿದ್ದಲ್ಲಿ ಆಯಾ ದೇಶಗಳು ತೆರಿಗೆ ವಿಧಿಸುತ್ತಿವೆ. ಆದರೆ ಭಾರತಕ್ಕೆ ಬರುತ್ತಿರುವ ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದ್ದರಿಂದ ಭಾರತದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.

ವಿಶ್ವದ ವಿವಿಧ ದೇಶಗಳಲ್ಲಿನ ಕೃಷಿ ಪದ್ದತಿಗಿಂತ ಭಾರತೀಯರ ಕೃಷಿ ಅತ್ಯಂತ ವಿಭಿನ್ನವಾಗಿದೆ.ಇಸ್ರೇಲ್​ ದೇಶದಲ್ಲಿ ಕೃಷಿ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ ಇದೆ. ಅಮೆರಿಕದಲ್ಲಿ 2 ಸಾವಿರ ಎಕರೆ ಭೂಮಿಯಲ್ಲಿ ಒಬ್ಬ ರೈತ ಕೃಷಿ ಮಾಡಬಹುದಾಗಿದೆ. ಆದರೆ, ಭಾರತದಲ್ಲಿ ಎರಡು ಸಾವಿರ ಎಕರೆ ಭೂಮಿಯಲ್ಲಿ ಎರಡು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಆ ದೇಶಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ತೆರಿಗೆ ಇಲ್ಲದೇ ದೇಶಕ್ಕೆ ತರೆಸಿಕೊಳ್ಳುವುದರಿಂದ ಇಲ್ಲಿಯ ರೈತರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್​ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ ನೆಲ ಕಚ್ಚಿದೆ. ಇದರಿಂದ ರೈತರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೃಷಿ ಉತ್ಪನ್ನಗಳಿಗೆ ರೈತರ ಕೂಲಿ ಹಾಗೂ ಶೇ.50 ರಷ್ಟು ಲಾಭ ಇರುವಂತೆ ಸ್ವಾಮಿನಾಥನ್​ ನೀಡಿರುವ ವರದಿ ತಕ್ಷಣ ಜಾರಿ ಮಾಡಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಬೆಲೆ ನೀತಿಯನ್ನು ಜಾರಿ ಮಾಡಿ, ರೈತ ಸಮುದಾಯವನ್ನು ಉಳಿಸಬೇಕು ಎಂದು ಆಗ್ರಹಿಸಿದರು. ಕಬ್ಬಿಗೆ ಪ್ರತಿ ಟನ್​ಗೆ ನಾಲ್ಕು ಸಾವಿರ ರೂ ಬೆಂಬಲ ಬೆಲೆ ನೀಡಬೇಕು. ಅನಧಿಕೃತ ಪಂಪ್​ ಸೆಟ್​ಗಳ ವಿದ್ಯುತ್​ ಸಂಪರ್ಕವನ್ನು ಸಕ್ರಮ ಮಾಡಬೇಕು. ಬಗುರ್​ ಹುಕ್ಕುಂಗೆ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಹಕ್ಕು ಪತ್ರಗಳನ್ನು ನೀಡಬೇಕು. ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಮನವಿ ಪತ್ರ ಸ್ವೀಕಾರ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್​ ಅವರು ರೈತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಕೇರಳ, ತಮಿಳುನಾಡು, ಮಹಾರಾಷ್ಟ್ರ ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ರೈತರ ಮುಖಂಡರು ಆಗಮಿಸಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ನಡೆಯುವ ರೈತರ ಹೋರಾಟಕ್ಕೆ ಹಾಜರಾಗುವಂತೆ ರೈತರಿಗೆ ಸಲಹೆ ನೀಡಿದರು.

ಅಧಿವೇಶನದ ಉದ್ದೇಶಗಳು: - ರೈತರ ಎಲ್ಲ ರೀತಿಯ ಸಾಲಮನ್ನಾ ಮಾಡಬೇಕು.
- ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ಜಾರಿ ಮಾಡಬೇಕು.
- ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.
- ಬರದ ಹಿನ್ನೆಲೆ ಪ್ರತಿ ಎಕರೆಗೆ 25,000 ಬಿಡುಗಡೆ ಮಾಡಬೇಕು.
- ಕಬ್ಬಿಗೆ ಕನಿಷ್ಠ ಬೆಲೆ ಪ್ರತಿ ಟನ್ 4000 ನಿಗದಿ ಮಾಡಬೇಕು.
- ಎಲ್ಲಾ ಕೃಷಿ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಜಾರಿಗೊಳಿಸಬೇಕು.
- 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ಯೋಜನೆ ಜಾರಿ ಮಾಡಬೇಕು.
- ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ 10 ಮೀಸಲಾತಿ ನೀಡುವ ನೀತಿ ಜಾರಿ ಮಾಡಬೇಕು.

ಇದನ್ನೂಓದಿ:ಹೊಲದಲ್ಲಿ ಎಸೆದಿದ್ದ ಮದ್ಯದಬಾಟಲಿ, ಪ್ಲಾಸ್ಟಿಕ್ ಸ್ವಚ್ಛಗೊಳಿಸಿ ರಾಷ್ಟ್ರೀಯ ರೈತ ದಿನ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.