ETV Bharat / state

ಡ್ರಗ್ಸ್​​ ದಂಧೆ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಮಗನ ಬಂಧನ

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಕೇರಳದ ಮಾಜಿ ಗೃಹ‌ ಸಚಿವ ಬಾಲಕೃಷ್ಣನ್ ಅವರ ಮಗ ಬಿನೇಶ್ ಕೊಡಿಯೇರಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

Farmer Kerala Home minister Son arrested in Drug case
ಕೇರಳ ಮಾಜಿ ಗೃಹಮಂತ್ರಿ ಮಗ ಬಂಧ
author img

By

Published : Oct 29, 2020, 3:34 PM IST

Updated : Oct 29, 2020, 3:54 PM IST

ಬೆಂಗಳೂರು: ಡ್ರಗ್ಸ್​​ ದಂಧೆ ಪ್ರಕರಣದಲ್ಲಿ ಕೇರಳ ಮಾಜಿ ಗೃಹ‌ ಸಚಿವ, ಹಾಲಿ ಸಿಪಿಎಂ ಪಕ್ಷದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೇಶ್ ಕೊಡಿಯೇರಿಯನ್ನು ಬೆಂಗಳೂರಿನ ಜಾರಿ‌ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್ ಅನುಪ್ ಜೊತೆ ನಂಟು ಹೊಂದಿದ ಆರೋಪದಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೊಟೀಸ್ ಜಾರಿ ಮಾಡಿತ್ತು. ಅದರಂತೆ ವಿಚಾರಣೆ ಎದುರಿಸಿದ ಬಳಿಕ ಇಡಿ ಅಧಿಕಾರಿಗಳು ಅನುಪ್​ನನ್ನು ಬಂಧಿಸಿದ್ದಾರೆ‌.

ಬಿನೇಶ್ ಕೊಡಿಯೇರಿಯನ್ನು ಬಂಧಿಸಿ, ಕರೆದೊಯ್ಯುತ್ತಿರುವ ಅಧಿಕಾರಿಗಳು

ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು ಅನುಪ್ ಮೊಹಮ್ಮದ್​ಗೆ ಬಿನೇಶ್ 50 ಲಕ್ಷ ರೂ. ಹಣಕಾಸಿನ ನೆರವು‌ ನೀಡಿದ್ದ. ಅಲ್ಲದೆ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಅನುಪ್, ಅನಿಕಾ ಸೇರಿದಂತೆ ಹಲವು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Last Updated : Oct 29, 2020, 3:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.