ETV Bharat / state

ನಾಳೆ ಶಾಂತಿ ಕದಡಲೆತ್ನಿಸುವ BJP,RSS​ ಪ್ರಚೋದನೆಗೆ ಒಳಗಾಗಬೇಡಿ.. ಮಾಜಿ ಸಚಿವ ಡಿಕೆಶಿ ಮನವಿ

ಹಿಂದುಳಿದ ಕನಕಪುರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜಾತಿ, ಧರ್ಮದ ಹೆಸರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು. ಎಲ್ಲರೂ ಅವರವರ ಧರ್ಮ, ಜಾತಿಯಲ್ಲಿ ನಂಬಿಕೆ ಆಚಾರ-ವಿಚಾರಗಳಂತೆ ಬದುಕಬೇಕು. ನಾವೆಲ್ಲರೂ ಇಲ್ಲಿ ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಹಾಗೇ ಬದುಕಿರೋಣ ಎಂದರು.

author img

By

Published : Jan 12, 2020, 11:58 AM IST

farmer dks video release in bangalore
ಮಾಜಿ ಸಚಿವ ಡಿ.ಕೆ.ಶಿವಕುಮಾರ

ಬೆಂಗಳೂರು: ಕನಕಪುರದ ಹೆಸರು ಕೆಡಿಸುವ ನಿಟ್ಟಿನಲ್ಲಿ ಬಿಜೆಪಿ, ಆರ್​ಎಸ್​ಎಸ್​ ಮುಖಂಡರ ಪ್ರಚೋದನಾ ಭಾಷಣಕ್ಕೆ ಮುಂದಾಗುತ್ತಾರೆ. ಅದಕ್ಕಾಗಿ ಯುವಕರು, ಹಿರಿಯರು ಅವರ ಪ್ರಚೋದನೆಗೆ ಒಳಗಾಗ ಬೇಡಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ ಮಾಡಿದರು.

ಕನಕಪುರದ ಜನತೆಗೆ ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ..

ಜನವರಿ 13ರಂದು ಬಿಜೆಪಿ,ಆರ್​ಎಸ್​ಎಸ್​ ನೇತೃತ್ವದಲ್ಲಿ ಮಠಾಧೀಶರು ಸೇರಿ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ವಿಚಾರವಾಗಿ ಅಶಾಂತಿ ಸೃಷ್ಟಿಸಲಿದ್ದಾರೆ. ಅವರ ಪ್ರಚೋದನೆಗೆ ಯಾರೂ ಕೂಡ ಒಳಗಾಗಬಾರದು. ಕನಕಪುರದಲ್ಲಿ ಶಾಂತಿ ಕಾಪಾಡಬೇಕು ಎಂದು ಡಿಕೆಶಿ ಮನವಿ ಮಾಡಿದರು.

ಹಿಂದುಳಿದ ಕನಕಪುರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜಾತಿ, ಧರ್ಮದ ಹೆಸರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು. ಎಲ್ಲರೂ ಅವರವರ ಧರ್ಮ, ಜಾತಿಯಲ್ಲಿ ನಂಬಿಕೆ ಆಚಾರ-ವಿಚಾರಗಳಂತೆ ಬದುಕಬೇಕು. ನಾವೆಲ್ಲರೂ ಇಲ್ಲಿ ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಹಾಗೇ ಬದುಕಿರೋಣ ಎಂದರು.

ಬೆಂಗಳೂರು: ಕನಕಪುರದ ಹೆಸರು ಕೆಡಿಸುವ ನಿಟ್ಟಿನಲ್ಲಿ ಬಿಜೆಪಿ, ಆರ್​ಎಸ್​ಎಸ್​ ಮುಖಂಡರ ಪ್ರಚೋದನಾ ಭಾಷಣಕ್ಕೆ ಮುಂದಾಗುತ್ತಾರೆ. ಅದಕ್ಕಾಗಿ ಯುವಕರು, ಹಿರಿಯರು ಅವರ ಪ್ರಚೋದನೆಗೆ ಒಳಗಾಗ ಬೇಡಿ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ ಮಾಡಿದರು.

ಕನಕಪುರದ ಜನತೆಗೆ ಮಾಜಿ ಸಚಿವ ಡಿ ಕೆ ಶಿವಕುಮಾರ ಮನವಿ..

ಜನವರಿ 13ರಂದು ಬಿಜೆಪಿ,ಆರ್​ಎಸ್​ಎಸ್​ ನೇತೃತ್ವದಲ್ಲಿ ಮಠಾಧೀಶರು ಸೇರಿ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ವಿಚಾರವಾಗಿ ಅಶಾಂತಿ ಸೃಷ್ಟಿಸಲಿದ್ದಾರೆ. ಅವರ ಪ್ರಚೋದನೆಗೆ ಯಾರೂ ಕೂಡ ಒಳಗಾಗಬಾರದು. ಕನಕಪುರದಲ್ಲಿ ಶಾಂತಿ ಕಾಪಾಡಬೇಕು ಎಂದು ಡಿಕೆಶಿ ಮನವಿ ಮಾಡಿದರು.

ಹಿಂದುಳಿದ ಕನಕಪುರವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜಾತಿ, ಧರ್ಮದ ಹೆಸರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಾರದು ಎಂದು ಹೇಳಿದರು. ಎಲ್ಲರೂ ಅವರವರ ಧರ್ಮ, ಜಾತಿಯಲ್ಲಿ ನಂಬಿಕೆ ಆಚಾರ-ವಿಚಾರಗಳಂತೆ ಬದುಕಬೇಕು. ನಾವೆಲ್ಲರೂ ಇಲ್ಲಿ ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಹಾಗೇ ಬದುಕಿರೋಣ ಎಂದರು.

Intro:newsBody:ನಾಳೆ ಶಾಂತಿ ಕದಡಲು ಬರುವ ಬಿಜೆಪಿಯವರಿಂದ ಪ್ರಚೋಧನೆಗೆ ಒಳಗಾಗಬೇಡಿ: ಡಿಕೆಶಿ

ಬೆಂಗಳೂರು: ಕಪಾಲ ಬೆಟ್ಟದಲ್ಲಿ ಯೇಸುಪ್ರತಿಮೆ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕನಕಪುರ ಜನತೆಗಾಗಿ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ.
ದ್ವನಿ ಮುದ್ರಿಕೆಯ ಆರಂಭದಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕನಕಪುರ ಜನತೆಗೆ ಸಲ್ಲಿಸಿರುವ ಅವರು, ಜ.13ರಂದು ಕೆಲ ಬಿಜೆಪಿ ಕಾರ್ಯಕರ್ತರು, ಮುಖಂಡರು, ಆರ್‍ಎಸ್‍ಎಸ್ ನಾಯಕರು ಕೆಲ ಮಠಾಧೀಶರನ್ನು ಕರೆದುಕೊಂಡು ಬಂದು ಕನಕಪುರಕ್ಕೆ ಕೆಟ್ಟ ಹೆಸರು ತರುವ ಕಾರ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭ ಸ್ಥಳೀಯ ಜನತೆ ಪ್ರೋಚನೆಗೆ ಒಳಗಾಗಿ, ಕಾನೂನು ಸೂವ್ಯವಸ್ಥೆ ವಿಫಲವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಏಸು ಕ್ರೈಸ್ತನ ಕಪಾಲ ಬೆಟ್ಟ 400 ವರ್ಷ ಇತಿಹಾಸವಿರುವ ಸ್ಥಳ. ಅಲ್ಲಿ ಅಶಾಂತಿ ಮೂಡಿಸಬೇಕು, ಕನಕಪುರಕ್ಕೆ ಕೆಟ್ಟ ಹೆಸರು ತರಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದೇವೆ. ಕಳೆದ 400 ವರ್ಷಗಳಿಗೂ ಹೆಚ್ಚು ಕಾಲದಿಂದ ಕ್ರೈಸ್ತರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿನ ಜನರಿಗೆ ನಾನು ಮಾರ್ಗದರ್ಶನ ಕೊಟ್ಟು ಜಮೀನನ್ನು ಮಂಜೂರು ಮಾಡಿಸಿಕೊಟ್ಟಿದ್ದೆ ಎಂದಿದ್ದಾರೆ.
ಕನಕಪುರದ ಈ ಕಪಾಲ ಬೆಟ್ಟದಲ್ಲಿ ದೊಡ್ಡದಾದ ಹಾಗೂ ಎತ್ತರವಾದ ಏಸು ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿದ್ದರು. ನಾನು ನೂರಾರು ದೇವಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದೇನೆ. ನೂರಾರು ವಿದ್ಯಾ ಸಂಸ್ಥೆಗೆ ಪ್ರೋತ್ಸಾಹ, ಸಹಾಯ ನೀಡಿದ್ದೇನೆ. ಆದರೆ ಜ.13ರಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ಬಿಜೆಪಿಯವರು ದೊಡ್ಡ ಸಭೆ ನಡೆಸಿ, ನನ್ನ, ನನ್ನ ಸೋದರನ ಹಾಗೂ ನಿಮ್ಮ ಮೇಲೆ ಯಾವುದೇ ಸಮಾಜದ ಮೇಲೆ ಅನೇಕ ಸಾಮಾಜಿಕ ಹಿತವಿಲ್ಲದ ಮಾತನಡುವ, ಆರೋಪ ಹೊರಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ಅನುಮಾನ ಇದೆ. ಇದರಿಂದ ನೀವೆಲ್ಲಾ ಅತ್ಯಂತ ಶಾಂತಿಯಿಂದ ಇರಿ. ಯುವಕರು, ಹಿರಿಯರು ಯಾವ ಪ್ರಚೋದನೆಗೂ ಒಳಗಾಗಬೇಡಿ. ಅವರು ಬರಲಿ, ಏನು ಬೇಕಾದರೂ ಮಾತನಾಡಲಿ, ಯಾರಿಗೆ ಬೇಕಾದರೂ ಅರ್ಜಿ ಕೊಟ್ಟುಕೊಳ್ಳಲಿ, ತಲೆಕೆಡಿಸಿಕೊಳ್ಳಬೇಡಿ. ಇದು ಭಕ್ತನ ಭಗವಂತನ ವಿಚಾರ, ಸಂಬಂಧ, ಅವರವರ ಜಾತಿಯ ವಿಶ್ವಾಸ, ನಂಬಿಕೆ ಅವರು ಮಾಡಿಕೊಂಡು ಹೋಗುತ್ತಾರೆ. ಅದಿಂದ ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಶಾಂತಿ ಸೂವ್ಯವಸ್ಥೆ ಕಾಪಾಡಿಕೊಂಡು ಹೋಗುವ ಕೆಲಸ ಮಾಡೋಣ.
ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಕನಕಪುರ ಒಂದಾಗಿದೆ. ಇದು ಇಡೀ ರಾಷ್ಟ್ರದಲ್ಲೇ ಮಹಾತ್ಮಗಾಂಧಿ ಹೆಸರಿನಲ್ಲಿ ಕೈಗೊಂಡ ಕಾರ್ಯಕ್ರಮ ರಾಷ್ಟ್ರಕ್ಕೆ ಮಾದರಿಯಾಗಿದೆ. ಇಲ್ಲಿನ ಪ್ರಗತಿಯನ್ನು ಸಹಿಸಲು ಆರ್‍ಎಸ್‍ಎಸ್, ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಶಾಂತಿ ಮೂಡಿಸಲು ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಅವಕಶ ಕೊಡದೇ ಶಾಂತಿಯನ್ನು ಕಾಪಾಡಿ ಎಂದು ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.