ETV Bharat / state

ಹಾವೇರಿ: ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ; ಪ್ರಸಾದ ಸ್ವೀಕರಿಸಿದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು - FERTILITY PRASADA

ಹಾವೇರಿಯ ಶಾಂತೇಶ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರ ಕುಟುಂಬದವರು ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದ ಮಹಿಳೆಯರಿಗೆ ಸಂತಾನ ಔಷಧಿ ನೀಡುತ್ತಾ ಬಂದಿದ್ದಾರೆ. ಇಲ್ಲಿಯ ಪ್ರಸಾದ ಸೇವಿಸಿದ ಬಳಿಕ ನಮಗೆ ಮಕ್ಕಳಾಗಿವೆ ಎಂದು ಮಹಿಳೆಯರು ತಿಳಿಸಿದ್ದಾರೆ.

ಹಾವೇರಿಯ ಶಾಂತೇಶ ದೇವಾಲಯದಲ್ಲಿ ಮಕ್ಕಳಾಗುವ ಔಷಧಿ ವಿತರಣೆ
ಹಾವೇರಿಯ ಶಾಂತೇಶ ದೇವಾಲಯದಲ್ಲಿ ಮಕ್ಕಳಾಗುವ ಔಷಧಿ ವಿತರಣೆ (ETV Bharat)
author img

By ETV Bharat Karnataka Team

Published : Oct 13, 2024, 9:18 AM IST

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದ ಶಾಂತೇಶ ದೇವಸ್ಥಾನದ ಅರ್ಚಕರ ಕುಟುಂಬಸ್ಥರು ಹಲವು ವರ್ಷಗಳಿಂದ ಸಂತಾನ ಔಷಧಿ ನೀಡುತ್ತಾ ಬರುತ್ತಿದ್ದಾರೆ. ಪ್ರತಿವರ್ಷ ವಿಜಯದಶಮಿಯಂದು ಇಲ್ಲಿ ಔಷಧಿ ವಿತರಿಸಲಾಗುತ್ತದೆ. ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದವರಿಗೆ ಇಲ್ಲಿನ ಔಷಧಿ ಪರಿಣಾಮಕಾರಿ ಎಂಬ ನಂಬಿಕೆ ಇದೆ. ನಿನ್ನೆ ಮಧ್ಯಾಹ್ನ ಎರಡು ಔಷಧಿ ಗಂಟೆಗೆ ವಿತರಿಸಲಾಗಿದ್ದು, 2 ಸಾವಿರಕ್ಕೂ ಅಧಿಕ ಮಹಿಳೆಯರು ಸರತಿಯಲ್ಲಿ ನಿಂತು ಔಷಧಿ ಸ್ವೀಕರಿಸಿದ್ದಾರೆ.

"ಹಲವು ದಿನಗಳ ಕಾಲ ಉಪವಾಸ ವ್ರತ ಕೈಗೊಂಡು ವನಸ್ಪತಿಗಳಿಂದ ಈ ಔಷಧಿ ತಯಾರಿಸಲಾಗುತ್ತದೆ. ಔಷಧಿಯನ್ನು ಮೂರು ವರ್ಷ ತೆಗೆದುಕೊಳ್ಳಬೇಕು. ಕೆಲವರಿಗೆ ಮೊದಲ ವರ್ಷವೇ ಮಕ್ಕಳಾಗಿದ್ದುಂಟು. ಇನ್ನು ಕೆಲವರಿಗೆ ಎರಡು-ಮೂರು ವರ್ಷಗಳಲ್ಲಿ ಮಕ್ಕಳಾಗಿವೆ. ಇದು ಇಲ್ಲಿಯ ಶಾಂತೇಶನ ಆಶೀರ್ವಾದ" ಎಂದು ದೇಗುಲದ ಅರ್ಚಕರು ಹೇಳಿದರು.

ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ (ETV Bharat)

ಔಷಧಿ ಪಡೆಯಲು ಆಂಧ್ರ ಪ್ರದೇಶ, ತಮಿಳುನಾಡು ಅಷ್ಟೇ ಅಲ್ಲದೆ ಈ ವರ್ಷ ದುಬೈನಿಂದಲೂ ಸಹ ಮಹಿಳೆಯರು ಆಗಮಿಸಿದ್ದುದು ವಿಶೇಷ.

ಮುಂಜಾನೆಯಿಂದಲೇ ಶಾಂತೇಶ ದೇವಸ್ಥಾನಕ್ಕೆ ಆಗಮಿಸುವ ಮಹಿಳೆಯರು ದೇವರ ದರ್ಶನ ಪಡೆಯುತ್ತಾರೆ. ನಂತರ ಸರತಿಯಲ್ಲಿ ನಿಂತು ಔಷಧಿ ಸ್ವೀಕರಿಸುತ್ತಾರೆ. ಅಕ್ಕಪಕ್ಕದ ಗ್ರಾಮದವರು, ಸಂಬಂಧಿಕರು, ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಔಷಧಿ ಪಡೆಯಲು ಬಂದಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ.

ಶಾಂತೇಶನ ಪ್ರಸಾದವೆಂದೇ ಕರೆಯಲಾಗುವ ಈ ಪ್ರಸಾದವನ್ನು ಬಾಳೆಹಣ್ಣಿನಲ್ಲಿಟ್ಟು ನೀಡಲಾಗುತ್ತದೆ. ಅರ್ಚಕರು ನೀಡುವ ಸ್ಥಳದಲ್ಲೇ ಪ್ರಸಾದ ಸ್ವೀಕರಿಸಬೇಕು. ನಂತರ ನೀಡುವ ತೆಂಗಿನಕಾಯಿಯನ್ನು ಉಡಿ ತುಂಬಲಾಗುತ್ತದೆ. ತೆಂಗಿನಕಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಿ ದೇವರಮನೆಯಲ್ಲಿಟ್ಟು ಪೂಜೆ ಮಾಡಬೇಕು. ಶಾಂತೇಶನ ಪ್ರಸಾದ ಪಡೆದ ಬಹತೇಕ ಮಹಿಳೆಯರು ಸಂತಾನಭಾಗ್ಯ ಪಡೆದಿದ್ದಾರೆ. ಈ ರೀತಿ ಮಕ್ಕಳನ್ನು ಪಡೆದ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸುತ್ತಾರೆ. ಮಕ್ಕಳನ್ನು ಕರೆದುಕೊಂಡು ಬಂದು ದೇವರಿಗೆ ತೆಂಗಿನಕಾಯಿ ತುಲಾಭಾರ ಮಾಡುತ್ತಾರೆ.

ಹಲವು ವೈದ್ಯರಲ್ಲಿ ತೋರಿಸಿ ಮಕ್ಕಳಾಗದ ಮಹಿಳೆಯರಿಗೆ ಇಲ್ಲಿ ಮಕ್ಕಳಾಗಿರುವ ಉದಾಹರಣೆಗಳಿವೆ. ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲ ಧರ್ಮದ ಮಹಿಳೆಯರು ಇಲ್ಲಿ ಔಷಧಿ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಮಹಿಳೆಯರ ಸಂಖ್ಯೆ ಅಧಿಕವಾಗುತ್ತಿದೆ. ದೇವರಲ್ಲಿ ನಂಬಿಕೆ, ಶ್ರದ್ಧೆ ಇಟ್ಟು ಬಂದರೆ ಶಾಂತೇಶ ಖಂಡಿತಾ ಮಕ್ಕಳಭಾಗ್ಯ ನೀಡುತ್ತಾನೆ ಎನ್ನುತ್ತಾರೆ ಸಂತಾನ ಪಡೆದ ಮಹಿಳೆಯರು.

ಇದನ್ನೂ ಓದಿ: 'ಆಕಾಶದತ್ತ ಚಿಗರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್': ಕಾರ್ಣಿಕ ನುಡಿದ ಗೊರವಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.