ETV Bharat / state

ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ FB​ ಖಾತೆ: ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿ ಸೆರೆ

ಡಾ.ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ತೆರೆದು, ಮಹಿಳೆಯರಿಗೆ ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Fake Facebook account in the name of sexologist Padmini Prasad
ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿ ಸೆರೆ
author img

By

Published : Oct 21, 2022, 5:53 PM IST

ಬೆಂಗಳೂರು: ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್​ಬುಕ್‌ ಖಾತೆ ತೆರೆಯಲಾಗಿತ್ತು. ಇದರ ಮೂಲಕ ಯುವತಿಯರು ಮತ್ತು ಮಹಿಳೆಯರಿಗೆ ಅಶ್ಲೀಲ ಫೋಟೋ ಹಾಗೂ ಸಂದೇಶ ಕಳುಹಿಸುತ್ತಿದ್ದ ಕಾಮುಕನನ್ನು ನಗರ ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಗದೀಶ್ ಬಂಧಿತ ಆರೋಪಿ. ದಾವಣಗೆರೆ ಮೂಲದ ಈತ ಅವಿವಾಹಿತ. ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ ಜಗದೀಶ್, ಪ್ರಖ್ಯಾತ ಲೈಂಗಿಕ ತಜ್ಞೆ‌ ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ನಕಲಿ‌‌ ಫೇಸ್​​ಬುಕ್​ ಖಾತೆ ತೆರೆದಿದ್ದ.

ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ

ಇದೇ ಹೆಸರಿನ ಫೇಸ್​​ಬುಕ್ ಖಾತೆಯಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದನಂತೆ. ಅಲ್ಲದೇ ಅಶ್ಲೀಲ ಭಂಗಿಯ ಫೋಟೋ ಕಳುಹಿಸಿ ವಿಕೃತಿ ಮೆರೆದಿದ್ದಾನೆ. ಅಸಭ್ಯವಾಗಿ ಮೆಸೇಜ್ ಬರುತ್ತಿರುವ ಕುರಿತಂತೆ ಪದ್ಮಿನಿ ಅವರಿಗೆ ಮಹಿಳೆಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ‌. ನಂತರ ಈ ಬಗ್ಗೆ ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ರಾತ್ರಿ ವೇಳೆ ಆ್ಯಕ್ಟೀವ್ ಆಗ್ತಿದ್ದ ಕಾಮುಕ ; ಖ್ಯಾತ ಲೈಂಗಿಕ ತಜ್ಞೆ ಹೆಸರಿನಲ್ಲಿ ಮಹಿಳೆಯರಿಗೆ ಅಶ್ಲೀಲ 'ಸಂದೇಶ'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.