ಬೆಂಗಳೂರು: ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೆಸರಲ್ಲಿ ನಕಲಿ ಇ-ಮೇಲ್ ಕ್ರಿಯೇಟ್ ಮಾಡಿರುವ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಚಿವ ಡಾ.ಕೆ.ಸುಧಾಕರ್ ಹೆಸರಲ್ಲಿ managingdirectoremail1001@gmail.com ಎಂಬ ನಕಲಿ ಇ-ಮೇಲ್ ಸೃಷ್ಟಿಸಿ, ನಾನು ಸಚಿವ ಡಾ.ಕೆ.ಸುಧಾಕರ್ ನಮಗೆ ನಿಮ್ಮ ಸಹಾಯ ಬೇಕಿದೆ. ಅಮೆಜಾನ್ನಲ್ಲಿ ಗಿಫ್ಟ್ ಖರೀದಿಸಲು ಸಹಾಯ ಮಾಡಿ ಎಂದು ಶಿಕ್ಷಣ ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಮೇಲ್ ಕಳುಹಿಸಿ ಸಹಾಯಯಾಚನೆ ಮಾಡಿದ್ದಾರೆ. ಸರ್ಕಾರದ ಅಧಿಕೃತ ಮೇಲ್ ಐಡಿಗಳಿಗೆ ನಕಲಿ ಇ-ಮೇಲ್ ಸಂದೇಶ ರವಾನಿಸಲಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ಸುಧಾಕರ್ ಅವರ ವಿಶೇಷಾಧಿಕಾರಿ ಗಿರಿಗೌಡ ಬಿ.ಕೆ ಎಂಬುವವರು ಸಚಿವರ ಗಮನಕ್ಕೆ ತಂದಿದ್ದು, ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.