ETV Bharat / state

ಪೊಲೀಸ್ ಕಾನ್​ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ನಕಲಿ ಅಭ್ಯರ್ಥಿಗಳು.. - Duplicate Candidate arrest In Police Constable Recruitment Exam

ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜು ಕೇಂದ್ರದಲ್ಲಿ ಹನುಮಂತ ಎಂಬ ಹೆಸರಿನಲ್ಲಿ ಮಲ್ಲಿಕಾರ್ಜುನ್, ಶೃಂಗೇರಿ ಪೊಲೀಸ್ ಠಾಣೆಯ ಸಿವಿಲ್ ಕಾನ್‌ಸ್ಟೇಬಲ್ ನಾಗಪ್ಪ ತುಕ್ಕನವರ್ ಹೆಸರಿನಲ್ಲಿ ಕೆಂಗೇರಿಯ ಜೆಎಸ್ಎಸ್​ ಇಂಜಿನಿಯರಿಂಗ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಹಾಲಪ್ಪ ಹರಳೂರು ಪರೀಕ್ಷೆ ಬರೆಯುತ್ತಿದ್ದರು..

fake-candidates-arrested-in-police-constable-recruitment-exam
ಪೊಲೀಸ್ ಕಾನ್​ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ನಕಲಿ ಅಭ್ಯರ್ಥಿಗಳು
author img

By

Published : Nov 22, 2020, 5:51 PM IST

ಬೆಂಗಳೂರು : ಪೊಲೀಸ್ ಕಾನ್​ಸ್ಟೇಬಲ್​​ ನೇಮಕಾತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದು, ಈ ಸಂಬಂಧ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಂದು ರಾಜ್ಯದೆಲ್ಲೆಡೆ ವಿಶೇಷ ಮೀಸಲು ಪೊಲೀಸ್ ಪೇದೆ (ಬ್ಯಾಂಡ್ ಮನ್ ) ಪರೀಕ್ಷೆ ನಿಗದಿಯಾಗಿತ್ತು. 17,940 ಹುದ್ದೆಗಳಿಗಾಗಿ ಪರೀಕ್ಷೆ ನಡೆದಿತ್ತು. ಬೆಂಗಳೂರಿನ 36 ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಕೊಠಡಿಯ ಮೇಲ್ವಿಚಾರಣೆ ತಪಾಸಣೆ ವೇಳೆ ಅಸಲಿ ಅಭ್ಯರ್ಥಿಗಳ ಸೋಗಿನಲ್ಲಿ ಪರೀಕ್ಷೆ ಬರೆಯುತ್ತಿದ್ದ 6 ಮಂದಿ ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.

ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜು ಕೇಂದ್ರದಲ್ಲಿ ಹನುಮಂತ ಎಂಬ ಹೆಸರಿನಲ್ಲಿ ಮಲ್ಲಿಕಾರ್ಜುನ್, ಶೃಂಗೇರಿ ಪೊಲೀಸ್ ಠಾಣೆಯ ಸಿವಿಲ್ ಕಾನ್‌ಸ್ಟೇಬಲ್ ನಾಗಪ್ಪ ತುಕ್ಕನವರ್ ಹೆಸರಿನಲ್ಲಿ ಕೆಂಗೇರಿಯ ಜೆಎಸ್ಎಸ್​ ಇಂಜಿನಿಯರಿಂಗ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಹಾಲಪ್ಪ ಹರಳೂರು ಪರೀಕ್ಷೆ ಬರೆಯುತ್ತಿದ್ದರು.

ಅದೇ ರೀತಿ ಪೂರ್ವ ವಿಭಾಗದ ಜೀವನ ಭೀಮಾನಗರ ಹಾಗೂ ಇಂದಿರಾನಗರ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಪತ್ತೆ ಆಗಿದ್ದಾರೆ. ಈ ಪೈಕಿ ಒಬ್ಬ ಅಭ್ಯರ್ಥಿ ಬ್ಲೂಟೂತ್ ಡಿವೈಸ್ ಮೂಲಕ ಕಾಪಿ ಮಾಡ್ತಾ ಇದ್ದದ್ದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.