ETV Bharat / state

ಯಶಸ್ವಿನಿ ಯೋಜನೆ ಖಾಸಗಿ ಸಂಸ್ಥೆ ನೌಕರರರಿಗೂ ವಿಸ್ತರಣೆ: ರಾಜ್ಯ ಸರ್ಕಾರ ಸೂಚನೆ

author img

By

Published : Dec 25, 2022, 5:10 PM IST

Updated : Dec 25, 2022, 5:23 PM IST

ಸರ್ಕಾರದಿಂದ ಸಿಹಿ ಸುದ್ದಿ- ಯಶಸ್ವಿನಿ ಯೋಜನೆ ಇನ್ಮುಂದೆ ಖಾಸಗಿ ಸಂಸ್ಥೆ ನೌಕರರಿಗೂ ಅನ್ವಯ- ಡಿಸೆಂಬರ್ 31 ಹೆಸರು ನೋಂದಾಯಿಸಿಕೊಳ್ಳಲು ಅಂತಿಮ ದಿನ

Extension of Yashavini Yojana to private organization employees
ಯಶಸ್ವಿನಿ ಯೋಜನೆ ಖಾಸಗಿ ಸಂಸ್ಥೆ ನೌಕರರರಿಗೂ ವಿಸ್ತರಣೆ

ಬೆಂಗಳೂರು: ರೈತ ಸಮುದಾಯಕ್ಕೆ ಅನುಕೂಲವಾಗಿರುವ ಯಶಸ್ವಿನಿ ಯೋಜನೆಯ ಲಾಭ ಇನ್ಮುಂದೆ ಖಾಸಗಿ ಸಂಸ್ಥೆ ನೌಕರರಿಗೂ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಖಾಸಗಿ ಸಂಸ್ಥೆ ನೌಕರರಿಗೂ ಈ ಯೋಜನೆಯ ಅನುಕೂಲ ಕಲ್ಪಿಸಲು ಸರ್ಕಾರ ತೀರ್ಮಾನಿಸಿದ್ದು, ಕಾಲಮಿತಿಯಲ್ಲಿ ಸೇರ್ಪಡೆಗೊಳ್ಳುವಂತೆ ಸೂಚಿಸಿದೆ.

ಹೌದು, 2018ರಲ್ಲಿ ನಿಂತು ಹೋಗಿದ್ದ ಯೋಜನೆಯನ್ನು ಸರ್ಕಾರ ಮತ್ತೆ ಜಾರಿಗೆ ತಂದಿದೆ. ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ನಿಗದಿ ಮಾಡಲಾಗಿದೆ. 4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ವಂತಿಕೆ ಕಟ್ಟಬೇಕಾಗಿದೆ. ನೊಂದಣಿ ಪ್ರಕ್ರಿಯೆಯನ್ನು ನ.1 ರಿಂದ ಪ್ರಾರಂಭಿಸಲಾಗಿದೆ. 2022-23ನೇ ಬಜೆಟ್​ನಲ್ಲಿ ಯೋಜನೆಗೆ 300 ಕೋಟಿ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಈಗ ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ಬಂದಿದ್ದು, ಈಗಾಗಲೇ ನೋಂದಾವಣೆ ಆರಂಭವಾಗಿದೆ. ಡಿಸೆಂಬರ್ 31 ನೋಂದಾಯಿಸಿಕೊಳ್ಳಲು ಅಂತಿಮ ದಿನವಾಗಿದ್ದು, ಇದರ ಮಧ್ಯೆ ಖಾಸಗಿ ನೌಕರರೂ ಸಹ ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಳ್ಳಲು ಈಗ ಅವಕಾಶ ಕಲ್ಪಿಸಿಕೊಡಲಾಗಿದೆ. ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಖಾಸಗಿ ನೌಕರರ ಮಾಸಿಕ ವೇತನ 30,000 ಅಥವಾ ವಾರ್ಷಿಕ 3.60 ಲಕ್ಷ ರೂಪಾಯಿಗಳಿದ್ದರೆ ಅಂಥವರು ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಳ್ಳಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ಹಿಂದೆ ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು. ಯಶಸ್ವಿನಿ ಯೋಜನೆಗೆ ಸದಸ್ಯತ್ವ ನೋಂದಣಿಯಲ್ಲಿ ಹತ್ತು ಜನರಿಗೆ ಅವಕಾಶವಿದ್ದು, ಹೆಚ್ಚುವರಿ ಜನರ ಸೇರ್ಪಡೆಗೆ ನಮೂನೆ ಲಗತ್ತಿಸಿ ಮಾಹಿತಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರಿಗೆ ಯಶಸ್ವಿನಿ ಕಾರ್ಡ್ ಪಡೆಯಲು ಅವಕಾಶವಿದ್ದರೂ ಸಹ ಯಾವುದಾದರೂ ಒಂದು ಯೋಜನೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದಾಗಿದೆ ಎಂಬ ವಿವರ ನೀಡಿದೆ.

ಯಶಸ್ವಿನಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಕಾಯಿಲೆಗಳಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿಯೊಬ್ಬ ಸದಸ್ಯನಿಗೆ ಯುನಿಕ್ ಐಡಿ ನಂಬರ್​​​ಗಳಿರುವ ಬಾರ್ ಕೋಡ್ ರೀಡಿಂಗ್ ವ್ಯವಸ್ಥೆ ಇರುವ ಗುರುತಿಸುವ ಕಾರ್ಡ್ ಅನ್ನು ಕೊಡಲಾಗುತ್ತದೆ. ಯಶಸ್ವಿನಿ ಈ ಯೋಜನೆಯಲ್ಲಿ 823 ಬಗೆಯ ಶಸ್ತ್ರಚಿಕಿತ್ಸೆಗಳು ಒಳಗೊಂಡಿದೆ ಎಂಬ ವಿವರ ಸಹ ನೀಡಲಾಗಿದೆ.

ಏನಿದು ಯಶಸ್ವಿನಿ ಯೋಜನೆ?: ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ'. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್​​ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.

ಸೌಲಭ್ಯ ಪಡೆಯುವುದು ಹೇಗೆ?: ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಬೇಕಾದಲ್ಲಿ ತಮ್ಮ ಯೂನಿಕ್ ಐಡಿ(ID) ಸಂಖ್ಯೆ ಹೊಂದಿರುವ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿಯಲ್ಲಿ ಅಂಗೀಕೃತವಾದ ಆಸ್ಪತ್ರೆಗೆ ಭೇಟಿ ನೀಡಬೇಕು.

ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಂತಹ ಫಲಾನುಭವಿಗಳ ಆರೋಗ್ಯ ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆ ಅವಶ್ಯಕಂಡು ಬಂದಲ್ಲಿ ಮತ್ತು ಸದರಿ ಶಸ್ತ್ರಚಿಕಿತ್ಸೆಯ ಯೋಜನೆಯಲ್ಲಿ ಒಳಗೊಂಡಿದ್ದಲ್ಲಿ, ವಿವರಗಳೊಂದಿಗೆ ಅನುಷ್ಠಾನ ಸಂಸ್ಥೆಗೆ ಇಂಟರ್ ನೆಟ್ ಮುಖಾಂತರ ಪ್ರಸ್ತಾಪ ಕಳಿಸುವರು. ಅನುಷ್ಟಾನ ಸಂಸ್ಥೆಯವರು ಪ್ರಸ್ತಾಪವನ್ನು ಪರಿಶೀಲಿಸಿ ಚಿಕಿತ್ಸಾ ಪೂರ್ವಾನುಮತಿ ನೀಡಿದ ನಂತರ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವರು.ಯಶಸ್ವಿನಿ ಫಲಾನುಭವಿಗಳು ಆಸ್ಪತ್ರೆಗೆ ಸೇರಿದಾಗ ಶಸ್ತ್ರಚಿಕಿತ್ಸೆಗೆ ಹಣ ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯಲ್ಲಿ ಗುರುತಿಸಿದ ಶಸ್ತ್ರಚಿಕಿತ್ಸೆಗಳು ಕೆಲವೊಂದು ಷರತ್ತುಗಳಿಗೊಳಪಟ್ಟ ನಗದು ರಹಿತವಾಗಿರುತ್ತದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಟ್ರಸ್ಟ್ ಭರಿಸುತ್ತದೆ.

ಇದನ್ನೂ ಓದಿ:ಒಮಿಕ್ರಾನ್ ಬಿಎಫ್.7 : ಜಾಗ್ರತೆ ವಹಿಸಿ.. ಮುನ್ನೆಚ್ಚರಿಕೆ ಮರೆಯದಿರಿ

Last Updated : Dec 25, 2022, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.