ಬೆಂಗಳೂರು : ಜಲಮಂಡಳಿ ಇತ್ತೀಚೆಗೆ ಅನಧಿಕೃತ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕಗಳ ಪರಿಶೀಲನೆ ನಡೆಸಿ, ಸಂಪರ್ಕಗಳನ್ನು ಕಡಿತಗೊಳಿಸಿದೆ. ಹಲವಾರು ಕಟ್ಟಡ ಮಾಲೀಕರು ಅನಧಿಕೃತ ಸಂಪರ್ಕ ಅಧಿಕೃತಗೊಳಿಸಲು ಇನ್ನು ಕೂಡ ಆನ್ಲೈನ್ ಅರ್ಜಿ ಸಲ್ಲಿಸಿಲ್ಲ.
ಪ್ರೋರೇಟಾ ಶುಲ್ಕಕ್ಕೆ ಒಳಪಡುವ ಕಟ್ಟಡಗಳನ್ನು ಹೊರತುಪಡಿಸಿ ಬೇರೆ ಕಟ್ಟಡಗಳಿಗೆ ಯಾವುದೇ ದಂಡ ಇಲ್ಲದೆ ಮಂಡಳಿಯಿಂದ ಕೂಡಲೇ ಸಂಪರ್ಕ ನೀಡಲಾಗುವುದು.
![ಪತ್ರಿಕಾಪ್ರಕಟನೆ](https://etvbharatimages.akamaized.net/etvbharat/prod-images/kn-bng-02-bwssb-7202707_01122020133154_0112f_1606809714_985.jpg)
ಇದನ್ನು ಓದಿ: ಬಾಯಿ ಚಪಲಕ್ಕಾಗಿ ಮಾತನಾಡುವ ಸಾ ರಾ ಮಹೇಶ್ ಬಗ್ಗೆ ನಾನು ಉತ್ತರಿಸಲ್ಲ : ಸಚಿವ ಶ್ರೀರಾಮುಲು
ಅಲ್ಲದೇ 30-11-2020ರವರೆಗೆ ಇದ್ದ ಕಾಲಾವಕಾಶವನ್ನ, 31-12-2020 ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದ ಒಳಗಾಗಿ ಅಧಿಕೃತಗೊಳಿಸದಿದ್ದಲ್ಲಿ ಮಂಡಳಿಯ ನಿಯಮ ಪ್ರಕಾರ ದಂಡ ವಿಧಿಸುವುದಲ್ಲದೆ ಬಿಎಂಟಿಎಫ್ಗೆ ದೂರು ಸಲ್ಲಿಸಲಾಗುತ್ತದೆ ಎಂದು ತಿಳಿಸಿದೆ.