ETV Bharat / state

ವೈದ್ಯಕೀಯ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ; ಕಾಯ್ದೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ

ವೈದ್ಯಕೀಯ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆ ವಿನಾಯಿತಿಗೆ ಸಚಿವ ಸಂಪುಟ ಸಭೆ ಒಪ್ಪಿದ್ದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕೋರ್ಸ್
ವೈದ್ಯಕೀಯ ಕೋರ್ಸ್
author img

By ETV Bharat Karnataka Team

Published : Oct 19, 2023, 8:24 PM IST

ಬೆಂಗಳೂರು: ಕರ್ನಾಟಕ ವೈದ್ಯಕೀಯ ಕಡ್ಡಾಯ ಸೇವೆ ಕಾಯ್ದೆಯಡಿ ವೈದ್ಯಕೀಯ ಕೋರ್ಸ್ ಮುಗಿಸಿದವರಿಗೆ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಸಂಬಂಧ ಕರ್ನಾಟಕ ವೈದ್ಯಕೀಯ ಕಡ್ಡಾಯ ಸೇವೆ ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಅದರಂತೆ ವೈದ್ಯಕೀಯ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ‌ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ವೈದ್ಯಕೀಯ ಕೋರ್ಸ್‌ ಮುಗಿಸಿದವರಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ಗ್ರಾಮೀಣ ಭಾಗದಲ್ಲಿ ಇರುವ ಖಾಲಿ ಹುದ್ದೆಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಗತ್ಯ ಬಿದ್ದರೆ ಕಡ್ಡಾಯ ಸೇವೆ ಮೂಲಕ ವೈದ್ಯರ ನಿಯೋಜಿಸುವ ಅಧಿಕಾರ ಸರ್ಕಾರಕ್ಕಿರಲಿದೆ ಎಂದರು.

ಎಂಬಿಬಿಎಸ್‌, ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಪದವೀಧರರು ಕರ್ನಾಟಕ ಕಡ್ಡಾಯ ಸೇವೆ ಕಾಯ್ದೆ ಅನ್ವಯ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಎಂಬಿಬಿಎಸ್‌ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ಗ್ರಾಮೀಣ ಸೇವೆಗೆ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಪರಿಗಣಿಸುವ ಪ್ರಸ್ತಾವನೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ 3,000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಖಾಲಿ ಹುದ್ದೆಗಳ ಸಂಖ್ಯೆ 1,900. ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಗ್ರಾಮೀಣ ಸೇವಾ ಅಭ್ಯರ್ಥಿಗಳ ಸಂಖ್ಯೆಯನ್ನು ಖಾಲಿ ಹುದ್ದೆಗಳಿಗೆ ಸೀಮಿತಗೊಳಿಸಲು ಸರ್ಕಾರ ಮುಂದಾಗಿದೆ.

5,326.87 ಕೋಟಿ ರೂ. ಬರ ಪರಿಹಾರಕ್ಕೆ ಒಪ್ಪಿಗೆ: ನೈರುತ್ಯ ಮುಂಗಾರಿನಲ್ಲಿ ಈ ಮುಂಚೆ 195 ಪ್ರದೇಶವನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಇದರ ಜತೆಗೆ ಇದೀಗ 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಅದಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬರದಿಂದ ಬೆಳೆ ನಷ್ಟ ಹಾಗೂ ತೋಟಗಾರಿಕೆ ಬೆಳೆ ನಷ್ಟವಾಗಿ 4,414 ಕೋಟಿ ರೂ. ಪರಿಹಾರ, 355 ಕೋಟಿ ರೂ. ಮೊತ್ತದ ಪಶು ಹಾನಿ, ಕುಡಿಯುವ ನೀರು 554 ಕೋಟಿ ರೂ. ಸೇರಿದಂತೆ ಎನ್‌ಡಿಆರ್‌ಎಫ್‌ನಡಿ ಒಟ್ಟು 5,326.87 ಕೋಟಿ ರೂ. ಒಟ್ಟು ಪರಿಷ್ಕೃತ ಬರ ಪರಿಹಾರಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ‌. ಇದರ ಜತೆಗೆ ಬರ ಪರಿಹಾರ ಸಂಬಂಧ ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡದಿರುವ ಬಗ್ಗೆ ಸಂಪುಟದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಸಚಿವ ಹೆಚ್‌‌.ಕೆ.ಪಾಟೀಲ್ ತಿಳಿಸಿದರು.

ಬೆಳಗಾವಿ ಅಧಿವೇಶನ ಬಗ್ಗೆ ಚರ್ಚೆ: ಡಿ.4 ರಿಂದ ಡಿ.15 ವರೆಗೆ ಬೆಳಗಾವಿ ಅಧಿವೇಶನ ನಡೆಸಲು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ‌. ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಸಿಎಂಗೆ ವಹಿಸಲಾಗಿದೆ ಎಂದು ತಿಳಿಸಿದರು. 10 ದಿನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ನಡೆಸಲು ಸಚಿವ ಸಂಪುಟ ಸಭೆ ಚರ್ಚೆ ನಡೆಸಿದೆ. ಬರದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಅನುಮಾನ ಉಂಟಾಗಿತ್ತು. ಆದರೆ ಇದೀಗ ಬೆಳಗಾವಿಯಲ್ಲೇ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.

ಇತರ ಪ್ರಮುಖ ತೀರ್ಮಾನಗಳು:

  • ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರ ಈಗಾಗಾಲೇ ಕಾನೂನು ರೂಪಿಸಿದ್ದು, ಅದರಂತೆ 100 ಗ್ರಾಮ ನ್ಯಾಯಾಲಯ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ.
  • ಮನೆಯ ಬಾಗಿಲಿಗೆ ನ್ಯಾಯ ದಾನ ಮಾಡುವ ಉದ್ದೇಶದಿಂದ ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡಲಾಗುತ್ತಿದೆ.
  • ಜೆಎಂಎಫ್‌ಸಿ ಮಟ್ಟದ ಕೋರ್ಟ್ ಸ್ಥಾಪನೆ ಮಾಡಲಾಗುವುದು.
  • 18 ಲಕ್ಷ ರೂ. ರಂತೆ ಕೇಂದ್ರ ಸರ್ಕಾರ ಒನ್‌ಟೈಂ ಅನುದಾನ ನೀಡಲಿದೆ. ಈ ಯೋಜನೆಗೆ 100 ಕೋಟಿ ರೂ. ನೀಡುವ ಪ್ರಸ್ತಾವನೆ ಇದ್ದು, 100 ಗ್ರಾಮ ನ್ಯಾಯಾಲಯ ಸ್ಥಾಪನೆಗೆ ವಾರ್ಷಿಕವಾಗಿ 25-30 ಕೋಟಿ ರೂ‌. ನೀಡಲು ಅನುಮೋದನೆ.
  • ರಸಗೊಬ್ಬರ ಕಾಪು ದಾಸ್ತಾನು ಮಾಡಲು ಬೀಜ ನಿಗಮ ಮತ್ತು ಸಹಕಾರ ಮಾರಾಟ ಮಹಾಮಂಡಲ ಮಾಡುವ 200 ಕೋಟಿ ರೂ.ಸಾಲಕ್ಕೆ ಖಾತ್ರಿಗೆ ಒಪ್ಪಿಗೆ
  • ಸಚಿವರ ಸಂಬಳ, ಭತ್ಯೆಗಳ ತಿದ್ದುಪಡಿ ಅಧಿನಿಯಮ 2022ಕ್ಕೆ ಘಟನೋತ್ತರ ಅನುಮೋದನೆ. 2022ರ ಮಾರ್ಚ್ 11ರಂದೇ ಗೆಜೆಟ್ ಪ್ರಕಟವಾಗಿರುವುದಕ್ಕೆ ಈಗ ಸಂಪುಟ ಘಟನೋತ್ತರ ಅನುಮೋದನೆ
  • ಲೋಕಾಯುಕ್ತದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಸರ್ಕಾರಿ ಅಭಿಯೋಜಕರ ಸೇವೆ ಒಂದು ವರ್ಷ ಮುಂದುವರಿಕೆ
  • ರಾಜ್ಯದಲ್ಲಿರುವ 11 ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆ ಕಾಮಗಾರಿಗೆ 20 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ
  • ನಗರ ಅನಿಲ ವಿತರಣಾ ಜಾಲ ಅಭಿವೃದ್ಧಿ ನೀತಿಗೆ ಒಪ್ಪಿಗೆ. ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ, ವಾಹನಗಳಿಗೆ ಸಿಎನ್‌ಜಿ ಕೊಡುವ ಈ ನೀತಿಗೆ ಒಪ್ಪಿಗೆ.
  • ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ 450 ಹಾಸಿಗೆಗಳ ಬೋಧನಾ ಆಸ್ಪತ್ರೆಗೆ 192 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅಸ್ತು
  • ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು 23.48 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಒಪ್ಪಿಗೆ
  • ಧಾರವಾಡದಲ್ಲಿ 13.11 ಕೋಟಿ ರೂ.ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ
  • ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಣೆ ಮಾಡಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ
  • ಐದು ಕೆಜಿ ಅಕ್ಕಿ ಜತೆಗೆ ಉಳಿದ ಐದು ಕೆಜಿ ಅಕ್ಕಿ ಬದಲು ಹಣ ನೀಡುವ ಪ್ರಸ್ತುತ ಪದ್ಧತಿ ಮುಂದುವರಿಸಲು ಒಪ್ಪಿಗೆ.
  • ನಗರಾಭಿವೃದ್ಧಿ ಎನ್ ಜಿಟಿ ನಿರ್ದೇಶನಗಳ ಅನುಸರಣೆಗಾಗಿ ತ್ವರಿತ ಪರಿಸರ ಪರಿಹಾರ ನಿಧಿಯಡಿ 110 ಮಲತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲು ಒಪ್ಪಿಗೆ‌.
  • 400.24 ಕೋಟಿ ರೂ‌. ವೆಚ್ಚದಲ್ಲಿ 50 ಜನಸಂಖ್ಯೆ ಕಡಿಮೆ ಇರುವ ಎಲ್ಲಾ ಪಟ್ಟಣಗಳಲ್ಲಿ ಈ ಘಟಕ ಸ್ಥಾಪಿಸಲು ಒಪ್ಪಿಗೆ.
  • 40.25 ಕೋಟಿ ವೆಚ್ಚದಲ್ಲಿ 110 ಪಟ್ಟಣದಲ್ಲಿ ಎಸ್ ಬಿಎಂ ನಿಧಿಯಡಿ ಸೆಸ್ ಪೂಲ್ ವಾಹನ‌ ಖರೀದಿಗೆ ಒಪ್ಪಿಗೆ.

ಇದನ್ನೂ ಓದಿ: Nursing Jobs in NIMHANS:ನಿಮ್ಹಾನ್ಸ್​ನಲ್ಲಿ ನೇಮಕಾತಿ; 161 ನರ್ಸಿಂಗ್​ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.