ETV Bharat / state

ಮಣ್ಣಿನ ಮಗ ದಿಲ್ಲಿ ಗದ್ದುಗೆ ಏರಿ ದೇಶ ಆಳಿದ ಶುಭ ಘಳಿಗೆಗೆ ಈಗ 25 ವರ್ಷ..! - Ex_Prime Minister_Devegowda

ಪ್ರಧಾನಿ ಹುದ್ದೆ ಕೇವಲ ಉತ್ತರ ಭಾರತದವರಿಗೆ ಸೀಮಿತ ಎಂಬಂತಿದ್ದ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿ ಮೊದಲ ಕನ್ನಡಿಗರೆಂಬ ಪ್ರಶಂಸೆಗೆ ದೇವೇಗೌಡರು ಪಾತ್ರರಾಗಿದ್ದಾರೆ. ಹೆಚ್.ಡಿ.ದೇವೇಗೌಡರು 1996, ಜೂನ್ 1 ರಂದು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದಕ್ಷಿಣ ಭಾರತದ ಅದರಲ್ಲೂ ಕನ್ನಡಿಗರಾದ ದೇವೇಗೌಡರು, ತೃತೀಯರಂಗ ಸರ್ಕಾರದ ನೇತೃತ್ವ ವಹಿಸಿ 11 ತಿಂಗಳು ಅಧಿಕಾರ ನಡೆಸಿದರು.

ಹೆಚ್.ಡಿ.ದೇವೇಗೌಡ
ಹೆಚ್.ಡಿ.ದೇವೇಗೌಡ
author img

By

Published : May 31, 2021, 10:16 PM IST

Updated : Jun 1, 2021, 10:23 AM IST

ಬೆಂಗಳೂರು: ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು, ಜನಪರ, ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಆರು ದಶಕಗಳಿಂದ ಸುದೀರ್ಘ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾರತದ ಪ್ರಧಾನಿಯಾಗಿ ಇಂದಿಗೆ 25 ವರ್ಷ ಆಗಲಿದೆ.

ಪ್ರಧಾನಿ ಹುದ್ದೆ ಕೇವಲ ಉತ್ತರ ಭಾರತದವರಿಗೆ ಸೀಮಿತ ಎಂಬಂತಿದ್ದ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿ ಮೊದಲ ಕನ್ನಡಿಗರೆಂಬ ಪ್ರಶಂಸೆಗೆ ದೇವೇಗೌಡರು ಪಾತ್ರರಾಗಿದ್ದಾರೆ. ಹೆಚ್.ಡಿ.ದೇವೇಗೌಡರು 1996, ಜೂನ್ 1 ರಂದು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದಕ್ಷಿಣ ಭಾರತದ ಅದರಲ್ಲೂ ಕನ್ನಡಿಗರಾದ ದೇವೇಗೌಡರು, ತೃತೀಯರಂಗ ಸರ್ಕಾರದ ನೇತೃತ್ವ ವಹಿಸಿ 11 ತಿಂಗಳು ಅಧಿಕಾರ ನಡೆಸಿದರು.

ರಾಷ್ಟ್ರೀಯ ನಾಯಕರ ಜೊತೆ ದೊಡ್ಡಗೌಡ್ರು
ರಾಷ್ಟ್ರೀಯ ನಾಯಕರ ಜೊತೆ ದೊಡ್ಡಗೌಡ್ರು

ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಸ್​ ಪಡೆದಾಗ ಕುರ್ಚಿಗಾಗಿ ಅಂಟಿಕೊಳ್ಳದೇ, ಪ್ರಧಾನಿ ಹುದ್ದೆ ಬಿಟ್ಟು ಬಂದವರು‌. ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಅವಕಾಶವಿದ್ದರೂ ತತ್ವ ಸಿದ್ದಾಂತಕ್ಕೆ ಬದ್ಧರಾಗಿ ಬಿಜೆಪಿ ಬೆಂಬಲವನ್ನು ನಿರಾಕರಿಸಿದ್ದವರು‌ ಗೌಡರು. ಆಕಸ್ಮಿಕವಾಗಿ ಪ್ರಧಾನಿಯಾದರೂ ಎಂಬ ಮಾತಿದ್ದರೂ ಅವರ ಸುದೀರ್ಘ ಹೋರಾಟದ ಫಲ ಮಾತ್ರವಲ್ಲದೇ, ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾಡಿದ್ದ ಅಭಿವೃದ್ಧಿಪರ ಕಾರ್ಯಗಳು ಪ್ರಧಾನಿಯಾಗುವಂತೆ ಮಾಡಿದವು ಎಂದರೆ ತಪ್ಪಾಗಲಾರದು‌.

ಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಂದರೆ 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾದಳ 16 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದಿದ್ದಾಗ ತೃತೀಯರಂಗ ಅಸ್ಥಿತ್ವಕ್ಕೆ ಬಂದು ಅದರ ನೇತೃತ್ವವನ್ನು ದೇವೇಗೌಡರು ವಹಿಸಿಕೊಳ್ಳುವಂತಾಯಿತು. ಕಾಂಗ್ರೆಸ್ ತೃತೀಯರಂಗ ಸರ್ಕಾರಕ್ಕೆ ಬೆಂಬಲ ನೀಡಿತ್ತು.

ಸದಾ ರೈತಪರ ಕಾಳಜಿ ಹೊಂದಿದ್ದ ಗೌಡರು ಪ್ರಧಾನಿಯಾಗಿ ರಾಷ್ಟ್ರದಲ್ಲಿ ತ್ವರಿತ ನೀರಾವರಿ ಯೋಜನೆಯನ್ನು ಜಾರಿಗೆ ತಂದರು. ರೈತ ಕುಟುಂಬದಿಂದ ಬಂದವರು, ಹಿಂದಿ ಭಾಷೆ ಗೊತ್ತಿಲ್ಲ ಎಂಬ ಟೀಕೆಗಳಿಗೆ ತಮ್ಮ ಆಡಳಿತದ ಮೂಲಕವೇ ಉತ್ತರ ಕೊಟ್ಟರು. ಇದುವರೆಗೂ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಗೌಡರೇ ಆಗಿದ್ದಾರೆ‌.

ಮಣ್ಣಿನ ಮಗ ದಿಲ್ಲಿ ಗದ್ದುಗೆ ಏರಿ ದೇಶ ಆಳಿದ ಶುಭ ಘಳಿಗೆಗೆ ಈಗ 25 ವರ್ಷ

ದಶಕಗಳ‌ ಕಾಲ ಜನಪರ, ರೈತಪರ, ಕಾವೇರಿ ನದಿ ನೀರಿಗಾಗಿ , ಗಡಿ ವಿಚಾರ, ಕನ್ನಡ ಭಾಷೆಯ ಸ್ಥಾನ‌ಮಾನಕ್ಕೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದ ಗೌಡರು, ಅಧಿಕಾರ ಇರಲಿ ಇಲ್ಲದಿರಲಿ ರೈತಪರ ಹೋರಾಟ ಮಾಡುತ್ತಲೇ ಬಂದವರು‌. ರಾಜಕೀಯವಾಗಿ ಹಲವು ಸೋಲು ಗೆಲುವು ಕಂಡವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋತರು, ಅವರ ಹೋರಾಟದ ಛಲ ಮಾತ್ರ ಮಂಕಾಗಲಿಲ್ಲ. ಆದರೆ, ರಾಜ್ಯ ಸಭಾ ಸದಸ್ಯರಾಗಿ ಅವರು ಇತ್ತೀಚೆಗೆ ಮಾಡಿದ ಭಾಷಣ ಜನ ಮೆಚ್ಚುವಂತದ್ದು.

ಇನ್ನು ಗೌಡರ ಹುಟ್ಟು ಹಿನ್ನೆಲೆ ಹೇಳುವುದಾರೆ, ಹೆಚ್.ಡಿ.ದೇವೇಗೌಡರು 1933, ಮೇ 18 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಪಡೆದಿರುವ ಗೌಡರು, 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು.

ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು.

ರಾಜಕೀಯ ಪ್ರವೇಶಿಸಿದ್ದು ಹೇಗೆ : ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಹೆಸರಾಗಿದ್ದರು. ನಂತರ ಇವರು ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸುವ ಆಶಯದೊಂದಿಗೆ ಸದಾ ಆದರ್ಶ ರಾಜ್ಯವೊಂದರ ಕನಸು ಕಾಣುತ್ತಿದ್ದರು.

ಕೇವಲ 28 ವರ್ಷಗಳಿದ್ದಾಗ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ 1962ರಲ್ಲಿ ಕರ್ನಾಟಕ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಇವರು ಯಶಸ್ಸಿನ ಓಟದಲ್ಲೇ ಮುಂದುವರೆದರು. ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಕಾರರಾದ ಇವರು ತಮ್ಮ ಹಿರಿಯರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ಅಂದರೆ 1967-71, 1972-77 ಹಾಗೂ 1978-83 ರಲ್ಲಿ ವಿಧಾನಸಭೆಗಳಿಗೆ ಚುನಾಯಿತರಾದರು.

ಇವರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರು ನವೆಂಬರ್ 22, 1982ರಂದು ಆರನೇ ವಿಧಾನಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿ ಸಚಿವರಾಗಿದ್ದ ಅವರ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

ರಾಷ್ಟ್ರೀಯ ನಾಯಕರ ಜೊತೆ ದೊಡ್ಡಗೌಡ್ರು
ರಾಷ್ಟ್ರೀಯ ನಾಯಕರ ಜೊತೆ ದೊಡ್ಡಗೌಡ್ರು

ಸ್ವಾತಂತ್ರ್ಯ ಮತ್ತು ಸಮಾನತೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಅವರು, ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಂಡರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಜೊತೆ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ದೃಢ ವ್ಯಕ್ತಿಯಾಗಿ ಹೊರ ಹೊಮ್ಮಿದರು.

1991 ಸಂಸತ್​ಗೆ ಆಯ್ಕೆ:

1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್​ಗೆ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಸಂಸತ್​ನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು. ಸಂಸತ್ ಮತ್ತು ಅದರ ಸಂಸ್ಥೆಗಳ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವಲ್ಲಿಯೂ ಸಹ ಗೌಡರು ಹೆಸರು ಮಾಡಿದರು.

ದೇವೇಗೌಡರು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಜನತಾ ಪಕ್ಷದ ಅಧ್ಯಕ್ಷರು ಹಾಗೂ 1994 ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1994 ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು. ಡಿಸೆಂಬರ್ 11, 1994 ರಂದು ಅವರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆನಂತರ ಅವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ex-prime-minister-devegowda-story-script
ಸಂಗ್ರಹ ಚಿತ್ರ

ಈದ್ಗಾ ವಿವಾದ ಬಗೆಹರಿಸಿದ ಮುತ್ಸದ್ದಿ

ತಮ್ಮ ಸಕ್ರಿಯ ರಾಜಕಾರಣ ಮತ್ತು ಬೇರುಮಟ್ಟದ ಭದ್ರ ಬುನಾದಿಯಿಂದಾಗಿ ರಾಜ್ಯ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ನೇರವಾಗಿ ಕೈಗೆತ್ತಿಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಮುಂಚೂಣಿಗೆ ತಂದಾಗ ಅವರ ರಾಜಕೀಯ ಕುಶಾಗ್ರಮತಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು. ಇದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೈದಾನವಾಗಿದ್ದು, ರಾಜಕೀಯ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಗೌಡರು ಈ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.

1995 ರ ಜನವರಿಯಲ್ಲಿ ದೇವೇಗೌಡರು ಸ್ವಿಟ್ಜರ್ಲೆಂಡ್‌‌ ಪ್ರವಾಸ ಕೈಗೊಂಡು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡರು. ಯುರೋಪ್ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಿಗೆ ಇವರು ಕೈಗೊಂಡ ಪ್ರವಾಸವು ಓರ್ವ ಸಮರ್ಪಣಾ ಮನೋಭಾವ ರಾಜಕಾರಣಿಯ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಅವರ ಸಿಂಗಾಪುರ ಪ್ರವಾಸವು ರಾಜ್ಯಕ್ಕೆ ತುಂಬಾ ಅಗತ್ಯವಾದ ವಿದೇಶಿ ಬಂಡವಾಳವನ್ನು ತರುವಲ್ಲಿ ಯಶಸ್ವಿಯಾಗಿದ್ದು, ಅದು ಅವರ ವ್ಯವಹಾರಿಕ ಜಾಣ್ಮೆಯನ್ನು ಸಾಬೀತುಪಡಿಸುತ್ತದೆ.

ಮೊದಲ ಬಾರಿಗೆ ಸೋಲಿನ ರುಚಿ

1989ರಲ್ಲಿ ಜನತಾ ಪಕ್ಷದ ಅವರ ಸಮೂಹವು ಕರ್ನಾಟಕದಲ್ಲಿ ಸ್ಪರ್ಧಿಸಿದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಅತ್ಯಂತ ಕಳಪೆ ಸಾಧನೆ ಮಾಡಿತು. ದೇವೇಗೌಡರು ತಾವು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡರು.

ಈ ಹೀನಾಯ ಪರಾಭವು ಅವರನ್ನು ಮೊನಚಾದ ತುದಿಗೆ ಕೊಂಡ್ಯೊಯಿತು. ಕಳೆದು ಹೋದ ಘನತೆ, ಗೌರವ ಮತ್ತು ಶಕ್ತಿಯನ್ನು ಮತ್ತೆ ಗಳಿಸಲು ಅವರು ಅಪಾರ ಪರಿಶ್ರಮ ಪಡಬೇಕಾಯಿತು. ತಮ್ಮದೇ ಶೈಲಿಯ ರಾಜಕಾರಣವನ್ನು ಅವರು ಮರು ಪರೀಕ್ಷಿಸಿಕೊಳ್ಳುವಂತೆ ಅವರನ್ನು ಪ್ರಚೋದಿಸಿತು. ಅವರು ಕರ್ನಾಟಕ ಮತ್ತು ದೆಹಲಿಯಲ್ಲಿ ಸ್ನೇಹಿತರನ್ನು ಗಳಿಸಿದರು. ರಾಜಕೀಯ ವೈರಿಗಳೊಂದಿಗೆ ತನ್ನ ಹಳೆ ಹಗೆತನವನ್ನು ಬದಿಗಿಟ್ಟರು. ದೇವೇಗೌಡರು ಸರಳ, ನೇರ ನಡೆ ನುಡಿಗೆ ಹೆಸರಾದವರು. ತಾವು ಸರಳವಾಗಿದ್ದರೂ ಅದು ಸದೃಢ ಮತ್ತು ಪರಿಣಾಮಕಾರಿಯಾದಂಥ ಜೀವನ ಶೈಲಿಯನ್ನು ಹೊಂದಿರುವ ವ್ಯಕ್ತಿ ಎನಿಸಿದ್ದಾರೆ.

ರಾಜಕೀಯ ಪ್ರವೇಶಕ್ಕೂ ಮುನ್ನ: ರಾಜಕೀಯ ಪ್ರವೇಶಕ್ಕೂ ಮುನ್ನ, ದೇವೇಗೌಡರು ಗುತ್ತಿಗೆದಾರರಾಗಿದ್ದು, ಸಣ್ಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರು. ಸ್ವತಂತ್ರರಾಗಿ ಏಳು ವರ್ಷಗಳ ಕಾಲ ಕಳೆದ ಇವರಿಗೆ ಹೊರಗಿನಿಂದ ಪಕ್ಷದ ರಾಜಕೀಯವನ್ನು ವೀಕ್ಷಿಸಲು ನೆರವಾಯಿತು.

1967 ರಲ್ಲಿ ನಡೆದ ಮರು ಚುನಾವಣೆ ಅವರಿಗೆ ಹೆಚ್ಚು ವಿಶ್ವಾಸ ನೀಡಿತು ಹಾಗೂ 1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಭಾಗವಾದಾಗ, ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಒ) ಪಕ್ಷವನ್ನು ಸೇರಿದರು. ಆ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿತ್ತು. ಆದರೆ, ಗೌಡರು 1971ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಒ) ಪಕ್ಷದ ಗೆಲುವಿನ ಬಳಿಕ ಅವರಿಗೆ ಒಂದು ದೊಡ್ಡ ಅವಕಾಶ ಒದಗಿ ಬಂದಿತು. ಇಂದಿರಾಗಾಂಧಿ ಅವರ ಅಲೆಯನ್ನು ಮೊಟಕುಗೊಳಿಸುವ ಪ್ರತಿಪಕ್ಷದ ಓರ್ವ ನಾಯಕರಾಗಿ ಇವರು ಹೊರಹೊಮ್ಮಿದರು.

ತಾವು ಬಯಸದೇ ಇದ್ದರೂ ದೇವೇಗೌಡರಿಗೆ ತೃತೀಯ ರಂಗದ (ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸಂಯೋಜನೆ) ನಾಯಕತ್ವ ವಹಿಸಲು ಮತ್ತು ಪ್ರಧಾನಮಂತ್ರಿ ಗದ್ದುಗೆಗೇರುವ ಅವಕಾಶ ಒದಗಿ ಬಂದಿತು.

ಭಾರತದ 11ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದರು.

ಹೆಚ್.ಡಿ.ದೇವೇಗೌಡರು 1996, ಜೂನ್ 1 ರಂದು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹನ್ನೊಂದು ತಿಂಗಳು ಯಾವುದೇ ಕಪ್ಪು ಚುಕ್ಕೆಗೆ ಅವಕಾಶ ಇಲ್ಲದಂತಹ ಆಡಳಿತ ನಡೆಸಿದ ಪ್ರಧಾನಿ ಎಂಬ ಕೀರ್ತಿಗೆ ಗೌಡರು ಭಾಜನರಾದರು.

Last Updated : Jun 1, 2021, 10:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.