ETV Bharat / state

ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಚಿವ ಎಂಟಿಬಿ - Hosakote latest news

ನಗರದ ಚೆನ್ನಬೈರೇಗೌಡರ ಕ್ರೀಡಾಂಗಣದಲ್ಲಿ ಹೊಸಕೋಟೆ ತಾಲೂಕು ಬಿಜೆಪಿ ವತಿಯಿಂದ ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಲಾಗಿದೆ.

Ex Minister MTB Nagaraj
ಮಾಜಿ ಸಚಿವ ಎಂಟಿಬಿ ನಾಗರಾಜ್
author img

By

Published : May 8, 2020, 5:05 PM IST

ಹೊಸಕೋಟೆ: ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ನಿಯಂತ್ರಿಸಲು ಶ್ರಮಿಸಿದವರಿಗೆ ಹೊಸಕೋಟೆ ತಾಲೂಕು ಬಿಜೆಪಿ ವತಿಯಿಂದ ಅವರ ಸೇವೆಯನ್ನು ಪರಿಗಣಿಸಿ ಅಭಿನಂದನೆ ಸಲ್ಲಿಸಲಾಯಿತು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ನಗರದ ಚೆನ್ನಬೈರೇಗೌಡರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಹಿತದೃಷ್ಟಿಯಿಂದ ವೈದ್ಯಕೀಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಪೌರಕಾರ್ಮಿಕರು, ಕಂದಾಯ ಇಲಾಖೆಯ ಸಿಬ್ಬಂದಿ ಅತಿ ಹೆಚ್ಚು ಶ್ರಮ ವಹಿಸಿ ತಮ್ಮ ಕುಟುಂಬದವರಿಂದ ದೂರವಿದ್ದು ಪ್ರತಿದಿನ 18 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಉತ್ತಮ ಸೇವೆ ಸಲ್ಲಿಸಿರುವ ಇವರ ಕರ್ತವ್ಯ ನಿಷ್ಠೆಗೆ ಅಭಿನಂದನೆ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕೊರೊನಾ ವಾರಿಯರ್ಸ್​ಗೆ ಅಭಿನಂದನೆ ಸಲ್ಲಿಸಿದ ಎಂಟಿಬಿ

ನಂತರ ಟೌನ್ ಬಿಜೆಪಿ ಅಧ್ಯಕ್ಷ ಡಾ. ಸಿ.ಜಯರಾಜ್ ಮಾತನಾಡಿ, ಸುಮಾರು ನಲವತ್ತು ದಿನಗಳಿಂದ ಕೊರೊನಾ ವೈರಸ್ ಹರಡದಂತೆ ಅತಿ ಹೆಚ್ಚು ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸುವ ಭಾಗ್ಯ ನಮಗೆ ದೊರಕಿರುವುದು ನಮ್ಮ ಪುಣ್ಯ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಾವುದೇ ಅಧಿಕಾರವಿಲ್ಲದಿದ್ದರೂ ಸಹ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಎಂಟಿಬಿ ನಾಗರಾಜ್ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಸುಮಾರು ಐದು ನೂರು ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.