ETV Bharat / state

6 ವರ್ಷದ ಪ್ರೀತಿಗೆ ಕೈಕೊಟ್ಟ ಯುವತಿ: ಬೇರೊಬ್ಬನ ಜೊತೆ ಕಂಡ ಮಾಜಿ ಪ್ರಿಯಕರನಿಂದ ಹಲ್ಲೆ! - ಸೋಲದೇವನಹಳ್ಳಿ ಠಾಣೆ

6 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿಯೋರ್ವಳು ತನಗೆ ಕೈಕೊಟ್ಟು ಬೇರೊಬ್ಬನ ಜೊತೆ ಸುತ್ತಾಡುತ್ತಿರುವುದನ್ನು ಸಹಿಸದ ಯುವಕ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ex lover attack on girl in bengaluru
ಮಾಜಿ ಪ್ರಿಯಕರನಿಂದ ಹಲ್ಲೆ
author img

By

Published : Jun 11, 2020, 1:15 AM IST

Updated : Jun 11, 2020, 1:55 AM IST

ನೆಲಮಂಗಲ: ಆರು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ತನ್ನನ್ನು ಬಿಟ್ಟು ಬೇರೊಬ್ಬನ ಹಿಂದೆ ಬಿದ್ದಿರುವುದನ್ನು ಸಹಿಸದ ಯುವಕ ರೊಚ್ಚಿಗೆದ್ದು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಭೀರವಾಗಿ ಯುವತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಬೆಂಗಳೂರಿನ ಸೋಲದೇವನಹಳ್ಳಿ ರಸ್ತೆಯ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಯುವತಿಯೇ ಮಾಜಿ ಪ್ರಿಯಕರನಿಂದ ಹಲ್ಲೆಗೊಳಗಾದವಳು. ಚಿಕ್ಕಬಾಣಾವಾರದ ನಿವಾಸಿ ಬಬಿತ್ ಎಂಬಾತನೆ ಈಕೆಯ ಮೇಲೆ ಹಲ್ಲೆ ಮಾಡಿರುವ ಆರೋಪಿ.

ಕಳೆದ ಆರು ವರ್ಷಗಳಿಂದ ಬಬಿತ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದರೆ 6 ತಿಂಗಳಿಂದ ಯುವತಿಯು ಆರೋಪಿ ಬಬೀತ್​ನನ್ನು ಬಿಟ್ಟು ಆತನ ಸ್ನೇಹಿತ ರೋಹಿತ್​ನನ್ನು ಪ್ರೀತಿಸಲು ಆರಂಭಿಸಿದ್ದಳು. ಇದರಿಂದ ಕೋಪಗೊಂಡ ಬಬಿತ್​ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಮೋನಿಕಾ ಭಾನುವಾರ ಸಂಜೆ ರೋಹಿತ್ ಮನೆಗೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಬಳಿಕ ಅವಳನ್ನು ಮನೆಗೆ ಕರೆತಂದು ಅಲ್ಲಿಯೂ ಮನಬಂದಂತೆ ಹಲ್ಲೆಗೈದಿದ್ದಾನೆ. ನಂತರ ಯುವತಿಯ ಪೋಷಕರಿಗೆ ಫೋನ್​ ಕರೆ ಮಾಡಿ, ನಿಮ್ಮ ಮಗಳಿಗೆ ಅಪಘಾತವಾಗಿದೆ. ಮನೆಯ ಬಳಿ ಇದ್ದಾಳೆ, ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ ಎನ್ನಲಾಗಿದ್ದು, ತಕ್ಷಣ ಸ್ಥಳಕ್ಕೆ ಯುವತಿಯ ಪೋಷಕರು ತೆರಳಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಹಿನ್ನೆಲೆ ಬೆಳಕಿಗೆ ಬಂದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Last Updated : Jun 11, 2020, 1:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.