ETV Bharat / state

'ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ, ಅದಕ್ಕೆ ಕಾಲ ಕೂಡಿ ಬರಬೇಕು'

ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ. ಅದಕ್ಕೆ ಕಾಲ ಕೂಡಿ ಬರಬೇಕು. ತಿರುಕನ ಕನಸು, ಬಿಸಿಲು ಕುದುರೆ ಹಿಂದೆ ಓಡಿದರೆ ಏನೂ ಪ್ರಯೋಜನವಿಲ್ಲ. ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಂದಾಯ ಸಚಿವ ಆರ್, ಅಶೋಕ್ ತಿಳಿಸಿದ್ದಾರೆ.

author img

By

Published : Jun 16, 2021, 4:15 PM IST

minister-r-ashok
ಕಂದಾಯ ಸಚಿವ ಆರ್, ಅಶೋಕ್

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್​. ಅಶೋಕ್​ ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ. ಅದಕ್ಕೆ ಕಾಲ ಕೂಡಿ ಬರಬೇಕು. ಅಲ್ಲಿಯವರೆಗೆ ತಿರುಕನ ಕನಸು ಕಾಣಬಾರದರು ಎಂದಿದ್ದಾರೆ.

ದೇವನಹಳ್ಳಿ ತಾಲೂಕು ಕಚೇರಿ ಬಳಿ ಮಕ್ಕಳ ತಜ್ಞರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನನಗೆ ಅರ್ಥವಾಗದಿರುವ ಪ್ರಶ್ನೆಯೆಂದರೆ
ಬಿಜೆಪಿ ಉಸ್ತುವಾರಿ ಬಂದು ಹೋದಾಗ ಸುದ್ದಿಯಾಗುತ್ತದೆ. ಕಾಂಗ್ರೆಸ್ ಉಸ್ತುವಾರಿ ಬಂದು ಹೋಗುವುದು ಸುದ್ದಿಯಾಗುವುದೇ ಇಲ್ಲ ಎಂದರು.

ಕಂದಾಯ ಸಚಿವ ಆರ್, ಅಶೋಕ್ ಮಾತನಾಡಿದರು

ಕೋವಿಡ್ ಕಾರಣದಿಂದ ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಬಹಳ ದಿನದ ಮೇಲೆ ಬರುತ್ತಿದ್ದಾರೆ. ಈ ಬಾರಿ ಬರುತ್ತಿರುವುದು ಸರ್ಕಾರದ ಮತ್ತು ಪಕ್ಷದ ಇಮೇಜ್​ನ್ನು ಹೆಚ್ಚಿಸಲು. ಸಭೆಗೆ ಸಚಿವರನ್ನು ಕರೆದು ಸರ್ಕಾರದ ಇಮೇಜ್ ಹೆಚ್ಚಿಸಲು ಚರ್ಚಿಸಲಾಗುತ್ತದೆ. ಮಾಧ್ಯಮದಲ್ಲಿ ಬರುತ್ತಿರುವ ಯಡಿಯೂರಪ್ಪ ಬದಲಾವಣೆ ವಿಷ್ಯ ಶುದ್ಧ ಸುಳ್ಳು. ಬಿಎಸ್​ವೈ ಬದಲಾವಣೆ ಮಾಡುವ ಪ್ರಸ್ತಾಪ ಶಾಸಕರ ಮತ್ತು ಕೇಂದ್ರ ನಾಯಕರ ಮುಂದೆಯೂ ಇಲ್ಲ. ಇದು ಹಾಗೆಯೇ ಸೃಷ್ಟಿಯಾಗಿದೆ ಹಾಗೆಯೇ ತೆರೆಮರೆಗೆ ಸರಿಯುತ್ತದೆ ಎಂದರು.

ಯಡಿಯೂರಪ್ಪ ಸೂಚನೆ ವಿಚಾರ: ಕೇಂದ್ರ ವರಿಷ್ಠರ ಮಾತಿಗೆ ಬೆಲೆಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. 10 ಜನ ಶಾಸಕರು ಅರುಣ್​ ಸಿಂಗ್ ಜೊತೆ ಚರ್ಚಿಸಲಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಸಚಿವ ಸ್ಥಾನದ ಬಗ್ಗೆ ಚರ್ಚಿಸಲಿದ್ದಾರೆ. ಯಡಿಯೂರಪ್ಪ ಅವರನ್ನು ಉಳಿಸಲು ಅಥವಾ ತೆಗೆಯಲು ಶಾಸಕರು ಸಹಿ ಸಂಗ್ರಹ ಮಾಡುವಂತಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಒಂದು ವೇಳೆ ಸಹಿ ಸಂಗ್ರಹ ಮಾಡಿದರೆ ಪಕ್ಷ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯೆ: ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ. ಅದಕ್ಕೆ ಕಾಲ ಕೂಡಿ ಬರಬೇಕು. ತಿರುಕನ ಕನಸು, ಬಿಸಿಲು ಕುದುರೆ ಹಿಂದೆ ಓಡಿದರೆ ಏನೂ ಪ್ರಯೋಜನವಿಲ್ಲ. ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಶೋಕ್​ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿದೆ. ಇದು ಯಾವುದೂ ಸುದ್ದಿಯೇ ಆಗುವುದಿಲ್ಲ. ರಾಜ್ಯ ಬಿಜೆಪಿ ಪಕ್ಷದಲ್ಲಿ ಪರ್ಯಾಯ ನಾಯಕರಿರುವುದಾಗಿ ಯಡಿಯೂರಪ್ಪನವರೇ ಹೇಳಿದ್ದಾರೆ. ಬಿಜೆಪಿ ಒಂದು ಟ್ರೈನಿಂಗ್ ಸೆಂಟರ್. ಕಾರ್ಯಕರ್ತರು ಮತ್ತು ನಾಯಕರನ್ನು ಬೆಳೆಸುವ ಟ್ರೈನಿಂಗ್ ಸೆಂಟರ್. ಬಿಜೆಪಿಯಲ್ಲಿ ನಾಯಕರ ಕೊರತೆ ಇಲ್ಲ ಎಂದು ಹೇಳಿದರು.

ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.

ಓದಿ: ಬ್ಲ್ಯಾಕ್ ಫಂಗಸ್​ನಿಂದ ಕ್ಯಾನ್ಸರ್ ರೋಗಿಗಳು ಮುಂಜಾಗ್ರತೆ ವಹಿಸಬೇಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.