ಸಿನಿಮಾ ಕ್ಷೇತ್ರದ ಸಾಧಕರನ್ನು ಗುರ್ತಿಸಿ, ಪುರಸ್ಕರಿಸುವಂತ ಉತ್ತಮ ಕೆಲಸ ಮಾಡುತ್ತಿರುವ ಸೈಮಾ ಈ ಬಾರಿ ಪ್ರಮಾದ ಮಾಡಿದ್ದನ್ನು 'ಈಟಿವಿ ಭಾರತ' ಪತ್ತೆಹಚ್ಚಿತ್ತು. ಇದನ್ನು ಗಮನಿಸಿರುವ ಸೈಮಾ ಆಯೋಜಕರು ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ.
ಹೌದು, 2019ರ ಸೈಮಾ ಬೆಸ್ಟ್ ಡೆಬ್ಯೂ ಆಕ್ಟರ್ ನಾಮಿನೀಸ್ ಪೋಸ್ಟರ್ನಲ್ಲಿ ಅಯೋಜಕರು ಬಿಗ್ ಮಿಸ್ಟೇಕ್ ಮಾಡಿದ್ದರು. "ನಡುವೆ ಅಂತರವಿರಲಿ" ಚಿತ್ರದಿಂದ ನಾಮಿನೇಟ್ ಆಗಿರುವ ನಟ ಪ್ರಖ್ಯಾತ್ ಪರಮೇಶ್ ಅವರ ಫೋಟೋ ಬದಲಿಗೆ ನಿರಂಜನ್ ಸುಧೀಂದ್ರ ಅವರ ಪೋಟೋ ಹಾಕಿತ್ತು. ಈ ಪ್ರಮಾದ ಗುರ್ತಿಸಿದ್ದ ಈಟಿವಿ ಭಾರತ, ಆಯೋಜಕರನ್ನು ಎಚ್ಚರಿಸಲು ಸುದ್ದಿ ಪ್ರಕಟಿಸಿತ್ತು.

ಪ್ರಮಾದದ ಸುದ್ದಿ ಈಟಿವಿ ಭಾರತದಲ್ಲಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲೇ ಎಚ್ಚೆತ್ತ ಸೈಮಾ ಆಯೋಜಕರು, ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅಲ್ಲದೆ ಪೋಸ್ಟರ್ ಸರಿಪಡಿಸಿ, ಪ್ರಖ್ಯಾತ್ ಪರಮೇಶ್ ಅವರ ಫೋಟೋ ಹಾಕಿರುವ ಹೊಸ ಪೋಸ್ಟರ್ ಅನ್ನು ಅಧಿಕೃತವಾಗಿ ಹೊರತಂದಿದ್ದಾರೆ.
ಈ ತಪ್ಪನ್ನು ಗುರುತಿಸಿ ಸರಿಪಡಿಸಲು ನೆರವಾಗಿದ್ದಕ್ಕೆ ನಟ ಪ್ರಖ್ಯಾತ್ ಪರಮೇಶ್ ಸಹ ಈ ಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.