ETV Bharat / state

'ಕೈ' ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ..ವಿವಾದ ಜೋರಾಗುತ್ತಿದ್ದಂತೆ 'ಪದ' ಹಿಂತೆಗೆದುಕೊಂಡ ಸಚಿವ ಈಶ್ವರಪ್ಪ!

author img

By

Published : Aug 10, 2021, 3:24 PM IST

Updated : Aug 10, 2021, 5:38 PM IST

ನಾವು ಯಾರ ತಂಟೆಗೆ ಹೋಗೋದು ಬೇಡ. ನಮ್ಮ ತಂಟೆಗೆ ಬಂದರೆ ಸುಮ್ನಿರೋದು ಬೇಡ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಇದನ್ನ ವಿವಾದ ಮಾಡೋದು ಸರಿಯಲ್ಲ. ಇಲ್ಲಿಗೆ ನಿಲ್ಲಿಸೋಣ. ಆದ್ರೂ ವಿವಾದ ಮಾಡ್ತೀನಿ ಅಂದರೆ, ನಂಗೇನು ಅಭ್ಯಂತರ ಇಲ್ಲ..

eshwarappa-controversial-statement-against-congress
ಈಶ್ವರಪ್ಪ

ಬೆಂಗಳೂರು : ಕಾಂಗ್ರೆಸ್​ನವರನ್ನು ಟೀಕಿಸುವ ಭರದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ನಂತರ ತಮ್ಮ ತಪ್ಪಿನ ಅರಿವಾದಾಗ ಪದವನ್ನು ಹಿಂಪಡೆದ ಘಟನೆ ನಗರದಲ್ಲಿ ಇಂದು ನಡೆಯಿತು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ಅವಾಚ್ಯ ಶಬ್ದ ಬಳಸಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ ಆ ಪದ ಹಿಂಪಡೆದಿದ್ದಾರೆ. ಅಲ್ಲದೆ, ಆ ಪದ ಹಠಾತ್ ಆಗಿ ಬಂದಿದೆ. ಅದನ್ನು ವಿವಾದಾತ್ಮಕವಾಗಿ ಮಾಡಬೇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಸಚಿವ ಕೆ ಎಸ್‌ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ವಿವಾದಿತ ಹೇಳಿಕೆ ಕೊಟ್ಟಿಲ್ಲ : ಒಂದು ಕಾಲದಲ್ಲಿ ಜನಸಂಘದಲ್ಲಿ ಶಕ್ತಿ ಇರಲಿಲ್ಲ. ರೈಲ್ವೆ ಪ್ಲಾಟ್​​ ಫಾರಂ ಮೇಲೆ ಕೊಲೆ ಮಾಡಿ ಹಾಕಿದ್ದ ಕಾಲ ಇತ್ತು. ಆಗ ನಮಗೆ ಶಕ್ತಿ ಇರಲಿಲ್ಲ. ಏನೇ ಆದ್ರೂ ಸುಮ್ಮಿನಿರಿ ಅಂತಾ ಹಿರಿಯರು ಹೇಳುತ್ತಿದ್ದರು. ಅದನ್ನ ನಾನು ಉಲ್ಲೇಖ ಮಾಡಿದ್ದೇನೆ ಅಷ್ಟೇ.. ಎಂದರು. ಈಗ ನಮಗೆ ಶಕ್ತಿ ಬಂದಿದೆ.

ನಾವು ಯಾರ ತಂಟೆಗೆ ಹೋಗೋದು ಬೇಡ. ನಮ್ಮ ತಂಟೆಗೆ ಬಂದರೆ ಸುಮ್ನಿರೋದು ಬೇಡ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಇದನ್ನ ವಿವಾದ ಮಾಡೋದು ಸರಿಯಲ್ಲ. ಇಲ್ಲಿಗೆ ನಿಲ್ಲಿಸೋಣ. ಆದ್ರೂ ವಿವಾದ ಮಾಡ್ತೀನಿ ಅಂದರೆ, ನಂಗೇನು ಅಭ್ಯಂತರ ಇಲ್ಲ ಎಂದರು.

ಹಿಂದೂ ಕಾರ್ಯಕರ್ತರ ಕೇಸ್ ವಾಪಸ್‌ಗೆ ನನ್ನ ಬೆಂಬಲ : ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗೋ ವಿಚಾರದಲ್ಲಿ ಸಾಕಷ್ಟು ಕೇಸ್‌ಗಳು ಹಾಕಿದ್ರು. ದಕ್ಷಿಣ ಕನ್ನಡದಲ್ಲಿ ಬೆಳಗಿನ ಜಾವ ಕರುಗಳನ್ನ ಕಳ್ಳತನ ಮಾಡ್ತಿದ್ರು. ಅದನ್ನ ಮಹಿಳೆಯರು ಪ್ರಶ್ನೆ ಮಾಡಿದ್ರೇ, ಚಾಕು ತೋರಿಸಿ ಬೆದರಿಕೆ ಹಾಕ್ತಿದ್ರು ಎಂದು ಕಿಡಿ ಕಾರಿದರು.

ಕಾಂಗ್ರೆಸ್​​ ಆಡಳಿತದಲ್ಲಿ ಕೋಮುವಾದಿಗಳನ್ನ ಮಟ್ಟ ಹಾಕ್ತೀನಿ ಅಂತಾ ಹೇಳಿದ್ರು. ಹೀಗಾಗಿ, ಅವರ ಕಾಲದಲ್ಲಿ ಹಲವು ಸುಳ್ಳು ಕೇಸ್‌ಗಳನ್ನ ಹಾಕಿದ್ರು. ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಕೆಲವು ಕೇಸ್ ವಾಪಸ್ ಪಡೆದಿದ್ರು. ಇನ್ನೂ ಕೆಲವು ಕೇಸ್‌ಗಳಿವೆ, ಅವುಗಳನ್ನು ದಾಖಲೆ ಪರಿಶೀಲಿಸಿ ಕ್ರಮ ತೆಗೆದುಕೊಳ್ತಾರೆ. ಅದಕ್ಕೆ ನನ್ನ ಬೆಂಬಲ ಇದೆ ಎಂದರು.

ಜಮೀರ್ ಅಲ್ಲಾಹು ಮೇಲೆ ಆಣೆ ಮಾಡಲಿ : ಬಿಜೆಪಿಯವರು ನನ್ನ ವಿರುದ್ಧ ಇಡಿಗೆ ದೂರು ನೀಡಿದ್ದಾರೆ ಎಂಬ ಜಮೀರ್ ಅಹ್ಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಲ್ಲಾಹು ಮೇಲೆ ಆಣೆ ಮಾಡಲಿ. ನಂತರ ED ವಿಚಾರದ ಬಗ್ಗೆ ಮಾತನಾಡಲಿ ಎಂದರು. ಅಲ್ಲದೆ, IMAನಲ್ಲಿ ಮುಸ್ಲಿಂ ಬಡವರ ಹಣ ತಿಂದಿಲ್ಲ ಎಂದು ಅವರ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

Last Updated : Aug 10, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.