ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿರುವ ಅವರು, ಆಟಕ್ಕೊಂದು ಕುಂಟು ನೆಪ ಎಂಬಂತೆ ಕೋವಿಡ್ ನಿಮಿತ್ತ ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕದಾದ್ಯಂತ ಮಂಜೂರಾದ ಸರ್ಕಾರಿ ಖಾಲಿ ಹುದ್ದೆಗಳ ನೇಮಕಾತಿ ತಡೆ ಹಿಡಿದಿರುವುದು ಪ್ರಾದೇಶಿಕ ಅಸಮತೋಲನದ ಸಂಕೇತ. 371(J) ಅಡಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ಮುಂದುವರೆಸಿ, ಖಾಲಿ ಹುದ್ದೆಗಳನ್ನ ಶೀಘ್ರದಲ್ಲೇ ಭರ್ತಿ ಮಾಡಲು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
-
ಆಟಕ್ಕೊಂದು ಕುಂಟು ನೆಪ ಎಂಬಂತೆ ಕೋವಿಡ್ ನಿಮಿತ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕದಾದ್ಯಂತ ಮಂಜೂರಿ ಆದ ಸರ್ಕಾರಿ ಖಾಲಿ ಹುದ್ದೆಯ ನೇಮಕಾತಿ ತಡೆಹಿಡಿದಿರುವುದು ಪ್ರಾದೇಶಿಕ ಅಸಮತೋಲನದ ಸಂಕೇತ. @CMofKarnataka #COVID19
— Eshwar Khandre (@eshwar_khandre) July 8, 2020 " class="align-text-top noRightClick twitterSection" data="
">ಆಟಕ್ಕೊಂದು ಕುಂಟು ನೆಪ ಎಂಬಂತೆ ಕೋವಿಡ್ ನಿಮಿತ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕದಾದ್ಯಂತ ಮಂಜೂರಿ ಆದ ಸರ್ಕಾರಿ ಖಾಲಿ ಹುದ್ದೆಯ ನೇಮಕಾತಿ ತಡೆಹಿಡಿದಿರುವುದು ಪ್ರಾದೇಶಿಕ ಅಸಮತೋಲನದ ಸಂಕೇತ. @CMofKarnataka #COVID19
— Eshwar Khandre (@eshwar_khandre) July 8, 2020ಆಟಕ್ಕೊಂದು ಕುಂಟು ನೆಪ ಎಂಬಂತೆ ಕೋವಿಡ್ ನಿಮಿತ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕದಾದ್ಯಂತ ಮಂಜೂರಿ ಆದ ಸರ್ಕಾರಿ ಖಾಲಿ ಹುದ್ದೆಯ ನೇಮಕಾತಿ ತಡೆಹಿಡಿದಿರುವುದು ಪ್ರಾದೇಶಿಕ ಅಸಮತೋಲನದ ಸಂಕೇತ. @CMofKarnataka #COVID19
— Eshwar Khandre (@eshwar_khandre) July 8, 2020
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮರು ನೇಮಕಗೊಂಡಿರುವ ಖಂಡ್ರೆ ಜುಲೈ 2ರಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.