ಬೆಂಗಳೂರು: ಕೊರೊನಾ ಹಿನ್ನೆಲೆ ಯಾವುದೇ ಸಂಸ್ಥೆಗಳು ಸಿಬ್ಬಂದಿ ವಜಾಗೊಳಿಸಿದರೆ ಅಥವಾ ವೇತನ ಕಡಿತಗೊಳಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.
ಕೋವಿಡ್ - 19 ತುರ್ತು ಪರಿಸ್ಥಿಯ ಸನ್ನಿವೇಶದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾಮಾನ್ಯ ಅಥವಾ ಗುತ್ತಿಗೆ ಸಿಬ್ಬಂದಿ ಕೆಲಸದಿಂದ ವಜಾ ಮತ್ತು ಅವರ ವೇತನ ಕಡಿತಗೊಳಿಸಬಾರದೆಂದು ಸೂಚಿಸಿದ್ದಾರೆ. ಸಿಬ್ಬಂದಿ ಈ ವೇಳೆ ರಜೆ ಪಡೆದಿದ್ದರೆ, ಅವರ ವೇತನದಲ್ಲಿ ಕಡಿತ ಮಾಡಬಾರದು. ರಜೆ ಪಡೆದ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದಾರೆ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ನಿಯಮ ಉಲ್ಲಂಘನೆಯಾದರೆ ವಿಪತ್ತು ನಿರ್ವಹಣೆ ಕಾಯ್ದೆ 2005 ರಡಿ ದಂಡನೆ ಕ್ರಮಕ್ಕೆ ಒಳಪಡುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ 48 ತಾಸಿನೊಳಗೆ ಸಹಾಯವಾಣಿ ಪ್ರಾರಂಭಿಸಲು ಕ್ರಮ ವಹಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.