ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣಾ ಕೆಲಸಗಳು ಇರುವ ಕಾರಣ (ಫರ್ನೇಸ್ಗಳನ್ನು ಬದಲಾವಣೆ) ಚಿತಾಗಾರವನ್ನು ನಾಳೆಯಿಂದ ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸದ್ಯ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆಗೆ ಪ್ರಮುಖ ಚಿತಾಗಾರವಾಗಿದ್ದ ಸುಮನಹಳ್ಳಿ ವಿದ್ಯುತ್ ಚಿತಾಗಾರವೇ ಸ್ಥಗಿತಗೊಂಡಿದೆ. ಇದರಿಂದ ಉಳಿದ ಹನ್ನೊಂದು ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಲಿದೆ.
ಈಗಾಗಲೇ ಚಿತಾಗಾರ ಬುಕಿಂಗ್ಗಾಗಿ ಜನ ಅರ್ಧ ದಿನ ಆಸ್ಪತ್ರೆಗಳ ಬಳಿಯೇ ಕಾಯುವ ಸ್ಥಿತಿ ಎದುರಾಗಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.