ETV Bharat / state

ಪತ್ರಕರ್ತರಿಗೆ 1 ಕೋಟಿ ವಿಮೆ ಕೋರಿ ಅರ್ಜಿ: ಕೇಂದ್ರ-ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್​‌ ತುರ್ತು ನೋಟಿಸ್​​‌ - ಮಾಧ್ಯಮ ಪ್ರತಿನಿಧಿಗಳಿಗೆ ವಿಮೆ

ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರಲ್ಲಿ ಯಾರಾದರೂ ಮೃತಪಟ್ಟರೆ ಸರ್ಕಾರದಿಂದ 50 ಲಕ್ಷ ರೂ. ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷ ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ವಕೀಲ ಸುನಿಲ್ ಕುಮಾರ್ ಮನವಿ ಮಾಡಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

High Court
ಹೈಕೋರ್ಟ್
author img

By

Published : May 8, 2020, 6:50 PM IST

Updated : May 8, 2020, 7:32 PM IST

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರು ಕೋವಿಡ್‌-19ನಿಂದ‌ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ.‌ ಪರಿಹಾರ ಘೋಸಿಸಲು ಸರ್ಕಾರ ಹಾಗೂ ಮಾಧ್ಯಮ‌ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್‌, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.

ಮಾಧ್ಯಮ ಪ್ರತಿನಿಧಿಗಳ ಹಿತರಕ್ಷಣೆಗಾಗಿ ಕೋರಮಂಗಲ ನಿವಾಸಿ ಜಾಕೊಬ್ ಜಾರ್ಜ್ ಸಲ್ಲಿಸಿರುವ ಪಿಐಎಲ್​‌ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ಈ ಕುರಿತು ವಿವರಣೆ ಕೇಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಹೆಚ್.ಸುನೀಲ್ ಕುಮಾರ್ ವಾದ ಮಂಡಿಸಿ, ಕೊರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಟಿವಿ, ಪತ್ರಿಕೆ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳ ಪ್ರತಿನಿನಿಧಿಗಳು ಕೋವಿಡ್-19 ‌ಸೋಂಕಿತ ಪ್ರದೇಶಗಳು, ಆಸ್ಪತ್ರೆಗಳು ಹಾಗೂ ಸೋಂಕಿತರ ಕುಟುಂಬಗಳ ಸದಸ್ಯರ ಬಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.‌‌

ಇದರಿಂದ ಅವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ.‌ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಇವರು ಕೂಡಾ ಕೊರೊನಾ ವಾರಿಯರ್ಸ್ ಆಗಿದ್ದಾರೆ.‌ ಹೀಗಾಗಿ ಮಾಧ್ಯಮ ಪ್ರತಿನಿಧಿಗಳು, ಏಜೆಂಟರು ಹಾಗೂ ಪತ್ರಿಕಾ ವಿತರಕರಲ್ಲಿ ಯಾರಾದರೂ ಮೃತಪಟ್ಟರೆ ಸರ್ಕಾರದಿಂದ 50 ಲಕ್ಷ ರೂ. ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷ ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ವಕೀಲ ಸುನಿಲ್ ಕುಮಾರ್ ಮನವಿ ಮಾಡಿದರು.

Lawyer Sunil Kumar
ವಕೀಲ ಸುನಿಲ್ ಕುಮಾರ್

ಮಧ್ಯಪ್ರವೇಶಿಸಿದ ಪೀಠ, ಮಾಧ್ಯಮ ಪ್ರತಿನಿಧಿಗಳು ಖಾಸಗಿ ವಲಯಕ್ಕೆ ಸೇರುವುದರಿಂದ ಸರ್ಕಾರಕ್ಕೆ ನಿರ್ದೇಶನ ನೀಡುವುದು ಹೇಗೆಂದು ಪ್ರಶ್ನಿಸಿತು. ಇದಕ್ಕೆ ವಕೀಲರು ಉತ್ತರಿಸಿ, ಮಾಧ್ಯಮ ಪ್ರತಿನಿಧಿಗಳು ಖಾಸಗಿ ವಲಯದಲ್ಲಿ ಕೆಲಸ ಮಾಡಿದರೂ ಅವರ ಕೆಲಸ ಸಮಾಜದ ಹಿತದೃಷ್ಟಿ ಒಳಗೊಂಡಿದೆ ಎಂದರು. ಇದಕ್ಕೆ ಪೀಠ, ಸರ್ಕಾರ ಮತ್ತು ಮಾಧ್ಯಮ ಸಂಸ್ಥೆಗಳು ಒಟ್ಟಾಗಿ ನಿರ್ಣಯ ಕೈಗೊಳ್ಳುವುದು ಸೂಕ್ತವಾಗಿ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಿತು.

ಉದ್ಯೋಗ ಭದ್ರತೆಗೂ ಮನವಿ:

ಇದೇ ವೇಳೆ ಪತ್ರಕರ್ತರ ಉದ್ಯೋಗ ಭದ್ರತೆಯ ಕುರಿತು ಪ್ರಸ್ತಾಪಿಸಿ, ಲಾಕ್​​ಡೌನ್ ಜಾರಿಯಾದ ಬಳಿಕ ಮಾಧ್ಯಮ ಸಂಸ್ಥೆಗಳು ಕೂಡ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿವೆ. ಆ ನಷ್ಟ ಸರಿದೂಗಿಸಲು ಸಂಸ್ಥೆಗಳು ತಮ್ಮ ನೌಕರರ ವೇತನವನ್ನು ಕಡಿತಗೊಳಿಸಿವೆ. ಅನೇಕ ನೌಕರರನ್ನು ಕೆಲಸದಿಂದ ತೆಗೆದು ಹಾಕಿವೆ.‌‌ ಇದರಿಂದಾಗಿ ಮಾಧ್ಯಮ ಪ್ರತಿನಿಧಿಗಳು ಉದ್ಯೋಗ ಭದ್ರತೆಯ ಭೀತಿ ಎದುರಿಸುತ್ತಿದ್ದಾರೆ.

ಜತೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ‌. ಆದ್ದರಿಂದ ಮಾಧ್ಯಮ‌ ಪ್ರತಿನಿಧಿಗಳ ವೇತನ ಕಡಿತಗೊಳಿಸದಂತೆ, ಕೆಲಸದಿಂದ ತೆಗೆಯದಂತೆ ಮತ್ತು ಕೋವಿಡ್-19 ಹರಡುವುದು ಸಂಪೂರ್ಣ ನಿಲ್ಲುವವರೆಗೂ ಪತ್ರಕರ್ತರು ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳ‌ು ಸುರಕ್ಷಿತವಾಗಿ ಮನೆಯಿಂದ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಆಯಾ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಬೇಕು‌ ಎಂದು ವಕೀಲ ಸುನೀಲ್ ಕುಮಾರ್ ಮನವಿ‌ ಮಾಡಿದರು.

Last Updated : May 8, 2020, 7:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.