ETV Bharat / state

ಸಿಲಿಕಾನ್​ ಸಿಟಿಯಲ್ಲಿ ರಸ್ತೆಗಿಳಿಯಲು ಸಜ್ಜಾಗಿವೆ ಇ-ಬಸ್​: ಸರ್ಕಾರದ ಅನುಮತಿಯೊಂದೇ ಬಾಕಿ - prevent air pollution

ಕೇಂದ್ರ ಸರ್ಕಾರದ ಫೇಮ್​ ಸ್ಕೀಮ್​ 2 ಯೋಜನೆ ಅಡಿಯಲ್ಲಿ 300 ಎಲೆಕ್ಟ್ರಾನಿಕ್ ಬಸ್​ಗಳು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಇದರಿಂದ ನಗರದ ವಾಯುಮಾಲಿನ್ಯ ತಡೆಗಟ್ಟಬಹುದು ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್​.ವಿ. ಪ್ರಸಾದ್.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್
author img

By

Published : Aug 20, 2019, 11:56 PM IST

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ರಾಜಧಾನಿಯಲ್ಲಿನ ಪ್ರಯಾಣಿಕರ ಸಂಖ್ಯೆ, ನಗರಕ್ಕೆ ನಿತ್ಯ ಲಕ್ಷಾಂತರ ಪ್ರಯಾಣಿಕರ ಆಗಮನ. ಜನಸಂಖ್ಯೆ ಹೆಚ್ಚಿದಂತೆ ವಾಹನಗಳಿಂದ ಉಂಟಾಗುವ ಮಾಲಿನ್ಯವೂ ಹೆಚ್ಚಾಗುತ್ತಲೇ ಇದೆ. ಮುಖ್ಯವಾಗಿ ಬಸ್​ಗಳಿಂದ ಶೇಕಡಾ 6 ರಷ್ಟು ಮಾಲಿನ್ಯ ಹೊರಸೂಸುತ್ತಿದೆ. ಇದಕ್ಕೆ ಬ್ರೆಕ್​ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್​ ಸ್ಕೀಮ್​ 2 ಯೋಜನೆ ಅಡಿಯಲ್ಲಿ ಇ-ಬಸ್​ (ಎಲೆಕ್ಟ್ರಾನಿಕ್ ಬಸ್) ರಸ್ತೆಗೆ ಇಳಿಯಲಿವೆ.

ಬೆಂಗಳೂರಿನಲ್ಲಿ ರಸ್ತೆಗಿಳಿಯಲಿವೆ ಎಲೆಕ್ಟ್ರಾನಿಕ್ ಬಸ್​ಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸೋಕ್ಕೆ ಸಜ್ಜಾಗಿದ್ದು, ರಾಜ್ಯ ಸರ್ಕಾರದ ಅನುಮತಿಯೊಂದೇ ಬಾಕಿ ಉಳಿದಿದೆ. ಬರೋಬ್ಬರಿ 300 ಎಲೆಕ್ಟ್ರಿಕ್ ಬಸ್​ಗಳು ಸಜ್ಜಾಗಿವೆ.

ಚಾರ್ಜಿಂಗ್​ ಪಾಯಿಂಟ್​ ಎಲ್ಲಿ: ರಸ್ತೆಗೆ ಇಳಿಯುವ ಎಲೆಕ್ಟ್ರಿಕ್ ವಾಹನಗಳಿಗೆ ಬಿಎಂಟಿಸಿ ಡಿಪೋದಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುವುದು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.

ವೋಲ್ವೋ ಬಸ್​ಗಳಿಂದ ನಷ್ಟಕ್ಕೆ ತುತ್ತಾಗಿರೋ ನಗರ ಸಾರಿಗೆ ಸಂಸ್ಥೆಯು, ಅವುಗಳ ಜಾಗದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ನಿಲ್ಲಿಸಲು ಯೋಜನೆ ರೂಪಿಸಿದೆ. ಈಗಾಗಲೇ ಬಿಎಂಟಿಸಿ ಬೋರ್ಡ್‌ ಅನುಮೋದನೆ ಕೊಟ್ಟಿದ್ದು, ಸರ್ಕಾರ ಆದೇಶ ನೀಡಿದ ಕೂಡಲೇ ಕಾರ್ಯೋನ್ಮುಖರಾಗುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚುತ್ತಿರುವ ಬೆಂಗಳೂರಿನ ಮಾಲಿನ್ಯಕ್ಕೆ ಎಲೆಕ್ಟ್ರಿಕ್ ಬಸ್​​ಗಳ ಯೋಜನೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Intro:ಬಿಎಂಟಿಸಿ‌ ಡಿಪೋದಲ್ಲೇ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್; ಇ- ಬಸ್ ಗಳು ರಸ್ತೆಗಿಳಿಯೋಕ್ಕೆ ನೋ ಪ್ರಾಬ್ಲಂ...Body:ಬಿಎಂಟಿಸಿ‌ ಡಿಪೋದಲ್ಲೇ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್; ಇ- ಬಸ್ ಗಳು ರಸ್ತೆಗಿಳಿಯೋಕ್ಕೆ ನೋ ಪ್ರಾಬ್ಲಂ...

ಬೆಂಗಳೂರು: ಮಿತಿ ಮೀರಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು, ತನ್ನ ಒಡಲಿಗೆ ಜನಗಳನ್ನು ಬರಮಾಡಿಕೊಳ್ಳುತ್ತಲೇ ಇದೆ..‌
ರಾಜ್ಯ, ಅಂತರಾಜ್ಯಗಳಿಂದ ಬೆಂಗಳೂರಿಗೆ ಬದುಕ
ಅರಸಿ ಬರುವ ಮಂದಿ ಹೆಚ್ಚಾದಂತೆ, ಅವರೊಟ್ಟಿಗೆ ನಗರದಲ್ಲಿ ಮಾಲಿನ್ಯದ ಮಟ್ಟವು ಹೆಚ್ಚಾಗುತ್ತಿದೆ..
ಅದರಲ್ಲೂ ಶೇಕಡ 6 ರಷ್ಟು ಮಾಲಿನ್ಯದ ಪ್ರಮಾಣ ಬಸ್ಸುಗಳಿಂದ ಬರುತ್ತಿದೆಯಂತೆ..‌

ಹೀಗಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸೋಕ್ಕೆ ಮುಂದಾಗಿದೆ.. ಫೇಮ್ 2 ಸ್ಕೀಮ್ ಅಡಿಯಲ್ಲಿ ಕೇಂದ್ರ ಸರ್ಕಾರ ಬಿಎಂಟಿಸಿ ಗೆ 300 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿದ್ದು, ಟೆಂಡರ್ ಕರೆಯಲು ಸಜ್ಜಾಗಿದೆ.. ಇನ್ನು ಇದಕ್ಕೆ
ರಾಜ್ಯ ಸರ್ಕಾರದ ಅನುಮತಿಯೊಂದೇ ಬಾಕಿ ಉಳಿದಿದೆ..

ಅಂದಹಾಗೇ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಸೋದು ದೊಡ್ಡ ವಿಷಯವಲ್ಲ.. ಆದರೆ ವಾಹನಗಳಿಗೆ ಜಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಹೇಗೆ ಎಂಬ ಪ್ರಶ್ನೆಗೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎನ್ ವಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ಬಿಎಂಟಿಸಿ ಡಿಪೋದಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುವುದು..ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಲ್ಲ ಅಂತಾರೆ.. ಇನ್ನು ವಿದ್ಯುತ್ ಶಕ್ತಿ ಪೋಲಾಗದಂತೆ ನಿಘಾ ವಹಿಸಲಾಗುವುದು ಅಂತ ಮಾಹಿತಿ ನೀಡಿದರು..

ಬೈಟ್: ಎನ್.ವಿ ಪ್ರಸಾದ್, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರು

ಇತ್ತ ವೋಲ್ವೋ ಬಸ್ಸುಗಳಿಂದ ನಷ್ಟಕ್ಕೆ ತುತ್ತಾಗಿರೋ ನಗರ ಸಾರಿಗೆ ಸಂಸ್ಥೆಯು ವೋಲ್ವೋ ಜಾಗದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಹಾಕಲು ಯೋಜನೆ ರೂಪಿಸಿದೆ.. ಈಗಾಗಲೇ ಬೋರ್ಡ್‌ ಅನುಮೋದನೆ ಕೊಟ್ಟಿದ್ದು, ಸರ್ಕಾರದ ಆದೇಶವೊಂದೇ ಬಾಕಿ ಇದೆ..

ದಿನೇ ದಿನೇ ಹದಗೆಡುತ್ತಿರುವ ಬೆಂಗಳೂರಿನ ವಾತಾವರಣಕ್ಕೆ, ಮಹಾನಗರ ಸಾರಿಗೆ ಸಿದ್ದ ಪಡೆಸಿಕೊಂಡಿರುವ ಎಲೆಕ್ಟ್ರಿಕ್ ಬಸ್ಸುಗಳು ಯೋಜನೆ ಫಲ ಕೊಡುತ್ತ, ಮಿತಿ ಮೀರುತ್ತಿರುವ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕುತ್ತಾ ಕಾದು ನೋಡಬೇಕು...

KN_BNG_02_ELETRIC_BUS_CHARGING_POINT_SCRIPT_7201801

Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.