ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿರುವ ಪೀಣ್ಯ ವಿದ್ಯುತ್ ಚಿತಾಗಾರದ ದುರಸ್ತಿ ಹಿನ್ನೆಲೆ 75 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: 3 ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!
ಪೀಣ್ಯ ವಿದ್ಯುತ್ ಚಿತಾಗಾರದಲ್ಲಿ ವಿನ್ಯಾಸದಿಂದ ವರ್ಟಿಕಲ್ ಕಾಯಿಲ್ ಮೌಂಟಿಂಗ್ ವಿನ್ಯಾಸಕ್ಕೆ ಬದಲಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಜನವರಿ 30 ರಿಂದ ಏಪ್ರಿಲ್ 15 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ.
ಓದಿ: ಹುಟ್ಟುಹಬ್ಬದ ನಿಮಿತ್ತ ಗೋ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ: ಶುಭಕೋರಿದ ಅಮಿತ್ ಶಾ
ದಹನ ಕ್ರಿಯೆಗಾಗಿ ಮೃತ ದೇಹಗಳನ್ನು ತರುವ ಸಾರ್ವಜನಿಕರು ಹತ್ತಿರದ ಮೇಡಿ ಅಗ್ರಹಾರ ಅಥವಾ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದು ಎಂದು ರಾಜರಾಜೇಶ್ವರಿ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ