ETV Bharat / state

ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳಿಂದ ಲಾಭ; ಡೀಸೆಲ್‌ ಬಸ್‌ಗಳು ಹಂತ ಹಂತವಾಗಿ ಸ್ಥಗಿತ

ಎಲೆಕ್ಟ್ರಿಕ್ ಬಸ್‌ಗಳು ಸಾರಿಗೆ ಸಂಸ್ಥೆಗೆ ಹೆಚ್ಚು ಲಾಭ ತಂದುಕೊಡುತ್ತಿವೆ. ಡೀಸೆಲ್ ಬಸ್​ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

electric buses
ಎಲೆಕ್ಟ್ರಿಕ್ ಬಸ್‌ಗಳು
author img

By ETV Bharat Karnataka Team

Published : Sep 11, 2023, 6:54 AM IST

ಬೆಂಗಳೂರು : ನಗರದಲ್ಲಿ ಬಿಎಂಟಿಸಿ ಕಾರ್ಯಾಚರಣೆಗಿಳಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಜನಪ್ರಿಯತೆಯೊಂದಿಗೆ ನಿಗಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಡುತ್ತಿವೆ. ಇ-ಬಸ್‌ಗಳ ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರಸ್ನೇಹಿ ವ್ಯವಸ್ಥೆಗಳ ಬಗ್ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿ ಒಂದೂವರೆ ವರ್ಷಗಳು ಕಳೆಯುತ್ತಿದೆ. ನಗರದಲ್ಲಿ ಬಿಎಂಟಿಸಿ 390 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗಿಳಿಸಿದೆ. ಪ್ರತಿದಿನ ಸುಮಾರು 4 ಲಕ್ಷ ಜನ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಇವುಗಳ ಆದಾಯ ಸಾಮಾನ್ಯ ಬಸ್‌ಗಳಿಗಿಂತ ಅಧಿಕ. ಮೊದಲ ಬಾರಿಗೆ ಬಿಎಂಟಿಸಿ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದೆ. ಬಸ್‌ಗಳ ನಿರ್ವಹಣೆಯನ್ನು ನಿಗಮವೇ ನೋಡಿಕೊಳ್ಳುತ್ತಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಡಿಸೆಂಬರ್ 2021ರಲ್ಲಿ 90 ಇ-ಬಸ್‌ಗಳನ್ನು ಖರೀದಿಸಲಾಗಿದೆ. ಆಗಸ್ಟ್ 2022ರ ನಂತರ ಫೇಮ್ 2 ಯೋಜನೆಯಡಿ 300 ಇ-ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಕೇಂದ್ರ ಸರ್ಕಾರದ ಫ್ರೇಮ್-2 ಯೋಜನೆಯಡಿ ಬಿಎಂಟಿಸಿ ಹೊಸದಾಗಿ 921 ಇ-ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಇದೀಗ ನಗರದ 18 ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್​ಗಳು ಸಂಚರಿಸುತ್ತಿವೆ.

ಸಾಮಾನ್ಯ ಬಸ್‌ಗಳಿಗಿಂತ ಆದಾಯ ಪ್ರತಿ ಕಿ.ಮೀಟರ್​ಗೂ 5 ರೂ. ಹೆಚ್ಚು. 9 ಮೀಟರ್ ಉದ್ದದ ಇ - ಬಸ್ ಕಾರ್ಯಾಚರಣೆಯಿಂದ ಪ್ರತಿ ಕಿ.ಮೀ.ಗೆ 51 ರೂಪಾಯಿ ಮತ್ತು 12 ಮೀಟರ್ ಬಸ್‌ಗಳಿಂದ ಪ್ರತಿ ಕಿ.ಮೀಗೆ 48 ರೂಪಾಯಿ ಲಾಭ ಬರುತ್ತಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಆರಂಭವಾಗಲಿದೆ ಡಬ್ಬಲ್ ಡೆಕ್ಕರ್ ಬಸ್ ಜಮಾನ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ: "ಡೀಸೆಲ್ ಬಸ್​ಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಗುವುದು. ಮಾಲಿನ್ಯ ತಗ್ಗಿಸಲು, ಆರಾಮದಾಯಕ ಪ್ರಯಾಣ ಮತ್ತು ಸಾರಿಗೆ ಸಂಸ್ಥೆಗೆ ಹೆಚ್ಚಿನ ಲಾಭ ತಂದುಕೊಡುವಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಹಕಾರಿಯಾಗಿವೆ" ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ : ರೀ ಬೋರ್, ರೀ ಬಾಡಿ ಬಿಲ್ಡ್ : ಲಕ ಲಕ ಹೊಳೆಯುತ್ತಿವೆ ಗುಜರಿ ಸೇರಬೇಕಿದ್ದ ಕೆಎಸ್ಆರ್​ಟಿಸಿ ಬಸ್​ಗಳು!

ಇಂದು ಖಾಸಗಿ ಸಾರಿಗೆ ಬಂದ್- ಬೇಡಿಕೆಗಳೇನು?: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ರಾಜ್ಯದ ಸರ್ಕಾರದ ಶಕ್ತಿ ಯೋಜನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕಳೆದ ಮಧ್ಯರಾತ್ರಿಯಿಂದಲೇ ಬೆಂಗಳೂರಿನಲ್ಲಿ ಸಾರಿಗೆ ಬಂದ್‌ಗೆ ಕರೆ ನೀಡಿದೆ. ಇಂದು ಖಾಸಗಿ ವಾಹನಗಳ ಸೇವೆ ಸ್ಥಗಿತವಾಗಲಿದ್ದು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆಯಿಂದಾಗಿ ನಷ್ಟಕ್ಕೆ ಸಿಲುಕಿರುವ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಚಾಲಕರಿಗೆ ಮಾಸಿಕವಾಗಿ 10 ಸಾವಿರ ರೂಪಾಯಿ ಪರಿಹಾರಧನ ನೀಡಬೇಕು, ಬೈಕ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುತ್ತಿದೆ.

ಇದನ್ನೂ ಓದಿ : ಖಾಸಗಿ ವಾಹನ ಚಾಲಕರ ಮಾಲೀಕರ ಮುಷ್ಕರ: ಖಾಸಗಿ ಶಾಲಾ ಮಕ್ಕಳಿಗೆ ರಜೆ ಗೊಂದಲ.. ಒಕ್ಕೂಟದಿಂದ ಹೊರಬೀಳದ ಸ್ಪಷ್ಟ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.