ಬೆಂಗಳೂರು: ಈ ಸರ್ಕಾರ ಉಳಿಯಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ ಎಂದೆಲ್ಲಾ ಹೇಳಿಕೆ ನೀಡಿದ್ದವರದು ಈಗ ಖೇಲ್ ಖತಂ, ನಾಟಕ್ ಬಂದ್ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿಟಿ ರವಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಫಲಿತಾಂಶದ ಕುರಿತು ಮಾತನಾಡಿದ ಸಚಿವ ಸಿಟಿ ರವಿ, ಮಾಜಿ ಸಿಎಂ ಸಿದ್ದರಾಮಯ್ಯ ಈ ಸರ್ಕಾರ ಉಳಿಯಲ್ಲ ಎಂದು ತಿರುಕನ ಕನಸು ಕಾಣುತಿದ್ದಾರೆ. ಅವರಿಗೆ ಐದು ಸೀಟುಗಳು ಬರುವುದೇ ಹೆಚ್ಚು ಎನ್ನುತಿದ್ದರು. ಆದರೆ, ಸಮೀಕ್ಷೆಗಳ ಪ್ರಕಾರ ಹನ್ನೆರಡು ಸೀಟ್ಗಳವರೆಗೂ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದ ಜನ ಸ್ಥಿರ ಸರ್ಕಾರದ ಪರ ಒಲವು ತೋರಿಸಿದ್ದಾರೆ ಅಂತಾ ಸಮೀಕ್ಷೆ ಹೇಳ್ತಿದೆ. ಫಲಿತಾಂಶಕ್ಕೆ ಕಾಯೋಣ ಎಂದರು.
ಡಿಸಿಎಂ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿ, ಖಂಡಿತ ಹನ್ನೆರಡು ಸ್ಥಾನಕ್ಕಿಂತ ಹೆಚ್ಚು ಕಡೆಗಳಲ್ಲಿ ಬಿಜೆಪಿ ಗೆಲ್ಲುತ್ತೆ. ಇದನ್ನು ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶದಲ್ಲಿ ನೋಡಬಹುದು ಎಂದರು.