ETV Bharat / state

ಕೆಲಸ ಮಾಡಿ, ಇಲ್ಲವೇ ವರ್ಗಾವಣೆ ಮಾಡಿಸ್ಕೊಂಡು ಹೋಗಿ: ಬಿಬಿಎಂಪಿ ಮೇಯರ್ ಗರಂ

ಅನುದಾನ ಇದ್ದರೂ ಸರಿಯಾದ ಸಮಯಕ್ಕೆ ಕರ್ತವ್ಯ ನಿಷ್ಠೆ ಮೆರೆಯದ ಅಧಿಕಾರಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ತರಾಟೆಗೆ ತೆಗೆದುಕೊಂಡರು.

ಕೆಲಸ ಮಾಡಿ ಇಲ್ಲವೇ ವರ್ಗಾವಣೆ ತೆಗೆದುಕೊಂಡು ಹೋಗಿ: ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕ ಖಡಕ್ ಆದೇಶ
author img

By

Published : Aug 22, 2019, 9:13 AM IST

ಬೆಂಗಳೂರು: ಸಾಕಷ್ಟು ಅನುದಾನ ಇದ್ದರೂ ರಸ್ತೆ ಗುಂಡಿಗಳನ್ನು ಮುಚ್ಚದೇ ಪಾಲಿಕೆಗೆ ಕೆಟ್ಟ ಹೆಸರು ತರುತ್ತಿರುವ ಎಂಜಿನಿಯರ್ ವಿಭಾಗದ ಅಧಿಕಾರಿಗಳ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಗರಂ ಆಗಿದ್ದಾರೆ‌.

ಅಧಿಕಾರಿಗಳ ವಿರುದ್ಧ ಮೇಯರ್ ಗಂಗಾಂಬಿಕೆ ಗರಂ

ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗಿ. ಕೆಲಸ ಮಾಡಲು ಕಷ್ಟವೆನಿಸಿದರೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋಗಿಬಿಡಿ ಎಂದು ನಗರದ ಪೂರ್ವ ವಲಯದ ರಸ್ತೆ ಗುಂಡಿಗಳು, ಮಣ್ಣು ರಾಶಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದ್ರು.

ರಸ್ತೆ ಗುಂಡಿಯಿಂದ ಸಾರ್ವಜನಿಕರಿಗೆ ಅಪಘಾತವಾದ್ರೆ, ರಸ್ತೆಗಳಲ್ಲಿ ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡ್​​ಗಳನ್ನು ಅಳವಡಿಸದೇ ಅಪಘಾತಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಅಧಿಕಾರಿಗಳೇ ಪಾವತಿಸಬೇಕಾಗುತ್ತದೆ ಎಂದು ಖಡಕ್​ ಆಗೇ ನುಡಿದರು. ಜೊತೆಗೆ ಗುತ್ತಿಗೆದಾರರಿಗೆ ಬ್ಯಾರಿಕೇಡ್ ಅಳವಡಿಸಿ ಕೆಲಸ ಮಾಡುವಂತೆ ತಿಳಿಸಿ ಎಂದು ಈ ವೇಳೆ ಸೂಚಿಸಿದರು.

ಅನಂತರ ಪಾಲಿಕೆ ಪ್ರಧಾನ ಅಭಿಯಂತರರಾದ ಎಂ.ಆರ್.ವೆಂಕಟೇಶ್ ಮಾತನಾಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್​​ಗಳು ವಾರ್ಡ್​ಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ವರದಿಯನ್ನು ಪ್ರತಿ ತಿಂಗಳೂ ಹೈಕೋರ್ಟ್​ಗೆ ಸಲ್ಲಿಸಬೇಕು. ಆದ್ದರಿಂದ ಎಲ್ಲರೂ ತಮ್ಮ ಕೆಲಸವನ್ನು ಚಾಚು ತಪ್ಪದೆ ನಿರ್ವಹಿಸಲೇಬೇಕು ಎಂದರು‌.

ಒ.ಎಫ್.ಸಿ ಕೇಬಲ್ ತೆರವುಗೊಳಿಸಿ:

ವಾರ್ಡ್​ಗಳಲ್ಲಿ ಮರ, ಮೇಲ್ಸೇತುವೆ, ಕೆಳ ಸೇತುವೆ, ವಿದ್ಯುತ್ ಕಂಬಗಳ ಮೂಲಕ ಸಂಪರ್ಕ ಪಡೆದಿರುವ ಒಎಫ್​​ಸಿ ಕೇಬಲ್​​ಗಳನ್ನು ಇಂದಿನಿಂದಲೇ ತೆರವು ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.

Intro:ಬೆಂಗಳೂರಲ್ಲಿ ಕೆಲಸ ಮಾಡಿ ಇಲ್ಲವೇ ವರ್ಗಾವಣೆ ತೆಗೆದುಕೊಂಡು ಹೋಗಿ- ಅಧಿಕಾರಿಗಳಿಗೆ ಮೇಯರ್ ಖಡಕ್ ಆದೇಶ

ಬೆಂಗಳೂರು- ಸಾಕಷ್ಟು ಅನುದಾನ ಇದ್ದರೂ, ರಸ್ತೆಗುಂಡಿಗಳನ್ನು ಮುಚ್ಚದೇ ಪಾಲಿಕೆಗೆ ಕೆಟ್ಟ ಹೆಸರು ತರುತ್ತಿರುವ ಇಂಜಿನಿಯರ್ ವಿಭಾಗದ ಅಧಿಕಾರಿಗಳ ವಿರುದ್ಧ ಮೇಯರ್ ಗಂಗಾಂಬಿಕೆ ಗರಂ ಆದ್ರು‌.
ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗಿ. ಕೆಲಸ ಮಾಡಲು ಕಷ್ಟವೆನಿಸಿದರೆ ವರ್ಗಾವಣೆ ಮಾಡಿಕೊಂಡು ಬೇರೆ ಕಡೆ ಹೋಗಿಬಿಡಿ ಎಂದು ನಗರದ ಪೂರ್ವ ವಲಯದ ರಸ್ತೆ ಗುಂಡಿಗಳು, ಮಣ್ಣು ರಾಶಿ(ಡೆಬ್ರಿಸ್), ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದ್ರು.
ರಸ್ತೆಗಳಲ್ಲಿ ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡ್ ಗಳನ್ನು ಅಳವಡಿಸದೇ ಇದ್ದರೆ ಅಪಘಾತಗಳು ಸಂಭವಿಸುತ್ತವೆ. ಗುತ್ತಿಗೆದಾರರಿಗೆ ಬ್ಯಾರಿಕೇಡ್ ಅಳವಡಿಸಿ ಕೆಲಸ ಮಾಡುವಂತೆ ತಿಳಿಸಿ ಎಂದರು.
ಪಾಲಿಕೆ ಪ್ರಧಾನ ಅಭಿಯಂತರರಾದ ಎಂ.ಆರ್.ವೆಂಕಟೇಶ್ ರವರು ಮಾತನಾಡಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ವಾರ್ಡ್ ಗಳಲ್ಲಿ ಏನೆಲ್ಲಾ ಕ್ರಮಗಳು ಕೈಗೊಂಡಿದ್ದಾರೆ ಎಂಬ ವರದಿಯನ್ನು ಪ್ರತಿ ತಿಂಗಳೂ ಹೈಕೋರ್ಟ್ ಗೆ ಸಲ್ಲಿಸಬೇಕು. ಆದ್ದರಿಂದ ಎಲ್ಲರೂ ತಮ್ಮ ಕೆಲಸವನ್ನು ಚಾಚು ತಪ್ಪದೆ ನಿರ್ವಹಿಸಲೇಬೇಕು ಎಂದು ತಿಳಿಸಿದರು‌.
ಒ.ಎಫ್.ಸಿ ಕೇಬಲ್ ತೆರವುಗೊಳಿಸಿ
ವಾರ್ಡ್ ಗಳಲ್ಲಿ ಮರ, ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಕಂಬಗಳ ಮೂಲಕ ಸಂಪರ್ಕ ಪಡೆದಿರುವ ಒಫ್.ಸಿ ಕೇಬಲ್ ಗಳನ್ನು ಇಂದಿನಿಂದಲೇ ತೆರವು ಮಾಡಲು ಕ್ರಮವಹಿಸಬೇಕು ಎಂದು ಮೇಯರ್ ಸೂಚಿಸಿದರು.
ಬಳಿಕ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳ ಕುರಿತ ಸಭೆ ನಡೆಸಿದರು. ಸಾರ್ವಜನಿಕರಿಗೆ ಸಮಸ್ಯೆಯಾದರೆ ಪ್ರಶ್ನಿಸುವುದು ಜನಪ್ರತಿನಿಧಿಗಳು ಹಾಗೂ ಪಾಲಿಕೆ ಆಯುಕ್ತರನ್ನು ಮಾತ್ರ. ಅಧಿಕಾರಿಗಳನ್ನು ಬಂದು ಯಾರೊಬ್ಬರೂ ಪ್ರಶ್ನೆ ಮಾಡುವುದಿಲ್ಲ. ಹಾಗಾಗಿ ಆಯಾ ವಾರ್ಡ್ ಗಳ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಎಚ್ಚರಿಸಿದರು.
ರಸ್ತೆಗುಂಡಿಯಿಂದ ಸಾರ್ವಜನಿಕರಿಗೆ ಅಪಘಾತವಾದ್ರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಅಧಿಕಾರಿಗಳೇ ಪಾವತಿಸಬೇಕಾಗುತ್ತದೆ ಎಂದರು.

Kn_Bng_08_mayor_meeting_7202707Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.