ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪದಲ್ಲಿ ಸಿಕ್ಕಿಬಿದ್ದ ಪ್ರತಿಯೊಬ್ಬ ಆರೋಪಿಗಳಿಗೆ ಇಡಿ ಸಂಕಷ್ಟ ಎದುರಾಗಿದೆ. ನಿನ್ನೆ ಸಿಸಿಬಿ ಕಚೇರಿಗೆ ಆಗಮಿಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಗರ ಆಯುಕ್ತ ಕಮಲ್ ಪಂತ್, ಸಿಸಿಬಿ ತನಿಖಾಧಿಕಾರಿ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ವಿಚಾರ ಸದ್ಯ ತನಿಖೆಯಲ್ಲಿ ಬಯಲಾಗಿದೆ.
ಪ್ರಕರಣದಲ್ಲಿ ರಾಗಿಣಿ ದ್ವಿವೇದಿ, ನಟಿ ಸಂಜನಾ, ಕಿಂಗ್ಪಿನ್ ವಿರೇನ್ ಖನ್ನಾ, ರವಿಶಂಕರ್, ರಾಹುಲ್, ಲೂಮ್ ಪೆಪ್ಪರ್, ನಿಯಾಜ್ ಮೇಲೆ ಇಡಿ ಪ್ರಮುಖ ದಾಖಲೆ ಕಲೆಹಾಕಿದೆ. ಡ್ರಗ್ಸ್ ಪ್ರಕರಣದಲ್ಲಿ ವಿದೇಶಿ ಹಣ, ಅಕ್ರಮ ಹಣ, ಹವಾಲ ದಂಧೆ ನಡೆದಿರುವ ಸಾಧ್ಯತೆ ಮೇರೆಗೆ ಇಡಿ ಅಧಿಕಾರಿಗಳು ತನಿಖೆ ನಡೆಸಿ ಇಸಿಐಆರ್ ದಾಖಲಿಸಲಿದೆ.
ಒಂದು ವೇಳೆ ಡ್ರಗ್ಸ್ ಮಾಫಿಯಾ ಆರೋಪದಿಂದ ಹೊರಗಡೆ ಬಂದರೂ ಸಹ ಆರೋಪಿಗಳು ಇಡಿ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ.