ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಪ್ರತಿಷ್ಠಿತ ಬಡಾವಣೆಗಳ ವಿವಿಧ ವಿಸ್ತೀರ್ಣದ ಮೂಲೆ ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಈಗ ಮೂರನೇ ಹಂತದಲ್ಲಿ ಅರ್ಕಾವತಿ ಬಡಾವಣೆ, ಹೆಚ್.ಎಸ್.ಆರ್ ಬಡಾವಣೆ, ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆ, ಜೆ.ಪಿ. ನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ ಒಟ್ಟು 402 ನಿವೇಶನಗಳನ್ನು ಹರಾಜಿಗಿಡಲಾಗಿದೆ.
ನಿವೇಶನಗಳ ಇ-ಹರಾಜು ಪ್ರಕ್ರಿಯೆಯು ದಿನಾಂಕ 09.09.2020 ರ ಬೆಳಿಗ್ಗೆ 11.00 ಗಂಟೆಯಿಂದ ಬಿಡ್ಡಿಂಗ್ ಪ್ರಾರಂಭವಾಗಲಿದೆ. ಸಾರ್ವಜನಿಕರು ಇ-ಪ್ರೊಕ್ಯೂರ್ಮೆಂಟ್ ಮೂಲಕ ಆನ್ಲೈನ್ನಲ್ಲಿ ಬಿಡ್ ಮಾಡಿ, ನಿವೇಶನಗಳನ್ನು ಖರೀದಿಸಬಹುದಾಗಿದೆ.
ಇ-ಹರಾಜು ಪ್ರಕ್ರಿಯೆಯು ಒಟ್ಟು ಆರು ಹಂತದಲ್ಲಿ ನಡೆಯಲಿದ್ದು, ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್ ಮುಕ್ತಾಯವಾಗಲಿದೆ. ಇ-ಹರಾಜು ದಿನಾಂಕ 09.09.2020 ರಂದು ಪ್ರಾರಂಭವಾಗಲಿದ್ದು, ದಿನಾಂಕ 03.10.2020 ರಂದು ಅಂತಿಮವಾಗಿ ಬಿಡ್ಡಿಂಗ್ ಮುಕ್ತಾಯಗೊಳ್ಳಲಿದೆ.
ಹರಾಜಿಗಿರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್ ಅಳವಡಿಸಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಬಿಡ್ದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ. ಇ-ಹರಾಜು ಬಿಡ್ಡಿಂಗ್ 6 ಹಂತದಲ್ಲಿ ಪೂರ್ಣಗೊಳ್ಳಲಿದೆ.
ನೋಟಿಫಿಕೇಶನ್ ಅನುಸಾರ ವೇಳಾಪಟ್ಟಿ
ಮೊದಲನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 1 ರಿಂದ 70 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 09.09.2020, ಬಿಡ್ ಮಾಡಲು ಕೊನೆಯ ದಿನಾಂಕ 25.09.2020
ಎರಡನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 71 ರಿಂದ 140 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 10.09.2020, ಬಿಡ್ ಮಾಡಲು ಕೊನೆಯ ದಿನಾಂಕ 28.09.2020.
ಮೂರನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 141 ರಿಂದ 210 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 11.09.2020, ಬಿಡ್ ಮಾಡಲು ಕೊನೆಯ ದಿನಾಂಕ 29.09.2020.
ನಾಲ್ಕನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 211 ರಿಂದ 280 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 12.09.2020, ಬಿಡ್ ಮಾಡಲು ಕೊನೆಯ ದಿನಾಂಕ 30.09.2020.
ಐದನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 281 ರಿಂದ 350 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 14.09.2020, ಬಿಡ್ ಮಾಡಲು ಕೊನೆಯ ದಿನಾಂಕ 01.10.2020.
ಆರನೇ ಹಂತದಲ್ಲಿ ಅಧಿಸೂಚನೆಯ ಕ್ರಮ ಸಂಖ್ಯೆ 351 ರಿಂದ 402 ರವರೆಗೆ ಬಿಡ್ನ ಪ್ರಾರಂಭ ದಿನಾಂಕ 15.09.2020, ಬಿಡ್ ಮಾಡಲು ಕೊನೆಯ ದಿನಾಂಕ 03.10.2020.