ಬೆಂಗಳೂರು: ಕಬ್ಬನ್ ಪಾರ್ಕ್, ಬೆಂಗಳೂರಿಗರ ಪಾಲಿಗೆ ಜೀವಾಳವಾಗಿರುವ ಸ್ಥಳ. ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಈ ಪಾರ್ಕ್ನಲ್ಲಿ ನಿತ್ಯ ಸಾವಿರಾರು ಜನರು ಬೆಳಗಾದರೆ ವಾಯುವಿಹಾರಕ್ಕೆ ಬರುತ್ತಾರೆ. ಅಷ್ಟೇ ಅಲ್ಲ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಅತೀಯಾದ ವಾಹನಗಳ ಓಡಾಟವೇ ಉದ್ಯಾನದಲ್ಲಿರುವ ಹಸಿರಿಗೆ ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಇದಕ್ಕಾಗಿಯೇ ಈಗಾಗಲೇ ಅಲ್ಲಿನ ನಡಿಗೆದಾರರು ಕಬ್ಬನ್ ಪಾರ್ಕ್ ಒಳಗೆ ವಾಹನ ನಿಷೇಧ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ.
ನಿತ್ಯ ನೂರಾರು ವಾಹನಗಳಿಂದ ಹೊರ ಬರುತ್ತಿರುವ ವಿಷಗಾಳಿ ಹೀರಿ ಮರಗಳು ನರಳಿ ಸಾಯುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿಯೇ ಕಳೆದ 2018ರಲ್ಲಿ ಜರ್ಮನ್ ಮಷಿನ್ವೊಂದನ್ನ ಖಾಸಗಿ ಕಂಪೆನಿಯೊಂದು ಅಳವಡಿಸಿತ್ತು. ಹಸಿರಿಗೆ ಕಂಟಕವಾಗಿದ್ದ ವಾಹನಗಳಿಂದ ಹೊರ ಬರುವ ಕಾರ್ಬನ್ ಡೈ ಆಕ್ಸೈಡ್ ಹೋಗಲಾಡಿಸಲು "ಡಸ್ಟ್ ಈಟರ್" ಮಷಿನ್ ಅಳವಡಿಸಲಾಗಿತ್ತು. ಇದು ವಿಷಾನಿಲವನ್ನ ಕ್ಷರ್ಣಾರ್ಧದಲ್ಲಿ ಹೀರಿಕೊಳ್ಳುತ್ತೆ ಅನ್ನೋ ಕಾರಣಕ್ಕೆ ಅಳವಹಿಸಲಾಗಿತ್ತು.
ಈಗ ಆ ಯಂತ್ರ ಆಟಕ್ಕೆ ಉಂಟು ಲೆಕ್ಕಿಲ್ಲ ಎನ್ನುವಂತಾಗಿದೆ. ಯಾಕೆಂದರೆ ಯಂತ್ರವನ್ನ ವಿಶ್ಲೇಷಣೆ ಮಾಡಿದಾಗ ಕೇವಲ ಶೇ.5-6 % ನಷ್ಟು ಅಷ್ಟೇ ವಿಷ ಅನಿಲ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಕಬ್ಬನ್ ಪಾರ್ಕ್ನ ಎಲ್ಲ ಕಡೆ ಅಳವಹಿಸಬೇಕು ಅಂತಿದ್ದ ಚಿಂತನೆ-ಯೋಜನೆ ಕೈ ಬಿಡಲಾಗಿದೆ. ಪ್ರಾಯೋಗಿಕವಾಗಿ ಇದನ್ನ ಕಬ್ಬನ್ ಪಾರ್ಕ್ನ ಹಲವೆಡೆ ಅಳವಡಿಸಲಾಗಿತ್ತು. ಜೊತೆಗೆ ಡಸ್ಟ್ ಈಟರ್ ಕಾರ್ ಕೂಡ ಓಡಾಲಿದ್ದು, ಇದು ಶೇ. 85 ರಷ್ಟು ಮಾಲಿನ್ಯ ಕಡಿಮೆ ಮಾಡಲಿದೆ ಅಂತ ಅಂದುಕೊಂಡವರಿಗೆ ಸದ್ಯ ನಿರಾಸೆಯಾಗಿದೆ. ಹೀಗಾಗಿ, ಏರ್ ಪ್ಯೂರಿಫೈ ಮಿಷನ್ಗಳಿಗಿಂತ ಅನಿಲ ಹೀರಿಕೊಳ್ಳುವ ಹಲವು ಮರಗಳನ್ನ ಬೆಳೆಸೋದೇ ಉತ್ತಮ ಅಂತಾರೆ ಅಧಿಕಾರಿಗಳು. ಮರಗಳೇ ಶೇ. 30 ರಷ್ಟು ಹೀರಿಕೊಳ್ಳುವುದರಿಂದ ಅದನ್ನೇ ನೆಟ್ಟರೆ ಉಪಯುಕ್ತವಾಗಲಿದೆ.