ಬೆಂಗಳೂರು: ದುನಿಯಾ ವಿಜಯ್ ನಟನೆ ಜೊತೆಗೆ ಫಸ್ಟ್ ಟೈಮ್ ಡೈರೆಕ್ಷನ್ ಕ್ಯಾಪ್ ತೊಟ್ಟಿರುವ ಚಿತ್ರ ಸಲಗ. ಈ ಚಿತ್ರ ಭೂಗತ ಲೋಕದ ಕಥೆ ಆಧರಿಸಿರುವ ಹಿನ್ನೆಲೆಯಿಂದಾಗಿ ಶೂಟಿಂಗ್ ಭರದಿಂದ ಸಾಗಿದೆ.
ಸದ್ಯ 40 ದಿನ ಚಿತ್ರೀಕರಣ ಮಾಡ್ತಾ ಇರೋ ಸಲಗ ಚಿತ್ರತಂಡ, ಹಳೆ ಇತಿಹಾಸ ಇರುವ ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ಯಾಂಪಸ್ನಲ್ಲಿ ಟೆಂಟ್ ಹಾಕಿದೆ.
ಕಾಲೇಜ್ ಎಪಿಸೋಡ್ಗಳನ್ನ, ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಕ್ಯಾಂಪಸ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಡಾಲಿ ಧನಂಜಯ್ ಸಲಗ ಅಡ್ಡಕ್ಕೆ ಎಂಟ್ರಿಯಾಗಿದ್ದಾರೆ. ಇದರ ಜೊತೆಗೆ ಕಾಕ್ರೋಚ್ ಸುಧಿ, ಸಂಜನಾ ಆನಂದ್ ಕೂಡ ಸಲಗ ಟೀಂನಲ್ಲಿ ಒಬ್ಬರಾಗಿದ್ದಾರೆ. ಇನ್ನು ಟಗರು ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರು ಸಲಗ ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದಿದೆ.
ಈ ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು, ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ. ಟಗರು ಸಿನಿಮಾ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ಸಲಗಕ್ಕೂ ಬಂಡವಾಳ ಹೂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಲಗ ಬಿಡುಗಡೆ ಆಗುವ ಸಾಧ್ಯತೆಯಿದೆ.