ETV Bharat / state

ಸಿಸಿಬಿ ಪೊಲೀಸರಿಂದ ಮತ್ತೊಬ್ಬ ಡ್ರಗ್ ಪೆಡ್ಲರ್​ ಬಂಧನ - Sandalwood Drug Link

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಡ್ರಗ್​ ಪೆಡ್ಲರ್​ ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿಗೆ ಸ್ಯಾಂಡಲ್​ ವುಡ್​ ಡ್ರಗ್ ದಂಧೆ ಜೊತೆ ನಂಟು ಇದೆ ಎಂದು ಹೇಳಲಾಗ್ತಿದೆ.

Drug peddler arrested by Bengaluru CCB police
ಬೆಂಗಳೂರು ಸಿಸಿಬಿ ಪೊಲೀಸರಿಂದ ಡ್ರಗ್ ಪೆಡ್ಲರ್​ ಬಂ
author img

By

Published : Nov 5, 2020, 3:36 PM IST

ಬೆಂಗಳೂರು : ರಾಜ್ಯದಲ್ಲಿ ಡ್ರಗ್ ದಂಧೆಯನ್ನು ಮಟ್ಟ ಹಾಕಲು ಮುಂದಾಗಿರುವ ಸಿಸಿಬಿ ಪೊಲೀಸರು,ನಗರದಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್​ನ್ನು ಖೆಡ್ಡಾಗೆ ಕೆಡವಿದ್ದಾರೆ.

ಸುಜಯ್ ಬಂಧಿತ ಡ್ರಗ್ ಪೆಡ್ಲರ್. ಈತ ಡಾರ್ಕ್​ನೆಟ್ ಮೂಲಕ ಅಕ್ರಮವಾಗಿ ಡ್ರಗ್​ ಮತ್ತು ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಂಧಿತನಿಂದ 15 ಲಕ್ಷಕ್ಕೂ ಹೆಚ್ಚು ಬೆಲೆಯ 500 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಸಿಸಿಬಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ. ಈತ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ ರವಾನೆ ಮಾಡುತ್ತಿದ್ದ. ಅಲ್ಲದೆ, ಈಗಾಗಲೇ ಬಂಧಿತರಾಗಿರುವ ಕೆಲ ಸ್ಯಾಂಡಲ್​ವುಡ್​ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಕುರಿತು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.